ಕೊಡಗು : ರಾಜ್ಯದಲ್ಲಿ ತಾರಕಕ್ಕೇರಿರುವ ಕೈ, ಕಮಲ ಪಡೆಗಳ ಮೊಟ್ಟೆ ಮಹಾಯುದ್ಧ ಕಾವೇರಿದೆ. ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣವನ್ನು ಕೈ ನಾಯಕರು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಹೀಗಾಗಿ ಮಡಿಕೇರಿ ಚಲೋಗೆ ಬರದ ಸಿದ್ದತೆಯಾಗುತ್ತಿದ್ದು, ಕೆಪಿಸಿಸಿ ಕಚೇರಿಯಲ್ಲಿ ಸಿದ್ದತೆಯ ರೂಪುರೇಷೆ ನಿರ್ಮಾಣವಾಗುತ್ತಿದೆ. 10 ಸಾವಿರಕ್ಕೂ ಅಧಿಕ ಜನರ ಮೂಲಕ SP ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ತಯಾರಿ ನಡೆಸಿದ್ದಾರೆ. ಅಲ್ಲದೇ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಬಿಜೆಪಿ ಶಕ್ತಿ ವರ್ದಿಸಿಕೊಳ್ಳುತ್ತಿದ್ದು, ಕಾಂಗ್ರೆಸ್ ಈ ಮೂಲಕ ನೆಲೆ ಕಂಡುಕೊಳ್ಳಲು ಹೊರಟಿದೆ. ಹೀಗಾಗಿ ಈಗಾಗಲೇ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ನಡೆಸಲಾಗಿದ್ದು ಮಡಿಕೇರಿ ಚಲೋಗೆ ಹೆಚ್ಚು ಜನರನ್ನು ಸೇರಿಸಲು ಸೂಚಿಸಲಾಗಿದೆ.
ಆದ್ರೆ, ಕಾಂಗ್ರೆಸ್ ಪಾಳೆಯದಲ್ಲಿ ಕಳೆದ ಒಂದು ದಿನದಿಂದ ಬೇರೆಯದೇ ಚರ್ಚೆಯಾಗುತ್ತಿದೆ. ಅದೆನಂದ್ರೆ ಕಾಂಗ್ರೆಸ್ ಹೋರಾಟವನ್ನು ಹತ್ತಿಕ್ಕಲು ಜನಜಾಗ್ರತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಅಂತ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ನಿಂದ ಮೊದಲು ಮಡಿಕೇರಿ ಚಲೋ ರ್ಯಾಲಿ ಘೋಷಣೆಯಾಗಿದೆ.ಕೊಡಗು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.ಈ ಮೂಲಕ ಕೊಡಗಿನಲ್ಲೂ ಶಕ್ತಿ ಪ್ರದರ್ಶನಕ್ಕೆ ಕೈ ಪಡೆ ಮುಂದಾಗಿದೆ. ಆದ್ರೆ ಕಾಂಗ್ರೆಸ್ ರ್ಯಾಲಿ ಸಕ್ಸಸ್ ಆದ್ರೆ ಬಿಜೆಪಿ ಗೆ ಮುಖಭಂಗವಾಗಲಿದೆ. ಹೀಗಾಗಿಯೇ ಬಿಜೆಪಿಯಿಂದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.ಒಂದೇ ದಿನ ಎರಡು ಕಾರ್ಯಕ್ರಮ ನಡೆಯೋದ್ರಿಂದ ಕಾನೂನು ಸುವ್ಯವಸ್ಥೆ ಕಷ್ಟ.ಕೊಡಗು ಸೂಕ್ಷ್ಮ ಪ್ರದೇಶವಾದ್ದರಿಂದ ಕೈ-ಕಮಲದ ನಡುವೆ ಜಟಾಪಟಿ ಆಗಬಹುದು.ಹೀಗಾಗಿ 144 ಸೆಕ್ಷನ್ ಹಾಕಿ ಕಾಂಗ್ರೆಸ್ ಹೋರಾಟವನ್ನು ಹತ್ತಿಕ್ಕೋ ಅನುಮಾನ ಕೈ ನಾಯಕರನ್ನು ಕಾಡುತ್ತಿದೆ. ಇದಕ್ಕೊಸ್ಕರ ಅಂದೇ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಕೈ ನಾಯಕರು ಚರ್ಚಿಸುತ್ತಿದ್ದಾರೆ.
ಕೈ- ಕಮಲ ನಾಯಕರು ಒಂದೇ ಕಡೆ ಕಾರ್ಯಕ್ರಮ ರೂಪಿಸಿರೋದ್ರಿಂದ ಜಟಾಪಟಿ ಏರ್ಪಡುವ ಸಾಧ್ಯತೆಯಿದೆ. ಹೀಗಾಗಿ ಇಬ್ಬರನ್ನು ಕಂಟ್ರೋಲ್ ಮಾಡೋದು ಪೊಲೀಸರಿಗೆ ಸವಾಲಾಗಿದೆ. ಹೀಗಾಗಿ ಪೊಲೀಸರು ಈ ಎರಡು ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಾರಾ ಇಲ್ಲವೋ ಅನ್ನೊದನ್ನು ಕಾದು ನೋಡಬೇಕಿದೆ.
ರೂಪೇಶ್ ಬೈಂದೂರು ಪವರ್ ಟಿವಿ ಬೆಂಗಳೂರು