Wednesday, January 22, 2025

ಕ್ಲಾಕ್​ ಟವರ್ ತೆರವು- ಪ್ರತಿಭಟನೆ

ಬಳ್ಳಾರಿ : ನಗರದ ರಾಯಲ್ ವೃತ್ತದಲ್ಲಿದ್ದ ಗಡಿಯಾರ ಕಂಬವನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ. 140 ಅಡಿ ಎತ್ತರದ ಕ್ಲಾಕ್​ ಟವರ್​ ನಿರ್ಮಿಸಲು ಗಡಿಯಾರ ಕಂಬ ತೆರವು ಮಾಡಿದ್ದು, ಲೆಬೆನಾನ್ ಮಾದರಿ ಕ್ಲಾಕ್​ ಟವರ್ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಹಳೆಯದಾಗಿದ್ದ ಗಡಿಗಿ ಚೆನ್ನಪ್ಪ ಸ್ಮಾರಕ ಗಡಿಯಾರ ಕಂಬವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸಮ್ಮುಖದಲ್ಲಿ ತೆರವು ಮಾಡಲಾಯಿತು. 7 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕ್ಲಾಕ್​ ಟವರ್ ತಲೆ ಎತ್ತಲಿದೆ.​ 2009ರಲ್ಲಿ ಗಡಿಗಿ ಚೆನ್ನಪ್ಪ ವೃತ್ತವನ್ನು ರೆಡ್ಡಿ ಬ್ರದರ್ಸ್, ಶ್ರೀರಾಮುಲು ತೆರವು ಮಾಡಿದ್ದರು. ರಾಯಲ್​ ವೃತ್ತದಲ್ಲಿ ಗಡಿಯಾರ ಗೋಪುರ ತೆರವಿಗೆ ಕಾಂಗ್ರೆಸ್ ವಿರೋಧಿಸಿದೆ.

ಸುಸಜ್ಜಿತ ಗಡಿಯಾರ ಗೋಪುರ ತೆರವಿಗೆ ಕೆಪಿಸಿಸಿ ಕಾರ್ಯದರ್ಶಿ ಜೆ.ಎಸ್.ಆಂಜನೇಯಲು ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಗಡಿಯಾರ ಕಂಬ ತೆರವು ನಂತರ ‘ಕೈ’ ನಾಯಕರು ಸ್ಥಳಕ್ಕೆ ಆಗಮಿಸಿದರು. ಗಡಿಯಾರ ಗೋಪುರ ತೆರವು ವೇಳೆ ಸುಮ್ಮನಿದ್ದ ಕಾಂಗ್ರೆಸ್ ನಾಯಕರು, 7 ಕೋಟಿ ವೆಚ್ಚದಲ್ಲಿ ಲೆಬಿನಾನ್ ಮಾದರಿಯ ಕ್ಲಾಕ್ ಟವರ್ ನಿರ್ಮಾಣಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ರಾಯಲ್ ವೃತ್ತದಲ್ಲಿ ರಾತ್ರಿಯಿಂದ ಕಾಂಗ್ರೆಸ್​ ಮುಖಂಡರಿಂದ ಪ್ರತಿಭಟನೆ ಮಾಡುತ್ತಿದ್ದು, ಪಾಲಿಕೆಯಿಂದ ಒಪ್ಪಿಗೆ ಪಡೆಯದೇ ಕ್ಲಾಕ್ ಟವರ್ ನಿರ್ಮಾಣ ಮಾಡಲಾಗುತ್ತಿದ್ದು, 7 ಕೋಟಿ ವೆಚ್ಚದಲ್ಲಿ ಹೊಸ ಕ್ಲಾಕ್​ ಟವರ್​ ನಿರ್ಮಾಣಕ್ಕೆ ಕೈ ಪಡೆ ಗರಂ ಆಗಿದೆ.

RELATED ARTICLES

Related Articles

TRENDING ARTICLES