ಬೆಂಗಳೂರು : ಇನ್ನು ಸಿದ್ದರಾಮಯ್ಯ ಘೋಷಣೆ ಮಾಡಿದ್ದಂತೆ, ಒಂದು ವೇಳೆ ಈ ಮಡಿಕೇರಿ ಚಲೋ ಕಾರ್ಯಕ್ರಮ ನಡೆದಿದ್ದೇ ಆಗಿದ್ರೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಹೆಚ್ಚಾಗ್ತಿತ್ತು. ಒಂದು ಕಡೆ ಕೊಡಗಿನಲ್ಲಿ ಬಿಜೆಪಿ ಭದ್ರಕೋಟೆಗೂ ಹೊಡೆತ ಬೀಳ್ತಿತ್ತು. ಆದ್ರೆ, ಕಾಂಗ್ರೆಸ್ ಪ್ರತಿಭಟನೆಯನ್ನ ಮುಂದೂಡಿದ್ರಿಂದ ಸರ್ಕಾರಕ್ಕೆ ಲಾಭವಾಗಿದೆ. ಯಾಕಂದ್ರೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಸೇರ್ತಾರೆ ಅಂದ್ರೆ ಅದು ಕಾಂಗ್ರೆಸ್ ಶಕ್ತಿಪ್ರದರ್ಶನವೇ ಆಗ್ತಿತ್ತು. ಕಾರ್ಯಕ್ರಮ ಯಶಸ್ವಿಯಾಗಿದ್ರೆ ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಷ್ಟವಾಗುವ ಸಾಧ್ಯತೆಯಿತ್ತು.
ಆದ್ರೆ, ಇದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನಡೆಯಾದಂತೆ. ಇದೇ ಸನ್ನಿವೇಶವನ್ನು ಬಳಸಿಕೊಂಡು ಕೊಡಗಿನಲ್ಲಿ ನೆಲೆಯೂರೋಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ರು. ಈಗ 144 ಸೆಕ್ಷನ್ ಇರೋದ್ರಿಂದ ಮುಂದೂಡಿಕೆ ಮಾಡಿದ್ದು ಕಾಂಗ್ರೆಸ್‌ಗೆ ಆಗಬೇಕಿದ್ದ ಲಾಭ ಜಸ್ಟ್ ಮಿಸ್ ಆಗಿದೆ. ಇನ್ನು ಕೇವಲ ಮೊಟ್ಟೆ ಎಸೆದಿಲ್ಲ. ಬಟ್ಟೆಗೆ ಕಲ್ಲು ಸುತ್ತಿ ನನ್ನ ಮೇಲೆ ಎಸೆದಿದ್ರು. ಇದೊಂದು ಸರ್ಕಾರಿ ಪ್ರಾಯೋಜಿತ ಪ್ರತಿಭಟನೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ರು.
ಇನ್ನು ಕಾಂಗ್ರೆಸ್ ನಾಯಕರು ಪ್ರತಿಭಟನೆಯನ್ನ ಮುಂದೂಡಿದ್ದಾರೆ. ಆದ್ರೆ, ಬಿಜೆಪಿ ನಾಯಕರು ಕಾಂಗ್ರೆಸ್ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ,ರ್ಯಾಲಿ ಸಮಾವೇಶ ಮಾಡಿದ್ರೆ, ಗಲಾಟೆಯಾಗುತ್ತೆ. ಇದು ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತೆ ಎಂದಿದ್ದಾರೆ.
ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ರೆ ಹೆಣ ಬೀಳುತ್ತೆ. ಹೀಗಾಗಿ, ದೊಡ್ಡ ಗಲಾಟೆಯಾಗಲು ಯಾಕೆ ಅವಕಾಶ ನೀಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಇನ್ನು, ಚಿತ್ರದುರ್ಗದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ದ ಎಂ.ಬಿ.ಪಾಟೀಲ್ ವಾಗ್ದಾಳಿ ಮಾಡಿದ್ರು.
ಒಟ್ನಲ್ಲಿ, ಕೊಡಗಿನಲ್ಲಿ 144 ಸೆಕ್ಷನ್ ಜಾರಿಮಾಡಿರೋದ್ರಿಂದ ಕಾಂಗ್ರೆಸ್ ಮಡಿಕೇರಿ ಚಲೋ ಕಾರ್ಯಕ್ರಮವನ್ನ ಸದ್ಯಕ್ಕೆ ಕೈಬಿಟ್ಟಿದೆ. ಶೀಘ್ರದಲ್ಲೇ ನಾಯಕರ ಸಭೆ ನಡೆಸಿ ದಿನಾಂಕ ಪ್ರಕಟ ಮಾಡೋ ಬಗ್ಗೆ ಸಿದ್ದರಾಮಯ್ಯ ಸ್ಪಷ್ಡನೆ ಕೊಟ್ಟಿದ್ದಾರೆ. ಒಂದು ಕಡೆ ಈ ಪ್ರತಿಭಟನೆ ಮೂಲಕ ಶಕ್ತಿಪ್ರದರ್ಶನ ನಡೆಸೋಕೆ ಹೊರಟಿದ್ದ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ. ಕೊಡುಗು ಜಿಲ್ಲೆಯ ಮೇಲಿನ ಹಿಡಿತಕ್ಕೆ ಬೀಳಲಿದ್ದ ಪೆಟ್ಟಿನಿಂದ ಬಿಜೆಪಿ ಸದ್ಯ ಬಚಾವ್ ಆಗಿದೆ.