Thursday, January 16, 2025

ಸಿಲಿಂಡರ್ ಲೀಕ್​ನಿಂದ ಹೋಟೆಲ್ ಸುಟ್ಟು ಕರಕಲು

ಕೊಪ್ಪಳ : ಹೋಟೆಲ್ ನಲ್ಲಿದ್ದ ಸಿಲಿಂಡರ್ ಲೀಕ್ ಆಗಿ ಭಾರೀ ಅನಾಹುತ ತಪ್ಪಿದೆ. ಈ ಘಟನೆ ಕೊಪ್ಪಳ ನಗರದ ಗಡಿಯಾರ ಕಂಬ ಬಳಿ ನಡೆದಿದ್ದು, ಇದರ ಪರಿಣಾಮ ಹೋಟೆಲ್ ಹಾಗೂ ಟೀ ಪಾಯಿಂಟ್ ಹೊತ್ತಿ ಊರಿದಿದೆ.

ಜನರು ಬೆಳಂಬೆಳಗ್ಗೆ ದಟ್ಟವಾದ ಹೊಗೆ ಕಂಡು ಆತಂಕಕ್ಕೆ ಒಳಗಾಗಿದ್ದರು. ರಾತ್ರಿ ಹೋಟೆಲ್ ನಲ್ಲಿದ್ದ ಸಿಲಿಂಡರ್ ಸರಿಯಾಗಿ ಆಫ್ ಮಾಡದೆ ಇರೋದ್ರಿಂದ ಲೀಕ್ ಆಗಿ ಹೋಟೆಲ್ ಮುಂಭಾಗವಿದ್ದ ಬೈಕ್ ಹಾಗೂ ಹೋಟೆಲ್ ನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಹೋಟೆಲ್ ಮೇಲ್ಭಾಗ ಎರಡು ಮನೆಗಳಿದ್ದು, ಅದರಲ್ಲಿ ವಾಸ ಮಾಡ್ತಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದು, ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ, ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಜನನಿಭೀಡ ಪ್ರದೇಶದಲ್ಲಿರೋ ಹೋಟೆಲ್​​ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು.

RELATED ARTICLES

Related Articles

TRENDING ARTICLES