Monday, December 23, 2024

ಸೌತ್​ಗೆ ಸಲ್ಲೂ ಡೇರಿಂಗ್ ಎಂಟ್ರಿ.. ಗಾಡ್​ಫಾದರ್ ಸಾಥ್

ಬಾಲಿವುಡ್ ಸ್ಟಾರ್ಸ್​ ಎಲ್ಲಾ ಸೌತ್​ನತ್ತ ವಲಸೆ ಬರುವಂತಹ ಪರಿಸ್ಥಿತಿ ಬಂದಿದೆ. ಅಥ್ವಾ ಸೌತ್ ಟೆಕ್ನಿಷಿಯನ್​ಗಳ ಮೇಲೆ ಡಿಪೆಂಟ್ ಆಗುವಂತಹ ಕಾಲ ಸೃಷ್ಟಿಯಾಗಿದೆ. ಶಾರೂಖ್ ಖಾನ್, ಆಮೀರ್ ಖಾನ್ ಎಲ್ಲಾ ಸೌತ್​ನತ್ತ ಮುಖ ಮಾಡಿದ್ದಾಯ್ತು. ಇದೀಗ ಸಲ್ಮಾನ್ ಖಾನ್ ಸರದಿ. ಗಾಡ್​ಫಾದರ್ ಜೊತೆ ಸೌತ್​ಗೆ ಸಲ್ಲೂ ಎಂಟ್ರಿ ಕೊಟ್ಟ ಸೆನ್ಸೇಷನಲ್ ಸಮಾಚಾರ್ ನಿಮ್ಮ ಮುಂದೆ.

  • ಆಮೀರ್, ಶಾರೂಖ್ ಆಯ್ತು ಈಗ ಸಲ್ಮಾನ್ ಖಾನ್ ಸರದಿ
  • ಅಬಬ್ಬಾ.. ಹೈ ವೋಲ್ಟೇಜ್ ಟೀಸರ್​ಗೆ ಸ್ಟನ್ ಆದ ಬಿಟೌನ್
  • ಚಿರಂಜೀವಿ- ನಯನತಾರಾ ಜೊತೆ ಭಾಯಿಜಾನ್ ಮಿಂಚು

ರೀಸೆಂಟ್ ಆಗಿ ಮೆಗಾಸ್ಟಾರ್ ಚಿರಂಜೀವಿ ಅವ್ರ ಬರ್ತ್ ಡೇ ಪ್ರಯುಕ್ತ ಗಾಡ್​ಫಾದರ್ ಚಿತ್ರದ ಟೀಸರ್ ರಿವೀಲ್ ಮಾಡಲಾಗಿದೆ. ಅದ್ರಲ್ಲಿ ಒಂದ್ಕಡೆ ಚಿರು ಮೆಗಾ ಸ್ಟೈಲ್ ಹೈಲೈಟ್ ಆದ್ರೆ, ಮತ್ತೊಂದ್ಕಡೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಎಲ್ಲರ ಹುಬ್ಬೇರಿಸಿದ್ದಾರೆ.

ಯೆಸ್. ಇದು ಮಲಯಾಳಂನ ಲೂಸಿಫರ್ ರಿಮೇಕ್ ಆಗಿದ್ದು, ಅಲ್ಲಿ ಪೃಥ್ವಿರಾಜ್ ಸುಕುಮಾರನ್ ಪೋಷಿಸಿದ್ದ ಪಾತ್ರವನ್ನು ಇಲ್ಲಿ ಸಲ್ಮಾನ್ ಖಾನ್ ನಿಭಾಯಿಸಿದ್ದಾರೆ. ಗಾಡ್​ಫಾದರ್ ಚಿರು ಕಮಾಂಡ್​ನ ಫಾಲೋ ಮಾಡೋ ಡೆಡ್ಲಿ ಌಂಡ್ ಡೇರಿಂಗ್ ಗ್ಯಾಂಗ್​ಸ್ಟರ್ ಆಗಿ ಸಲ್ಲೂ ಥ್ರಿಲ್ ಕೊಡ್ತಿದ್ದಾರೆ.

ರೀಸೆಂಟ್ ಆಗಿ ಲಾಲ್​​ಸಿಂಗ್ ಚಡ್ಡಾ ಚಿತ್ರಕ್ಕಾಗಿ ನಾಗಾರ್ಜುನ್ ಪುತ್ರ ನಾಗಚೈತನ್ಯ ಮೊರೆ ಹೋಗಿದ್ರು ಆಮೀರ್ ಖಾನ್. ಶಾರೂಖ್ ಕೂಡ ತಮಿಳು ಡೈರೆಕ್ಟರ್ ಅಟ್ಲೀ ಜೊತೆ ಕೆಲಸ ಮಾಡ್ತಿದ್ದಾರೆ. ಇದೀಗ ಸಲ್ಮಾನ್ ಖಾನ್ ಸೌತ್​ಗೆ ಕಾಲಿಟ್ಟಿದ್ದು, ನಮ್ಮ ಸೌತ್ ಆರ್ಟಿಸ್ಟ್​ಗಳು ಹಾಗೂ ಟೆಕ್ನಿಷಿಯನ್ಸ್ ಮೇಲೆ ಭರವಸೆ ಇಟ್ಟಿದ್ದಾರೆ. ನಿಜಕ್ಕೂ ಇದು ಸೌತ್ ಮಂದಿ ಹೆಮ್ಮೆ ಪಡುವ ವಿಚಾರ.

ನಯನತಾರಾ ಈ ಚಿತ್ರದಲ್ಲಿ ಚಿರಂಜೀವಿ ಸಹೋದರಿ ಪಾತ್ರ ನಿರ್ವಹಿಸಿದ್ದು, ವಿಲನ್ ಆಗಿ ಸತ್ಯದೇವ್ ಅಬ್ಬರಿಸಲಿದ್ದಾರೆ. ಸುನಿಲ್, ಮುರಳಿ ಶರ್ಮಾ, ಗಂಗವ್ವ, ಸಮುದ್ರಕಣಿ, ಪೂರಿ ಜಗನ್ನಾಥ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇದೇ ಅಕ್ಟೋಬರ್ 5ಕ್ಕೆ ಸಿನಿಮಾ ತೆರೆಗಪ್ಪಳಿಸಲಿದ್ದು, ಬಾಲಿವುಡ್ ಮಂದಿಗೂ ಇದು ಕನೆಕ್ಟ್ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES