Friday, November 22, 2024

ಹಲಾಲ್ ಮುಕ್ತ ಗಣೇಶ ಮಾಡಬೇಕು : ಪ್ರಮೋದ್ ಮುತಾಲಿಕ್

ಧಾರವಾಡ : ಗಣೇಶೋತ್ಸವ ಹಿನ್ನೆಲೆ ಪೆಂಡಾಲ್ ಗಳಲ್ಲಿ ಸಾವರ್ಕರ್ ಭಾವಚಿತ್ರ ಇಡುವಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.

ಗಣೇಶ ಮಂಡಳಿಗಳಿಗೆ ಭೇಟಿ ಮಾಡುತ್ತಿರುವ ಮುತಾಲಿಕ್ ಇವತ್ತು ಧಾರವಾಡ ನಗರದ ಶಿವಾಜಿ ವೃತ್ತದಲ್ಲಿ ಗಣೇಶ ಮಂಡಳಿಗೆ ಭಾವಚಿತ್ರ ಕೊಟ್ಟಿದ್ದಾರೆ. ಮೊದಲನೇ ಬಾರಿ ಗಣೇಶ ಪ್ರತಿಷ್ಠಾಪನೆ ಮಾಡುವವರಿಗೆ ಕೊಟ್ಟಿದ್ದೇವೆ. ಸರ್ಕಾರ ಮದರಸಾಗಳ ಬಗ್ಗೆ ಕೆಲ‌ ನಿರ್ಣಯ ತೆಗೆದುಕೊಳ್ಳುತ್ತಿದೆ. ಅದಕ್ಕೆ ನಾನು ಸ್ವಾಗತ ಮಾಡ್ತೆನೆ ಎಂದರು.

ಇನ್ನು, ಮದರಸಾ‌ ಮೂಲಕನೇ ಕಟ್ಟರ ಇಸ್ಲಾಮಿಕ್ ಶಕ್ತಿ ನಿರ್ಮಾಣ ಮಾಡುವ ಕೇಂದ್ರ. ಭಯೋತ್ಪಾದನೆ ತಯಾರು ಮಾಡುವ ಕೇಂದ್ರ ಇವೆ. ಪಾಕಿಸ್ತಾನದಲ್ಲಿ ಇವತ್ತು ಮದರಸಾ ಬ್ಯಾನ್ ಮಾಡಿದ್ದಾರೆ. ಅಂಥ ಮದರಸಾಗಳನ್ನ ಪ್ರೋತ್ಸಾಹ ಕೊಡುವಂತದ್ದು ಸರಿಯಲ್ಲ. ಮಂಡಳಿ ತಯಾರಿಸಿ ಅವರಲ್ಲಿ ದೇಶ ಭಕ್ತಿ ಮುಡಿಸುವದು, ರಾಷ್ಟ್ರ ಗೀತೆ ಹಾಡಿಸುವದು, ರಾಷ್ಟ್ರೀಯ ಹಬ್ಬ ಆಚರಣೆ ಮಾಡುವಂತದ್ದು ಸರಿ ಇದೆ. ಹಿಂದೆ ಸಿದ್ದರಾಮಯ್ಯ ೫೦ ಕೋಟಿ ಅನುದಾನ ಕೊಟ್ಟಿದ್ದರು ಅದನ್ನು ಜಾರಿಗೆ ತರಲು ಹೊರಟಿದ್ದು ಸ್ವಾಗತ ಇದೆ. ಇವರನ್ನ ರಾಷ್ಟ್ರೀಯ ಪ್ರವಾಹಕ್ಕೆ ತರಬೇಕು ಎನ್ನುವುದೇ ನನ್ನ ಅಭಿಪ್ರಾಯ ಎಂದು ಹೇಳಿದರು.

ಅದಲ್ಲದೇ, ಗಣೇಶ ಹಬ್ಬದ ಹಿನ್ನೆಲೆ ಹಲಾಲ್ ಮುಕ್ತ ಗಣೇಶ ಮಾಡಬೇಕು. ಮುಸ್ಲಿಮರ ಜೊತೆ ವ್ಯಾಪಾರ ಮಾಡಬಾರದು. ಹೂವು ಹಣ್ಣು ಅಥವಾ ಲೈಟಿಂಗ್ ಸೌಂಡ್ ಸಿಸ್ಟಮ್ ಎಲ್ಲ ಹಿಂದೂಗಳ ಕಡೆ ತರಬೇಕು ಎಂದು ಆಗ್ರಹ ಮಾಡುತ್ತೇನೆ ಎಂದರು.

RELATED ARTICLES

Related Articles

TRENDING ARTICLES