Wednesday, January 22, 2025

ಪ್ರತಿಭಟನೆಗೆ ಅವಕಾಶ ಕೊಟ್ರೆ 100 % ಹೆಣ ಬೀಳುತ್ತೆ: ಜಗ್ಗೇಶ್​

ತುಮಕೂರು: ಕೊಡಗಿನಲ್ಲಿ ಕಾಂಗ್ರೆಸ್​ ಪ್ರತಿಭಟನೆಗೆ ಅವಕಾಶ ನೀಡಿದ್ರೆ ಹೆಣ ಬೀಳುತ್ತದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೊಡಗುದಲ್ಲಿ ಕಾಂಗ್ರೆಸ್ ಚಲೋ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಸಿದ ಜಗ್ಗೇಶ್​, ಕಾಂಗ್ರೆಸ್ ಕಾರ್ಯಕರ್ತನೇ ಮೊಟ್ಟೆ ಎಸೆದಿದ್ದಾನೆ. ಆತನು ಯಾವುದೋ ವಿಚಾರಕ್ಕೆ ಬೇಸರಗೊಂಡು ಎಸೆದಿದ್ದಾನೆ. ಇದು ಜಗತ್ಜಾಹೀರಾತಾಗಿದೆ. ಮೊಟ್ಟೆ ಎಸೆದ ಸಂದೀಪ್​ನ ಸಂದೇಶಗಳನ್ನು ನೋಡಿದ್ದೇನೆ. ಆಗ ನಾನು ಜೆಡಿಎಸ್‌ನಲ್ಲಿದ್ದೆ ಆನಂತರ ಕಾಂಗ್ರೆಸ್‌ಗೆ ಬಂದೆ. ಆತನನ್ನ ಅರೆಸ್ಟ್ ಮಾಡಲಾಗಿದೆ. ಕಾಂಗ್ರೆಸ್ ಹೋರಾಟ ನೆಕ್ಟ್ ಜೂನ್‌ವರೆಗೂ ಇರಬಹುದು. ಆ ಮೇಲೆ ಎಲ್ಲಾ ತಣ್ಣಾಗೆ ಆಗುತ್ತದೆ. ರಾಜ್ಯದ ಜನತೆಗೆ ಗೊತ್ತಿದೆ ಯಾಕೆ ಈಗ ಪ್ರತಿಭಟನೆ ಆಗ್ತಿದೆ ಅಂತ. ಪ್ರತಿಯೊಬ್ಬರಿಗೂ ಆ ಜಾಗ ಹಿಡಿಬೇಕು ಎಂಬ ಹುಮ್ಮಸಿದೆ.

ಬಟ್ ವಿಷಯಗಳಿಲ್ಲ, ವಿಷಯ ಇದ್ದಿದ್ರೆ ಅದ್ಭುತ ಡಿಬೇಟ್ ನಡೆಯುತ್ತಿತ್ತು. ಡಿಬೇಟ್ ನಡೆಯದೆ ಬರೀ ಮೊಟ್ಟೆ ವಿಚಾರವೇ ಚರ್ಚೆ ನಡೆಯುತ್ತಿದೆ. ಅಂದರೆ ಸಮಸ್ಯೆ ಇಲ್ಲ ಅಂತ. ಕೊಡಗಿನಲ್ಲಿ ಪ್ರತಿಭಟನೆ ಅವಕಾಶ ನೀಡಿದ್ರೆ ಹೆಣ ಬೀಳುತ್ತೆ, ಪ್ರತಿಭಟನೆಗೆ ಅವಕಾಶ ಕೊಟ್ರೆ ಹೆಣ ಬಿದ್ದು ದೊಡ್ಡ ಗಲಾಟೆಯಾಗಲು ಯಾಕೆ ಅವಕಾಶ ನೀಡಬೇಕು ಎಂದರು.

ಹೌದು, ಕೇರಳದಿಂದ ಎಲ್ಲಿಂದ ಬಂದ ಕೊಲೆ ಮಾಡಿದ್ದಾರೆ. ಈಗ ಪ್ರತಿಭಟನೆಗೆ ಅವಕಾಶ ಕೊಟ್ರೆ 100 ಪರ್ಸೆಂಟ್ ಹೆಣ ಬೀಳುತ್ತದೆ. ಎಷ್ಟು ಕೊಲೆ‌ ನಡೆದಿದೆಯೋ ಗೊತ್ತೇ ಇದೆ ನಿಮಗೆ. ಎಲ್ಲೆಲ್ಲಿಂದ ಬಂದು ಕೊಲೆ ಮಾಡಿದ್ದಾರೆ ಗೊತ್ತ ನಿಮಗೆ. ಕೇರಳ ಗಡಿ ದಾಟಿ ಬಂದು ಕೊಲೆ ಮಾಡ್ತಾರೆ. ಅದಕ್ಕೆ ಸಾಕಷ್ಟು ಅವಕಾಶವಿದೆ. ಅದನ್ನು ಅವೈಡ್ ಮಾಡಬೇಕು ಎಂದು ರಾಜ್ಯ ಸಭೆ ಸದಸ್ಯ ಜಗ್ಗೇಶ್ ಹೇಳಿದ್ದಾರೆ.

ಎಸಿಬಿ- ಲೋಕಾಯುಕ್ತ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಎಲ್ಲಾ ತಿಳಿದುಕೊಂಡು ಮಾತನಾಡ್ತೇನೆ.

RELATED ARTICLES

Related Articles

TRENDING ARTICLES