Sunday, December 22, 2024

ವಿಶ್ವಾಸ ಮತಯಾಚನೆ ಸಾಬೀತುಪಡಿಸಿದ ಬಿಹಾರ ಸಿಎಂ ನಿತೀಶ್​ ಕುಮಾರ್​

ಬಿಹಾರ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾರಥ್ಯದ ಮಹಾಘಟಬಂಧನ ಸರ್ಕಾರದ ವಿಶ್ವಾಸಮತ ಸಾಬೀತುಪಡಿಸುವ ಮೂಲಕ ವಿಶ್ವಾಸಮತದಲ್ಲಿ ಜಯಗಳಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಅವಕಾಶ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಸಿಎಂ ನಿತೀಶ್​ ಕುಮಾರ್ ನೇತೃತ್ವದ ಸರ್ಕಾರದ ಬಿಹಾರ ವಿಧಾನಸಭೆಯಲ್ಲಿ ನಡೆದ ಬಹುಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದೆ.

ಗಮನಾರ್ಹ ಸಂಗತಿಯೆಂದರೆ, ನಿತೀಶ್​ ಕುಮಾರ್ ನೇತೃತ್ವದ ‘ಮಹಾಘಟಬಂಧನ್’ ಮೈತ್ರಿ ಸರ್ಕಾರದ ಬಹುಮತವನ್ನು ಸಾಬೀತುಪಡಿಸುವ ಮೊದಲು ಬಿಜೆಪಿ ಪಕ್ಷದ ವಿಜಯ್ ಕುಮಾರ್ ಸಿನ್ಹಾ ಅವರು ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಉಪಸ್ಪೀಕರ್ ಮಹೇಶ್ವರ್ ಅಧ್ಯಕ್ಷತೆಯಲ್ಲಿ ಈ ಬಹುಮತ ಪರೀಕ್ಷೆ ನಡೆದಿತ್ತು.

ಈ ಹಿಂದೆ ನಿತೀಶ್​ ಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ತದ ನಂತರ ಬಿಜೆಪಿ ಶಾಸಕರು ನಿತೀಶ್​ ಕುಮಾರ್​ ಅವರ ಜೆಡಿಯು ಪಕ್ಷದ ಶಾಸಕರನ್ನ ಹೈಜಾಕ್​ ಮಾಡುವ ಮುನ್ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಬಿಜೆಪಿ ಸರ್ಕಾರ ಜತೆ ಇದ್ದ ಮೈತ್ರಿಯನ್ನ ಕಳೆದುಕೊಂಡು ನಿತೀಶ್​ ಕುಮಾರ್​ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮಹಾಘಟ್ಬಂಧನ ಪಕ್ಷಗಳ ಮೂಲಕ ಸರ್ಕಾರ ರಚಿಸಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

RELATED ARTICLES

Related Articles

TRENDING ARTICLES