Thursday, January 23, 2025

ಟ್ಯಾಬ್ಲೆಟ್ ಕಾರ್ಡ್ ಮಾದರಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆ.! ವೈರಲ್

ತಮಿಳುನಾಡು: ಇಲ್ಲಿನ ಜೋಡಿಯೊಂದು ಮಾತ್ರೆ ಮೇಲಿನ ಖಾಗದದ ಮಾದರಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿದ್ದು ಈ ವೆಡ್ಡಿಂಗ್ ಕಾರ್ಡ್ ವೈರಲ್ ಆಗುತ್ತಿದೆ ಎಂದು ಎಎನ್​ಐ ವರದಿ ಮಾಡಿದೆ.

ವಧು-ವರರಿಗೆ ಮದುವೆ ಎಂಬುದು ಬಹಳ ಪ್ರಾಮುಖ್ಯತೆ, ಅದರಂತೆ ಆಮಂತ್ರಣ ಪತ್ರಿಕೆಯದ್ದು ಪ್ರಮುಖವಾಗಿದೆ. ಹೀಗಾಗಿ ವೈದ್ಯಕೀಯ​ ಜೋಡಿಯೊಂದು ಮದುವೆ ಆಮಂತ್ರಣ ಪತ್ರಿಕೆಯನ್ನ ಟ್ಯಾಬ್ಲೆಟ್ ಮೇಲಿರುವ ಕಾರ್ಡ್ ಮಾದರಿಯಲ್ಲಿ ರೆಡಿ ಮಾಡಿದೆ.

ಈ ಜೋಡಿಯ ಮದುವೆಯು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ಮದುವೆ 2022ರ ಸೆಪ್ಟೆಂಬರ್ 5ರಂದು ನಡೆಯಲಿದೆ. ವರನ ಹೆಸರು ಎಳಲರಸನ್. ವಧುವಿನ ಹೆಸರು ವಸಂತಕುಮಾರಿ. ತಿರುವಣ್ಣಾಮಲೈ ಜಿಲ್ಲೆಯ ಎಳಿಲರಸನ್​ ಮತ್ತು ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಇದರಲ್ಲಿ ವಿಳಾಸ, ದಿನಾಂಕ, ಶುಭ ವೇಳೆ, ವಧು-ವರರ ಶಿಕ್ಷಣವನ್ನು ಈ ಆಮಂತ್ರಣ ಪತ್ರಿಕೆಯಲ್ಲಿ ಕಾಣಬಹುದು.

RELATED ARTICLES

Related Articles

TRENDING ARTICLES