Sunday, December 22, 2024

ಸಿದ್ದರಾಮಯ್ಯ ಮತ್ತು ಡಿಕೆಶಿ ಡೋಂಗೀತನ ಬಿಡಬೇಕು : ಆರ್​ ಅಶೋಕ್​​

ಬೆಂಗಳೂರು : ಅಡುಗೆ ಮನೆಯಲ್ಲಿ, ಬಚ್ಚಲ ಮನೆಯಲ್ಲಿ ಏನ್ ಮಾಡಬೇಕೋ ಅದನ್ನ ಮಾಡಬಹುದು ಎಂದು ಸಚಿವ ಆರ್​ ಅಶೋಕ್​ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತೀ ದಿನ ಸಿದ್ದರಾಮಯ್ಯ ಹಿಂದೂಗಳ ಅವಹೇಳನ ಮಾಡ್ತಾರೆ. ಮಾಂಸ ತಿನ್ನಬಾರದಾ.? ಸಂಜೆ ಹೋಗಬಾರದ.? ಅಂತ ಪ್ರಶ್ನೆ ಮಾಡ್ತಾರೆ. ಹೇಳಿಕೆಗಳನ್ನ ಕೊಟ್ಟು ಗೊಂದಲ ಹುಟ್ಟಿಸಿದ್ದಾರೆ. ಅವರವರ ಆಹಾರ ಪದ್ಧತಿ ಇದೆ, ಅದಕ್ಕೆ ವಿರೋಧ ಇಲ್ಲ ಎಂದರು.

ಇನ್ನು, ದೇವಸ್ಥಾನ ಹೋಗಲು ಕೆಲ ರೂಲ್ಸ್ ಇದೆ. ದೇವಸ್ಥಾನಕ್ಕೆ ಹೋಗಲು ಮಡಿ ಇರುತ್ತೆ, ಮಾಂಸ ತಿನ್ನಬಾರದು ಅಂತ ನಿಯಮ ಇದೆ. ಮುಸ್ಲಿಂ ಸಮುದಾಯದಲ್ಲೂ ಕೆಲ ಆಚರಣೆ ಇದೆ. ರಂಜಾನ್ ಬಂದಾಗ ಉಪವಾಸ ಇರ್ತಾರೆ. ಅದನ್ನ ಸಿದ್ದರಾಮಯ್ಯ ಯಾಕೆ ಪ್ರಶ್ನೆ ಮಾಡಲ್ಲ ಎಂದು ಪ್ರಶ್ನಿಸಿದರು.

ಅದಲ್ಲದೇ, ಉಪವಾಸ ಮಾಡಬೇಡಿ, ತಿನ್ನಿ ಏನೂ ಆಗಲ್ಲ ಅಂತ ಹೇಳಲಿ. ಕ್ರಿಶ್ಚಿಯನ್ ಅವರದ್ದು ಗುಡ್ ಪ್ರೈಡೆ ಇದೆ. ಅವರಿಗೆ ಮಾಡಬೇಡಿ ಅಂತ ಹೇಳಲ್ಲ. ಹಿಂದೂ ಧರ್ಮದ ಬಗ್ಗೆ ಮಾತ್ರ ಅವಹೇಳನಾ ಮಾಡ್ತಾರೆ. ಹಿಂದೂಗಳಿಗೆ ಮಾತ್ರ ಯಾಕೆ ಹೇಳ್ತೀರಾ.? ಕೊಡಗಿನಲ್ಲಿ ಟಿಪ್ಪು ಜಯಂತಿ ಮಾಡಿದ್ರಿ. ಅದರಿಂದ ಸಾವು ಕೂಡ ಆಯ್ತು. ಯಾವುದೇ ಕೋಮು ಭಾವನೆ ಕೆರಳಿಸಬೇಡಿ ಎಂದರು.

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕ್ತೀರಾ ಅಂತೀರಾ.? ಅವರಿಗೆ ಮುಸ್ಲಿಂ ಓಟ್ ಬ್ಯಾಂಕ್ ಒಂದೇ ಕಾಣೋದು. ಸಾವರ್ಕರ್ ಅಷ್ಟೇ ಅವರಿಗೆ ಕಾಣೋದು. ಸಾವರ್ಕರ್ ಬ್ರಿಟಿಷ್ ಪರವಾಗಿದ್ರೆ. 50 ವರ್ಷ ಕರಿ ನೀರಿನ ಶಿಕ್ಷೆ ಯಾಕೆ ಕೊಟ್ರು.? ನಿಮ್ಮ ನಾಯಕರಿಗೆ ಎಷ್ಟು ವರ್ಷ ಶಿಕ್ಷೆ, ಯಾವ ಶಿಕ್ಷೆ ಅನುಭವಿಸಿದ್ದಾರೆ.? ನೆಹರು 50 ವರ್ಷ ಜೈಲಿಗೆ ಹೋಗಿದ್ರಾ.? ಟಿಪ್ಪುನ ವೈಭವೀಕರಿಸೋದು, ಸಾವರ್ಕರ್‌ನ ಅವಹೇಳನ ಮಾಡೋದು.ಈ ಡೋಂಗಿತನ ಬಿಡಬೇಕು. ಸಿದ್ದರಾಮಯ್ಯ ಮತ್ತು ಡಿಕೆಶಿ ಡೋಂಗೀತನ ಬಿಡಬೇಕು. ಟಿಪ್ಪು ಜಯಂತಿ ಎಲ್ಲಿ ಬೇಕೋ ಅಲ್ಲಿ ಮಾಡ್ತಿದ್ರು, ಅದಕ್ಕೆ ಯಾರು ಹೋಗಬೇಕಿತ್ತೋ ಹೋಗ್ತಿದ್ರು. ಅದನ್ನ ವೈಭವೀಕರಿಸಲು ಹೋಗಿ ಟಿಪ್ಪೂನೂ ವಿಲನ್ ಮಾಡಿದರು ಎಂದು ಹೇಳಿದರು.

RELATED ARTICLES

Related Articles

TRENDING ARTICLES