Wednesday, January 22, 2025

ಟೆಂಡರ್ ಕೊಡಿಸುವುದಾಗಿ ಕರೆಸಿ ಉದ್ಯಮಿ ಪುತ್ರನ ಸುಲಿಗೆ

ಬೆಂಗಳೂರು : ಸರ್ಕಾರದ ಟೆಂಡರ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಪುತ್ರನಿಂದ 25 ಲಕ್ಷ ರೂ. ಸುಲಿಗೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ.

ಉದ್ಯಮಿ ರವಿ ಎಂಬುವವರ ಪುತ್ರ ಸೂರಜ್ ಮೇಲೆ ಪಿಸ್ತೂಲ್ ತೋರಿಸಿ ಖತರ್ನಾಕ್ ಗ್ಯಾಂಗ್​​ನಿಂದ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಉದ್ಯಮಿ ಬ್ಯಾಟರಾಯನಪುರ ಪೊಲೀಸ ಠಾಣೆಗೆ ದೂರು ನೀಡಿದ್ದು, ಸದ್ಯ ಮಹಿಳೆ ಪುಷ್ಪಾ, ಅಯ್ಯಪ್ಪ@ ಅರ್ಜುನ್, ರಾಕೇಶ್ ಹಾಗೂ ಸಂತೋಷ್​ನನ್ನು ಬಂಧಿಸಲಾಗಿದೆ.

ಮಹಿಳೆ ಸೇರಿ ನಾಲ್ವರಿಂದ ಪಿಸ್ತೂಲ್ ತೋರಿಸಿ ಉದ್ಯಮಿ ಪುತ್ರನಿಗೆ ಬ್ಲಾಕ್ ಮೇಲ್ ಮಾಡಲಾಗಿದೆ. ಉದ್ಯಮಿ ರವಿ ಇಂಡಸ್ಟ್ರೀಯಲ್ ಸಪ್ಲೈ ನಲ್ಲಿ ಮಾಲೀಕರಾಗಿದ್ದಾರೆ. ಹಾಗಾಗಿ ಆತನ ಮಗನಾದ ಸೂರಜ್​ನನ್ನು ಕಿಡ್ನಾಪ್ ಮಾಡಲಾಗಿದೆ. ಆದರೆ ಈ ವೇಳೆ ಸೂರಜ್ ನನ್ನು ತನ್ನ ಮನೆಗೆ ಕರೆದೊಯ್ದಿದ್ದ ಪುಷ್ಟ, ನಂತರ ಹಣ ಕೊಡಬೇಕು ಇಲ್ಲ ನನ್ನನ್ನ ರೇಪ್ ಮಾಡಿದ್ದೀಯಾ ಎಂದು ಹೇಳಿ ಕೇಸು ಹಾಕಿಸ್ತಿನಿ‌ ಎಂದು ಬೆದರಿಕೆ ಹಾಕಲಾಗಿದೆ. ಈ ವೇಳೆ ಮತ್ತೆ ಗುರುಮೂರ್ತಿಯನ್ನು ಆಕೆಯ ಮನೆಗೆ ಕರೆಸಿಕೊಂಡು ಹಣ ನೀಡಲಾಗಿತ್ತು. 25 ಲಕ್ಷ ಹಣ ಪುಷ್ಪಳಿಗೆ ನೀಡಿದ ಗುರುಮೂರ್ತಿ ಹೊರಟು ಹೊಗಿದ್ದ. ನಂತರ ರಾತ್ರಿ 9 ಗಂಟೆಗೆ ಸೂರಜ್ ಬಿಟ್ಟು ಕಳುಹಿಸಲಾಗಿತ್ತು. ಹೊರಗೆ ಹೇಳಿದರೆ ರೇಪ್ ಕೇಸ್ ಹಾಕುವುದಲ್ಲದೆ ಇಡೀ‌ ಕುಟುಂಬವನ್ನ ಹತ್ಯೆ ಮಾಡುತ್ತೆನೆಂದು ಮಹಿಳೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES