Monday, December 23, 2024

ಜೈಲರ್​ ಫಸ್ಟ್​ ಲುಕ್​​​.. ಖಡಕ್​ ಗೆಟಪ್​ನಲ್ಲಿ ತಲೈವಾ ​​

ತಲೈವಾ ಚಿತ್ರದ ನಂತ್ರ ಜೈಲರ್​ ಗೆಟಪ್​ನಲ್ಲಿ ಸೂಪರ್ ಸ್ಟಾರ್​​​ ರಜನಿಕಾಂತ್​ ಅಬ್ಬರಿಸಲಿದ್ದಾರೆ. ಇದೀಗ ಜೈಲರ್​​ ಫಸ್ಟ್​ ಲುಕ್​ ರಿವೀಲ್​ ಆಗಿದ್ದು, ಫ್ಯಾನ್ಸ್​ ಸಖತ್ ಥ್ರಿಲ್​​ ಆಗಿದ್ದಾರೆ. ಸೆಂಚುರಿ ಸ್ಟಾರ್ ಶಿವಣ್ಣ, ತಲೈವಾ ಕಂಬೋದಲ್ಲಿ ಸಿನಿಮಾ ಮೂಡಿ ಬರ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿರೋ ಜೈಲರ್​ ಪೋಸ್ಟರ್​ ಟಾಕ್​ ಆಫ್​ ದಿ ಟೌನ್​ ಆಗಿದೆ. ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರೋ ಜೈಲರ್​ ಚಿತ್ರದ ಸ್ಪೆಷಾಲಿಟಿಗಳೇನು ಗೊತ್ತಾ..? ಈ ಸ್ಟೋರಿ ಓದಿ.

  • ಜೈಲರ್​ ಕೆಲಸ ಶುರು ಮಾಡಿದ ರಜನಿಕಾಂತ್​​​​..!

ಕಾಲಿವುಡ್​ ಸೂಪರ್​ ಸ್ಟಾರ್​ ರಜನಿಕಾಂತ್​ಗೆ ಏಜ್​ ಇಸ್​ ಜಸ್ಟ್​ ಎ ನಂಬರ್​​. ವಯಸ್ಸು 70 ದಾಟಿದ್ರೂ ಇಂದಿಗೂ ಸೂಪರ್​ ಡೂಪರ್​ ಸಿನಿಮಾಗಳ ಸರದಾರ ರಜನಿಕಾಂತ್​. ಕೋಟಿ ಕೋಟಿ ಹಣ ಸುರಿಯೋ ನಿರ್ಮಾಪಕರ ಪಾಲಿನ ಲಕ್ಕಿ ಮ್ಯಾನ್​​ ರಜನಿ. ಇದೀಗ ತಲೈವಾ ಜೈಲರ್​ ಗೆಟಪ್​ನಲ್ಲಿ ಕಾಣಿಸಿದ್ದಾರೆ. ಜೈಲರ್​ ಸಿನಿಮಾದ ಫಸ್ಟ್​ ಲುಕ್​ ಸಖತ್​ ವೈರಲ್​ ಆಗಿದ್ದು ಟ್ರೆಂಡಿಂಗ್​ ನ್ಯೂಸ್​ನಲ್ಲಿದೆ.

ರಜನಿಕಾಂತ್​ ಸಿನಿಮಾಗಳಂದ್ರೆ ಬೆಟ್ಟದಷ್ಟು ನಿರೀಕ್ಷೆ. ಕೋಟ್ಯಂತರ ಅಭಿಮಾನಿಗಳು ಸಿನಿಮಾ ಸೆಟ್ಟೇರಿದ ದಿನದಿಂದ್ಲೇ ಚಾತಕ ಪಕ್ಷಿಗಳಂತೆ ರಿಲೀಸ್​ ಡೇಟ್ ಎದುರು​​ ನೋಡ್ತಾರೆ. ಇಂದಿಗೂ ಡೈ ಹಾರ್ಡ್​​ ಫ್ಯಾನ್ಸ್​ ಹೊಂದಿರೋ ಭಾರತೀಯ ಚಿತ್ರರಂಗದ ಜನಪ್ರಿಯ ನಟ ರಜನಿಕಾಂತ್​​. ಕಬಾಲಿ ಸ್ಟೈಲ್​ಗೆ ಫಿದಾ ಆಗದವರೇ ಇಲ್ಲ. ಅವರ ಮ್ಯಾನರಿಸಂಗೆ ಬೋಲ್ಡ್​ ಆಗದವರಿಲ್ಲ. ಇಂದಿಗೂ ಕಬಾಲಿ ಡಿಫರೆಂಟ್ ಟ್ರೆಂಡ್​ ಸೆಟ್ಟರ್​​​.

  • ಪಕ್ಕಾ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾದಲ್ಲಿ ಶಿವಣ್ಣ ಶೈನಿಂಗ್​
  • ಸಾಲಿಡ್​​​ ಲುಕ್​ನಲ್ಲಿ ಕಬಾಲಿ.. ಫ್ಯಾನ್ಸ್​ ಕ್ಲೀನ್​ ಬೋಲ್ಡ್​​

ಬೀಸ್ಟ್ ಸಿನಿಮಾ ಖ್ಯಾತಿಯ ನೆಲ್ಸನ್​ಕುಮಾರ್​ ಜೈಲರ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಈ ಸಿನಿಮಾದ ಸಿಂಗಲ್​ ಪೋಸ್ಟರ್​ ಸಖತ್​ ವೈರಲ್​ ಆಗಿದ್ದು, ಸಾಲಿಡ್​ ಲುಕ್​ನಲ್ಲಿ ರಜನಿಕಾಂತ್​​ ಮಿಂಚ್ತಿದ್ದಾರೆ. ಈಗಾಗ್ಲೇ ಸಿನಿಮಾ ಶೂಟಿಂಗ್​ ಕೂಡ ಶುರುವಾಗಿದ್ದು, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್​​​ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಹ್ಯಾಟ್ರಿಕ್​ ಹೀರೋ ಫಸ್ಟ್​ ಲುಕ್​ಗಾಗಿ ಇಡೀ ಸ್ಯಾಂಡಲ್​​ವುಡ್​ ಎದುರು ನೋಡ್ತಿದೆ. ಇದೇ ಮೊದಲ ಬಾರಿಗೆ ಶಿವಣ್ಣ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಗೌತಮಿಪುತ್ರ ಶಾತಕರ್ಣಿ ತೆಲುಗು ಸಿನಿಮಾದಲ್ಲಿ ಗೆಸ್ಟ್ ರೋಲ್ ಮಾಡಿದ್ರು.

ರಜಿನಿಕಾಂತ್​ ಅವ್ರ 169 ನೇ ಸಿನಿಮಾ ಇದಾಗಿದ್ದು, ತಲೈವಾ-ಶಿವಣ್ಣನ ಕಾಂಬೋ ಯಾವ ರೀತಿ ಇರುತ್ತೆ ಅನ್ನೋ ಕುತೂಹಲ ಚಿತ್ರರಂಗದಲ್ಲಿ ಮನೆ ಮಾಡಿದೆ. ಬೀಸ್ಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದ ಸನ್​ ಪಿಕ್ಚರ್ಸ್​ ಈ ಚಿತ್ರಕ್ಕೂ ಬಂಡವಾಳ ಹೂಡಿದೆ. ‘ಜೈಲರ್​’ ಸಿನಿಮಾದ ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಅವರ ಬತ್ತಳಿಕೆಯಿಂದ ಹಾಡುಗಳು ಹೊರಬರಲಿವೆ. ನಟಿ ರಮ್ಯಾ ಕೃಷ್ಣನ್ ಲೀಡ್​ ರೋಲ್​ನಲ್ಲಿ ಮಿಂಚಲಿದ್ದಾರೆ.

ಜೈಲುಗಳಲ್ಲಿ ನಡೆಯೋ ರೌಡಿಗಳ ಅಟ್ಟಹಾಸದ ವಿರುದ್ಧ ಜೈಲರ್​ ಸೆಣಸಾಡಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸ್ಟಾರ್​ ಕಾಸ್ಟಿಂಗ್​ ದೊಡ್ಡ ಮಟ್ಟದಲ್ಲಿ ಇರಲಿದೆಯಂತೆ. ಒಟ್ನಲ್ಲಿ ಲೆಜೆಂಡ್​ ಆ್ಯಕ್ಟರ್​​​ಗಳ ಸಮಾಗಮದ ಅದ್ದೂರಿ ಸಿನಿಮಾ ಇದಾಗಿದ್ದು, ತೆರೆಯ ಮೇಲೆ ಕಮಾಲ್​ ಮಾಡೋದು ಪಕ್ಕಾ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES