Wednesday, January 22, 2025

KGF ತೆರೆಕಂಡು 4 ತಿಂಗಳಾದ್ರೂ ರಾಕಿಭಾಯ್ ಸೈಲೆಂಟ್

ಇಡೀ ವರ್ಲ್ಡ್​ ಸಿನಿದುನಿಯಾನ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಮಾಸ್ಟರ್​ಮೈಂಡ್ ರಾಕಿಭಾಯ್, ತಮ್ಮ ಸಿನಿಮಾ ರಿಲೀಸ್ ಆಗಿ ನಾಲ್ಕು ತಿಂಗಳು ಕಳೆದರೂ ಹೊಸ ಪ್ರಾಜೆಕ್ಟ್ ಬಗ್ಗೆ ಸುಳಿವೇ ನೀಡಿಲ್ಲ. ನರ್ತನ್ ಜೊತೆಗಿನ ಚಿತ್ರ ಇನ್ನೇನು ಶುರುವಾಗೇ ಬಿಡ್ತು ಅನ್ನೋ ಅಷ್ಟರಲ್ಲಿ ಅಲ್ಲೊಂದು ಟ್ವಿಸ್ಟ್. ಇಷ್ಟಕ್ಕೂ ನ್ಯೂ ವೆಂಚರ್ ಕಿಕ್​ಸ್ಟಾರ್ಟ್​ ಆಗ್ದೇ ಇರಲು ಕಾರಣವೇನು ಅಂತೀರಾ..? ನೀವೇ ಓದಿ.

  • ಯಶ್ ನ್ಯೂ ಪ್ರಾಜೆಕ್ಟ್ ಶುರು ಆಗ್ದೇ ಇರೋದ್ಯಾಕೆ ಗೊತ್ತಾ..?
  • ನರ್ತನ್ ಚಿತ್ರ ಅತಂತ್ರ.. ಕಥೆಯಲ್ಲಿ ಸಿಕ್ಕಾಪಟ್ಟೆ ಚೇಂಜಸ್
  • ಜನರ ನಿರೀಕ್ಷೆಗೆ ತಕ್ಕನಾಗಿ ಯಶ್ ಮೆಗಾ ಮಾಸ್ಟರ್​ಪ್ಲಾನ್..!

ಕನ್ನಡ ಚಿತ್ರಗಳಿಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುವಂತೆ ಮಾಡಿದ ಗರಿಮೆ ಕರುನಾಡಿನ ಸಿನಿಸಂತ ಯಶ್​ ಅವ್ರಿಗೆ ಸಲ್ಲುತ್ತೆ. ಪರಭಾಷಿಗರಷ್ಟೇ ಅಲ್ಲದೆ, ವಿದೇಶಿಯರು ಕೂಡ ನಮ್ಮ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ರು ರಾಕಿಭಾಯ್. ಕಾಣೋ ಕನಸು ದೊಡ್ಡದಾಗಿದ್ರೆ, ಅದ್ರ ರಿಸಲ್ಟ್ ಕೂಡ ಅಷ್ಟೇ ದೊಡ್ಡ ಮಟ್ಟಕ್ಕೆ ಸಿಗಲಿದೆ ಅನ್ನೋದಕ್ಕೆ ಕೆಜಿಎಫ್ ಹಾಗೂ ಅದ್ರ ಹಿಂದಿನ ಮಾಸ್ಟರ್​ಮೈಂಡ್​ಗಿಂತ ದೊಡ್ಡ ನಿದರ್ಶನ ಮತ್ತೊಂದು ಬೇಕಿಲ್ಲ.

ಕೆಜಿಎಫ್ ಸಿನಿಮಾದಿಂದ ಯಶ್ ನ್ಯಾಷನಲ್ ಸ್ಟಾರ್ ಆದ್ರು. ಯಂಗೆಸ್ಟ್ ಸೂಪರ್ ಸ್ಟಾರ್, ಯೂತ್ ಐಕಾನ್ ಆಗಿ ಕೋಟ್ಯಂತರ ಮಂದಿಗೆ ಸ್ಫೂರ್ತಿಯಾದ್ರು. ಅದ್ರಲ್ಲೂ ಪ್ಯಾಷನ್ ಜೊತೆ ಹಾರ್ಡ್​ ವರ್ಕ್​ ಮಾಡಿದ್ರೆ ಪ್ರತಿಫಲ ಕಟ್ಟಿಟ್ಟ ಬುತ್ತಿ ಅನ್ನೋದನ್ನ ತೋರಿಸಿಕೊಟ್ರು ರಾಕಿಂಗ್ ಸ್ಟಾರ್. ಆದ್ರೆ ವರ್ಲ್ಡ್​ ಬಾಕ್ಸ್ ಆಫೀಸ್​ನಲ್ಲಿ 1500 ಕೋಟಿ ಗಳಿಸಿದ ಬಳಿಕವೂ ಯಶ್ ಸೈಲೆಂಟ್ ಆಗಿರೋದೇ ಯಕ್ಷ ಪ್ರಶ್ನೆ.

ಅವ್ರ ಮುಂದಿನ ನಡೆ ಏನು..? ಯಾರ ಜೊತೆ ಸಿನಿಮಾ ಮಾಡ್ತಾರೆ..? ಕೆಜಿಎಫ್ 3 ಶುರುವಾಗುತ್ತಾ ಹೀಗೆ ಹತ್ತಾರು ಪ್ರಶ್ನೆಗಳು ಮೂಡುತ್ತವೆ. ಆದ್ರೆ ಅದ್ಯಾವುದಕ್ಕೂ ಉತ್ತರ ಸಿಕ್ಕಿಲ್ಲ. ಕೆಜಿಎಫ್ ಕ್ಯಾಪ್ಟನ್ ಪ್ರಶಾಂತ್ ನೀಲ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರೋದ್ರಿಂದ ಕೆಜಿಎಫ್ ಚಾಪ್ಟರ್-3 ಆರಂಭಿಸೋ ಮನಸ್ಸು ಮಾಡಿಲ್ಲ. ನರ್ತನ್ ಚಿತ್ರದ ಕಥೆ ಇನ್ನೂ ಸ್ಕ್ರಪ್ಟ್ ಫೈನಲ್ ಆಗೇ ಇಲ್ಲ. ಹಾಗಾದ್ರೆ ರಾಕಿಭಾಯ್ ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ..?

ಮೇಕಿಂಗ್ ಹಾಗೂ ಯುನಿಕ್ ಸ್ಟೈಲು ಮ್ಯಾನರಿಸಂನಿಂದ ಇಡೀ ದೇಶವೇ ಸಲಾಂ ಹೊಡೆಯುವಂತೆ ಮಾಡಿದ ಯಶ್, ತಮ್ಮ ಮುಂದಿನ ಚಿತ್ರದ ಬಗ್ಗೆ ನಿಜಕ್ಕೂ ದೊಡ್ಡ ಕನಸೇ ಕಾಣ್ತಿದ್ದಾರೆ. ಜನರ ನಿರೀಕ್ಷೆ ಕೆಜಿಎಫ್​ಗಿಂತ ದೊಡ್ಡದಾಗೇ ಇರೋದ್ರಿಂದ ಅದನ್ನ ಪೂರೈಸೋ ನಿಟ್ಟಿನಲ್ಲಿ ಸಕಲ ತಯಾರಿ ಮಾಡಿಕೊಳ್ತಿದ್ದಾರೆ. ಆ ಪೂರ್ವತಯಾರಿ ಕೆಲಸಗಳಿಂದಲೇ ಇನ್ನೂ ಖಚಿತವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದಷ್ಟು ಬೇಗ ಯಶ್ ಸರ್​ಪ್ರೈಸ್ ನ್ಯೂಸ್ ಕೊಡ್ತಾರೆ ಅನ್ನೋದು ಅತ್ಯಾಪ್ತರ ಮಾತು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES