Wednesday, January 22, 2025

ಕೆಜಿಎಫ್‌ ಬಾಬು’ಗೆ ಕೆಪಿಸಿಸಿ ಶಿಸ್ತು ಸಮಿತಿಯಿಂದ ನೋಟಿಸ್​

ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ 350 ಕೋಟಿ ರೂಪಾಯಿಗಳ ವೆಚ್ಚದ ಯೋಜನೆಗಳ ಪಟ್ಟಿಯನ್ನು ಮಾಡಿದ್ದೀರಾ ಎಂದು ಕೆಜಿಎಫ್‌ ಬಾಬು ಅಲಿಯಾಸ್ ಯೂಸುಫ್ ಷರೀಫ್ ಗೆ ಕಾರಣ ಕೇಳಿ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.

ಪಕ್ಷದ ಹೈಕಮಾಂಡ್​ಗೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಮತಿ ಕೊಡಬೇಕೆಂದು ತಾವು ಜಾಹಿರಾತುಗಳ ಮುಖಾಂತರ ವಿನಂತಿಸಿರುತ್ತೀರಿ, ಈ ಜಾಹೀರಾತುಗಳ ಮುಖಾಂತರ ಪ್ರಚಾರವನ್ನು ಗಿಟ್ಟಿಸಿಕೊಂಡು, ನಂತರ ಈ ಯೋಜನೆಗಳನ್ನು ಅನುಷ್ಠಾನಗೊಳಿಸದೇ ಪಕ್ಷದ ಮೇಲೆ ಗೂಬೆ ಕೂರಿಸುವ ಹುನ್ನಾರವಾಗಿ ಇದು ಕಂಡುಬರುತ್ತಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ನೋಟಿಸ್ ನೀಡಿದ್ದಾರೆ.

ಪಕ್ಷದ ಕಾರ್ಯಕರ್ತರು ಬಡವರಿಗೆ ಸಹಾಯ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷವು ಪ್ರೇರಣೆ ನೀಡುತ್ತದೆ. ಅಲ್ಲದೆ ಕೆಲವು ದೃಶ್ಯ ಮಾದ್ಯಮಗಳಲ್ಲಿ ನಾನು ಚಿಕ್ಕಪೇಟೆಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಟಿಕೇಟ್​ ನೀಡಿಲಿ ಬಿಡಲಿ ನಾನು ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿರುತ್ತೀರಿ. ಇದು ಪಕ್ಷಕ್ಕೆ ಸವಾಲು ಹಾಕಿರುವಂತಿದ್ದಾಗಿದೆ. ಈ ಹೇಳಿಕೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸುತ್ತದೆ. ನಿಮ್ಮ ಈ ಬೇಜವಾಬ್ದಾರಿ ನಡವಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ.

ಕೆಜಿಎಫ್‌ ಬಾಬು ಅವರ 350 ಕೋಟಿ ರೂ ಹೇಳಿಕೆಯನ್ನ ಕೆಪಿಸಿಸಿ ಶಿಸ್ತು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ತಮ್ಮ ವಿವರಣೆಯನ್ನು ಪತ್ರ ತಲುಪಿದ 7 ದಿನಗಳೊಳಗಾಗಿ ಇದಕ್ಕೆ ಉತ್ತರ ನೀಡಬೇಕು. ತಮ್ಮ ವಿವರಣೆಯನ್ನ ಕೆಪಿಸಿಸಿ ಕಛೇರಿಗೆ ಕಳುಹಿಸಿ ಕೊಡಿ ಎಂದು ಕೆಪಿಸಿಸಿ ಶಿಸ್ತು ‌ಸಮಿತಿಯಿಂದ ಕೆಜಿಎಫ್ ಬಾಬುಗೆ ಸೂಚನೆ ನೀಡಲಾಗಿದೆ.

RELATED ARTICLES

Related Articles

TRENDING ARTICLES