Wednesday, January 22, 2025

ಹಾವು ಕಚ್ಚಿ ಸ್ನೇಕ್ ಲೋಕೇಶ್ ನಿಧನ

ಬೆಂಗಳೂರು : ನೆಲಮಂಗಲ ನಗರದ ಮಾರುತಿ ಬಡಾವಣೆ ನಿವಾಸಿ ಉರಗ ತಜ್ಞ ಲೋಕೇಶ್ ಇಂದು ನಿಧನರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿ ಲೋಕೇಶ್ ವಾಸವಾಗಿದ್ದರು. ಕಳೆದ ಬುಧವಾರ ಲೋಕೇಶ್ ಅವರಿಗೆ ನಾಗರ ಹಾವು ಕಚ್ಚಿತ್ತು.

ಮೂಟೆ ಕೆಳಗೆ ಅವಿತ್ತಿದ್ದ ಹಾವನ್ನ ರಕ್ಷಿಸುವಾಗ ಉರಗ ಕಚ್ಚಿತ್ತು. ಅಂದಿನಿಂದಲೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲೋಕೇಶ್ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

RELATED ARTICLES

Related Articles

TRENDING ARTICLES