Thursday, January 23, 2025

ಬಿಜೆಪಿ ವಿರುದ್ಧ MB.ಪಾಟೀಲ್ ವಾಗ್ದಾಳಿ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ MB.ಪಾಟೀಲ್​ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ, ಕರ್ನಾಟಕದ ವಾತಾವರಣ ಹಾಳು ಮಾಡಿದೆ ಎಂದರು. ಕರ್ನಾಟಕದ ಮಾಡೆಲ್ ಹಿಂದೆಲ್ಲ ಮಾದರಿಯಾಗಿತ್ತು. ಈಗ ಇವರು ಯುಪಿ ಮಾಡೆಲ್ ಮಾಡಲು ಹೊರಟಿದ್ದಾರೆ. ಯುಪಿ ಅಭಿವೃದ್ಧಿಯಲ್ಲಿ ಕಟ್ಟಕಡೆಯಲ್ಲಿ ಇದೆ. ಅದು ನಮಗೆ ಮಾದರಿಯಾಗತ್ತಾ? ಎಂದರು.

ಅದಲ್ಲದೇ, ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ ತೀವ್ರವಾಗಿದೆ. ಪತ್ರ ಬರೆದರೂ ಮಂತ್ರಿಗಳ ಮೇಲೆ ಯಾಕೆ ಸಿಬಿಐ ಕೇಸ್ ಹಾಕುತ್ತಿಲ್ಲ? ಐಟಿ, ಇಡಿ ರೈಡ್ ಇಲ್ಲ?ಹಿಜಾಬ್ ಹಲಾಲ್ ಆಜಾನ್ ತಂದ್ರು ಯಾವ ಮಹಾನ್ ವ್ಯಕ್ತಿಗಳನ್ನು ಬಿಡಲಿಲ್ಲ. ಈಗ ಮೊಟ್ಟೆ ಪ್ರಕರಣ ವಿಷಯಾಂತರ ತಂತ್ರ ಹಿಡಿದಿದ್ದಾರೆ ಎಂದು ಆರೋಪಿಸಿದರು.

RELATED ARTICLES

Related Articles

TRENDING ARTICLES