Thursday, November 21, 2024

ಕಾಂಗ್ರೆಸ್‌- ಬಿಜೆಪಿ ನಡುವೆ ದೊಡ್ಡ ವಾರ್‌..!

ಮೈಸೂರು : ನೆರೆ ವೀಕ್ಷಿಸಲು ಮಾಜಿ ಸಿಎಂ ಸಿದ್ದರಾಮಯ್ಯ ತೆರಳಿದ್ದ ವೇಳೆ ಕಾರಿಗೆ ಮೊಟ್ಟೆ ಎಸೆದ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ. ಮೊಟ್ಟೆ ಎಸೆದವ ಬಿಜೆಪಿನಾ, ಕಾಂಗ್ರೆಸಾ ಎನ್ನುವಾಗಲೇ ವಿಚಾರ ಬೇರೆ ತಿರುವು ಪಡೆದುಕೊಂಡಿದೆ. ಸಿದ್ದರಾಮಯ್ಯ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ನಾನ್ ವೆಜ್ ತಿಂದು ಹೋಗಿದ್ರು ಅನ್ನೋ ಬಿಜೆಪಿಗರ ಆರೋಪದ ನಡುವೆ ಸಂಸದ ಪ್ರತಾಪ್ ಸಿಂಹ ಮತ್ತೊಂದು ವಿಚಾರವನ್ನು ಎಳೆದು ತಂದಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ 2017 ರಲ್ಲಿ ಲಲಿತ ಮಹಲ್ ಹೋಟೆಲ್ ನಲ್ಲಿ ನಾಟಿ ಕೋಳಿ ಸಾರು ತಿಂದು ದಸರಾ ಉದ್ಘಾಟನೆ ಮಾಡಿದ್ರು ಅಂತಾ ಆರೋಪಿಸಿದ್ದಾರೆ. ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡ ಎಂದು ದೇವರು ಹೇಳಿದ್ಯಾ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರೋ ಸಂಸದ ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹಾ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ತಮ್ಮ ಶಿಷ್ಯ ಜಮೀರ್ ಅಹ್ಮದ್​ಗೆ ಹಂದಿ ಮಾಂಸ ತಿನ್ನಿಸಿ ತೋರಿಸಲಿ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

ಇನ್ನೂ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ಒಬ್ಬ ಜೋಕರ್. ಸಿದ್ದರಾಮಯ್ಯ ಬೆಂಗಳೂರಿನಿಂದ ನೇರವಾಗಿ ಹೆಲಿಕಾಪ್ಟರ್‌ನಲ್ಲಿ ಬಂದ್ರು. ದಸರಾ ಉದ್ಘಾಟನೆ ವೇಳೆ ಊಟಕ್ಕೆ ಲಲಿತಮಹಲ್ ಹೋಟೆಗೆ ಹೋಗಿಯೇ ಇಲ್ಲ. ಸಿದ್ದರಾಮಯ್ಯ ನಾಟಿ ಕೋಳಿ ತಿಂದು ದರಸಾ ಉದ್ಘಾಟನೆ ಮಾಡಿದ್ರು ಅನ್ನೋದಕ್ಕೆ ಸಾಕ್ಷಿ ಇದ್ರೆ ಬಿಡುಗಡೆ ಮಾಡಲಿ, ಇಷ್ಟು ವರ್ಷಗಳಿಂದ ಹೇಳದೆ ಇವಾಗ ಯಾಕೆ ಹೇಳ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮನೆಯಲ್ಲಿರೋ ಮಹಿಳೆಯರನ್ನ ಸಂಸದ ಪ್ರತಾಪ್ ಸಿಂಹ ಯಾಕೆ ಎಳೆದು ತರ್ತಿದ್ದಾರೆ. ಸಿದ್ದರಾಮಯ್ಯ ಪತ್ನಿ ಜೊತೆ ಮಾತನಾಡೋಕೆ ಯೋಗ್ಯತೆ ಇದ್ಯಾ ಎಂದು ಕಿಡಿಕಾರಿದ್ದಾರೆ.

ಇನ್ನು, ಚಾಮರಾಜ ನಗರದಲ್ಲಿ ಮಾತನಾಡಿದ ಶಾಸಕ ಯತೀಂದ್ರ ಪ್ರತಾಪ್‌ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ರು. ಬೈಟ್. ಯತೀಂದ್ರ ಸಿದ್ದರಾಮಯ್ಯ, ಶಾಸಕ ಇಷ್ಟಕ್ಕೆ ನಿಂತಿಲ್ಲ ಕೋಳಿ ಮಾಂಸದ ಕಥೆ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಮತ್ತೆ ತಿರುಗಿಬಿದ್ದಿದ್ದಾರೆ.

ಒಟ್ಟಿನಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ ಗೆ ಮೊಟ್ಟೆ ಎಸೆತ ಪ್ರಕರಣ ಹಲವು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಮೊಟ್ಟೆ ವಿಚಾರ ಈಗ ಮಾಂಸಹಾರ ಸೇವನೆಗೆ ಬಂದು ನಿಂತಿದೆ. ಆದ್ರೆ ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಮಾಡೋದು ಬಿಟ್ಟು ಅನಗತ್ಯವಾಗಿ ಚರ್ಚೆಯಾಗ್ತಿರೊದು ದುರದೃಷ್ಟಕರ ವಿಚಾರವೇ ಸರಿ.

ಸುರೇಶ್ ಬಿ ಪವರ್ ಟಿವಿ ಮೈಸೂರು.

RELATED ARTICLES

Related Articles

TRENDING ARTICLES