Wednesday, January 22, 2025

ಬಿಜೆಪಿಯವರ ಸಾಧನೆ ಶೂನ್ಯವಾಗಿದೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಜನೋತ್ಸವ ಬಿಟ್ಟು ಸಾರ್ವಕರ್ ಉತ್ಸವ ಮಾಡ್ತಿದ್ದಾರೆ. ಬಿಜೆಪಿಯವರ ಸಾಧನೆ ಶೂನ್ಯವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನೋತ್ಸವ ಮಾಡಲು ಸರ್ಕಾರದ ಪ್ರಯತ್ನ ನಡೆದಿತ್ತು. ಜನರ ಆಕ್ರೋಶದಿಂದ ಎರಡು ಮೂರು ಬಾರಿ ಮುಂದೂಡಲಾಯಿತು. ಬಿಜೆಪಿಯವರ ಸಾಧನೆ ಶೂನ್ಯವಾಗಿದೆ. ಜನೋತ್ಸವ ಬಿಟ್ಟು ಸಾರ್ವಕರ್ ಉತ್ಸವ ಮಾಡ್ತಿದ್ದಾರೆ. ಬಿಜೆಪಿಯವರದ್ದು ವಾಟ್ಸಾಪ್ ಯೂನಿರ್ಸಿಟಿ. ಹಾಗಾಗಿ ಅದರಲ್ಲಿ ಏನೂ ಇರುವುದಿಲ್ಲ ಎಂದರು.

ಇನ್ನು, ೧೯೦೬ ರಲ್ಲಿ ಸಾರ್ವಕರ್ ವಿದ್ಯಾಭ್ಯಾಸ ಲಾ ಓದಲು ಲಂಡನ್ ಗೆ ಹೋಗ್ತಾರೆ. ಅದಕ್ಕೂ ಮೊದಲು ಅಭಿನವ ಭಾರತ ಸಂಸ್ಥೆ ಸ್ಥಾಪಿಸ್ತಾರೆ. ಎಎನ್ ಟಿ ಜಾನ್ಸನ್ ನಾಸಿಕ್ ಕಲೆಕ್ಟರ್ ಆಗಿರ್ತಾರೆ. ಸ್ಥಳೀಯರು ನಾಟಕವನ್ನ ಆಯೋಜಿಸಿರ್ತಾರೆ. ಆ ನಾಟಕಕ್ಕೆ ಅಭಿನವ ಭಾರತದ ಸದಸ್ಯರು ಗುಂಡಿಟ್ಟು ಕೊಲ್ತಾರೆ. ಕಲೆಕ್ಟರ್ ಜಾಕ್ಸನ್ ನನ್ನ ಕೊಲ್ತಾರೆ. ಈ ಅಭಿನವ ಸಂಸ್ಥೆಯ ಅಧ್ಯಕ್ಷರು ಸಾರ್ವಕರ್. ಜಾಕ್ಸನ್ ಕೊಂದ ಪಿಸ್ತೂಲ್ ಲಂಡನ್ ನಿಂದ ಬಂದಿರುತ್ತೆ. ಹಾಗಾಗಿ ಸಾರ್ವಕರ್ ಅರೆಸ್ಟ್ ಮಾಡಲು ನಿರ್ಧಾರಿಸುತ್ತಾರೆ. ಲಂಡನ್ ಗೆ ತೆರಳಿದ್ದ ಸಾರ್ವಕರ್ ಅವರನ್ನ ಅರೆಸ್ಟ್ ಮಾಡ್ತಾರೆ. ಸ್ಕಾಟ್ ಲೆಂಡ್ ನಲ್ಲೇ ಅವರನ್ನ ಅರೆಸ್ಟ್ ಮಾಡ್ತಾರೆ ಎಂದು ಹೇಳಿದರು.

ಅದಲ್ಲದೇ, ಭಾರತಕ್ಕೆ ಅವರು ಬರುವುದೇ ಇಲ್ಲ. ವಿಚಾರಣೆಗೆ ಹಾಜರಾಗದಿರಲು ಪಿಟಿಶನ್ ಹಾಕ್ತಾರೆ. ನಂತರ ಭಾರತಕ್ಕೆ ಸಾರ್ವಕರ್ ವಾಪಸ್ ಆಗ್ತಾರೆ. ಸಾರ್ವಕರ್ ದೇಶಭಕ್ತರು ಅಂತ ಹೇಳ್ತಾರೆ. ಸಾರ್ವಕರ್ ಬಾಂಬೆ ಹೈಕೋರ್ಟ್ ಗೆ ಹಾಜರಾಗಬೇಕು. ಸಾರ್ವಕರ್ ಪರ ಬ್ಯಾಪಿಸ್ಟ್ ವಾದ ಮಾಡ್ತಾರೆ. ಈ ಬ್ಯಾಪಿಸ್ಟ್ ಪ್ರಸಿದ್ಧ ಕ್ರಿಶ್ಚಿಯನ್ ಲಾಯರ್. ಕಾಲಪಾನಿಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗ್ತಾರೆ. ಸಾರ್ವಕರ್ ಕ್ಷಮಾಪಣೆ ಪತ್ರ ಬರೆಯುತ್ತಾರೆ. ಉಳಿದವರು ಜೈಲಿನ ವ್ಯವಸ್ಥೆ ಬಗ್ಗೆ ಬರೆಯುತ್ತಾರೆ. RSS ,ಬಿಜೆಪಿ ವಿರುದ್ಧ ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES