Monday, December 23, 2024

ರಂಗೇರಲಿರೋ ಲಕ್ಕಿಮ್ಯಾನ್.. ಕಿಚ್ಚ – ಪ್ರಭುದೇವ ಕಮಿಂಗ್

ರಾಜರತ್ನ ಅಪ್ಪು ಕಟ್ಟ ಕಡೆಯ ಕಮರ್ಷಿಯಲ್ ಚಿತ್ರ ಲಕ್ಕಿಮ್ಯಾನ್ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಆದ್ರೆ ಅದಕ್ಕೂ ಮುನ್ನ ಆಡಿಯೋ ಲಾಂಚ್ ಇವೆಂಟ್​ಗೆ ಸಕಲ ಸಿದ್ಧತೆ ನಡೆಯುತ್ತಿದೆ. ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಹಾಗೂ ಪ್ರಭುದೇವ ಸಾಕ್ಷಿ ಆಗಲಿರೋ ಕಲರ್​ಫುಲ್ ಕಾರ್ಯಕ್ರಮದ ಬಗ್ಗೆ ಸ್ಪೆಷಲ್ ಪ್ಯಾಕೇಜ್ ನಿಮಗಾಗಿ ಕಾಯ್ತಿದೆ ಹಾಗಾದರೆ ಈ ಸ್ಟೋರಿ ಓದಿ.

  • ಇದು ರಾಜರತ್ನ ಅಪ್ಪು ಕಟ್ಟ ಕಡೆಯ ಕಮರ್ಷಿಯಲ್ ಚಿತ್ರ..!
  • ಡಾರ್ಲಿಂಗ್ ನಿಜಕ್ಕೂ ಲಕ್ಕಿಮ್ಯಾನ್.. ರಿಲೀಸ್​ಗೆ ಕೌಂಟ್​ಡೌನ್
  • ವೇದಿಕೆ ಹಂಚಿಕೊಳ್ತಾರಾ ಅಶ್ವಿನಿ ಪುನೀತ್ ರಾಜ್​ಕುಮಾರ್..?

ಪಕ್ಕಾ ಯೂತ್​ಫುಲ್ ಎಂಟರ್​ಟೈನರ್ ಲಕ್ಕಿಮ್ಯಾನ್ ರಿಲೀಸ್​ಗೆ ಮುಹೂರ್ತ ನಿಗದಿ ಆಗಿದೆ. ಇದೇ ಸೆಪ್ಟೆಂಬರ್ 9ಕ್ಕೆ ವರ್ಲ್ಡ್​ವೈಡ್ ಸಿನಿಮಾ ರಿಲೀಸ್ ಆಗ್ತಿದ್ದು, ರಾಜರತ್ನ ಅಪ್ಪು ನಟನೆಯ ಕಟ್ಟ ಕಡೆಯ ಕಮರ್ಷಿಯಲ್ ಸಿನಿಮಾ ಅನ್ನೋದನ್ನ ಮರೆಯೋ ಹಾಗಿಲ್ಲ.

ರೀಸೆಂಟ್ ಆಗಿ ರಿಲೀಸ್ ಆದ ಟೀಸರ್ ಎಲ್ಲರನ್ನ ಭಾವುಕಗೊಳಿಸಿತ್ತು. ನಗುಮುಖದ ರಾಜಕುಮಾರ ಅಪ್ಪು, ದೇವರ ರೂಪದಲ್ಲೇ ಕಾಣಸಿಗೋ ಪಾತ್ರ ಎಲ್ಲರ ಕಣ್ಣನ್ನ ಒದ್ದೆಯಾಗಿಸಿತ್ತು. ನಾಯಕನಟ ಡಾರ್ಲಿಂಗ್ ಕೃಷ್ಣ ಆದ್ರೂ ಇಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ದೊಡ್ಮನೆ ರಾಜಕುಮಾರ ಪುನೀತ್.

ಡ್ಯಾನ್ಸ್ ಕಿಂಗ್ ಪ್ರಭುದೇವ ಅವ್ರ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಸಿನಿಮಾ ತಮಿಳಿನ ಓ ಮೈ ಕಡವುಲೇ ಚಿತ್ರದ ರಿಮೇಕ್ ವರ್ಷನ್. ಪಕ್ಕಾ ಯೂತ್​ಫುಲ್ ಎಂಟರ್​ಟೈನರ್ ಆಗಿರಲಿರೋ ಈ ಸಿನಿಮಾ ಟೀಸರ್ ಹಾಗೂ ಸಿಂಗಲ್ ಸಾಂಗ್​ನಿಂದ ಸದ್ದು ಮಾಡ್ತಿದೆ. ಇದೀಗ ಆಡಿಯೋ ಲಾಂಚ್​ಗೆ ಪ್ಲಾನ್ ಮಾಡಿದೆ ಟೀಂ. ಇದೇ ಆಗಸ್ಟ್ 23ರ ಮಂಗಳವಾರ ಸಂಜೆ ದೊಡಡ್ ವೇದಿಕೆಯಲ್ಲಿ ಲಕ್ಕಿಮ್ಯಾನ್ ಆಡಿಯೋ ಅನಾವರಣಗೊಳ್ಳಲಿದೆ.

ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ರೋಷಿಣಿ ಪ್ರಕಾಶ್ ಹಾಗೂ ಸಂಗೀತಾ ಶೃಂಗೇರಿ ಲೀಡ್​ನಲ್ಲಿದ್ದು, ಗೆಸ್ಟ್ ಅಪಿಯರೆನ್ಸ್​ನಲ್ಲಿ ಅಪ್ಪು ಕಾಣಸಿಗಲಿದ್ದಾರೆ. ಅದ್ರಲ್ಲೂ ಅಪ್ಪು ಹಾಗೂ ಪ್ರಭುದೇವ ಒಟ್ಟಿಗೆ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದು, ಇದು ಚಿತ್ರದ ಮೈಲೇಜ್ ಹೆಚ್ಚಿಸಲಿದೆ. ಇನ್ನು ಆಡಿಯೋ ಲಾಂಚ್ ಫಂಕ್ಷನ್​ಗೆ ಪ್ರಭುದೇವ ಹಾಗೂ ಕಿಚ್ಚ ಸುದೀಪ್ ಆಗಮಿಸುತ್ತಿದ್ದು, ವೇದಿಕೆ ಸಖತ್ ರಂಗೇರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES