Wednesday, January 22, 2025

ದರೋಡೆಕೋರರ ಮೇಲೆ ಪೊಲೀಸ್ ಫೈರಿಂಗ್, ಇಬ್ಬರ ಕಳ್ಳರ ಬಂಧನ

ಕಲಬುರಗಿ: ನಗರದ ಹೊರವಲಯದ ಬಬಲಾದ್ ಕ್ರಾಸ್ ಬಳಿ ಹಲ್ಲೆಗೆ ಯತ್ನಿಸಿದ ದರೋಡೆಕೋರರಿಗೆ ಪೊಲೀಸರು ಬಂದೂಕಿನ ಉತ್ತರ ನೀಡಿದ್ದಾರೆ.

ಆರೋಪಿಗಳು ಬಿದ್ದಾಪುರ ಕಾಲೋನಿಯಲ್ಲಿ ಹಗಲಲ್ಲಿ ದೇವರ ಮೂರ್ತಿ ಹಿಡಿದು ಪ್ರದಕ್ಷಿಣೆ ಹಾಕಿ ರಾತ್ರಿ ಮನೆಗಳಿಗೆ ಕನ್ನ ಹಾಕಲು ಯತ್ನಿಸಿದ್ದಾರೆ. ನಾಲ್ವರ ಪೈಕಿ ಇಬ್ಬರನ್ನು ಥಳಿಸಿ ಸಾರ್ವಜನಿಕರೇ ಅಶೋಕ್ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಳಿಕ ಠಾಣೆಗೆ ಕರೆದೊಯ್ಯುತ್ತಿದ್ದಾಗ ಚಾಕುವಿನಿಂದ ಪೊಲೀಸರ ಮೇಲೆಯೇ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಸಿಪಿಐ ಪಂಡಿತ್ ಸಗರ್, ದರೋಡೆಕೋರರಾದ ಲವಾ ಮತ್ತು ದೇವಿದಾಸ್ ಮೇಲೆ ಎರಡು ಸುತ್ತು ಫೈರಿಂಗ್ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತರು ಮಹಾರಾಷ್ಟ್ರದ ತುಳಜಾಪುರ ತಾಲೂಕಿನ ಝುಳಕೋಳ ಗ್ರಾಮದವರು ಎಂದು ತಿಳಿದುಬಂದಿದೆ.

ಇನ್ನೂ ಕಾನ್ಸ್‌ಟೇಬಲ್‌ ಶಿವಶರಣ ಕೈಗೆ ಗಾಯವಾಗಿದೆ. ಕಳೆದ ಕೆಲವು ದಿನಗಳಿಂದ ಈ ಗ್ಯಾಂಗ್ ಸಕ್ರಿಯವಾಗಿದ್ದು, ಈ ಹಿಂದೆ ಒಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಕೊಲೆಗೆಯ್ದಿದ್ದರು. ಆ ಘಟನೆಯಿಂದಾಗಿ ರಾತ್ರಿ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡಿದ್ದರು. ಆ ಬೆನ್ನಲ್ಲೇ ಮತ್ತೊಂದು ಗ್ಯಾಂಗ್ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದೆ. ಮುಂದಿನ ದಿನಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವುದಾಗಿ ನಗರ ಪೊಲೀಸ್ ಆಯುಕ್ತ ರವಿಕುಮಾರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES