Monday, December 23, 2024

ಸಿದ್ದರಾಮಯ್ಯ ಮೇಲೆ ಬೆರಳು ತೋರಿಸಿದ್ರೆ, ಮನೆ ಬಿಟ್ಟು ಬರಲ್ಲ: ಜಗ್ಗೆಶ್​ಗೆ ಎಂಬಿಪಿ ಎಚ್ಚರಿಕೆ

ಚಿತ್ರದುರ್ಗ: ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಸರ್ಕಾರದಲ್ಲಿದ್ದಾರೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಇಂತಹ ಹೇಳಿಕೆ ಬಗ್ಗೆ ಅವರಿಗೆ ಸ್ವಲ್ವ ಅರಿವು ಇಲ್ಲ ಅಂದರೆ ರಾಜ್ಯಸಭಾ ಸದಸ್ಯರಾಗಲು ಅಯೋಗ್ಯರು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಕೊಡಗುದಲ್ಲಿ ಕಾಂಗ್ರೆಸ್​ ಪ್ರತಿಭಟನೆ ಮಾಡಿದರೆ ಹೆಣ ಬೀಳುತ್ತದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಹೆಣ ಬೀಳುತ್ತಾವೆ ಎಂದು ಹೇಳುತ್ತಾರೆ. ಇಂತವರು ಅಮಾಯಕರ ಹೆಣ ಬೀಳಲು ಪಣ ತೊಟ್ಟಿದ್ದಾರೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ದೊಡ್ಡ ಶಕ್ತಿ. ಸಿದ್ದರಾಮಯ್ಯ ಬೆರಳು ಮಾಡಿ ತೋರಿಸಿದ್ರೆ, ಇವರು ಮನೆ ಬಿಟ್ಟು ಬರಲ್ಲ. ಅಂಥ ಕೆಲಸ ಸಿದ್ದರಾಮಯ್ಯ ಮಾಡಲ್ಲ, ಕಾರಣ ಪ್ರಜಾಪ್ರಭುತ್ವದಲ್ಲಿ ಅವರಿಗೆ ನಂಬಿಕೆ ಇದೆ. ಜಗ್ಗೇಶ್, ಸಂಸದ ಪ್ರತಾಪ್ ಸಿಂಹ ಸೇರಿ ಕೆಲವರಿದ್ದಾರೆ, ಬೇರೆ ಕೆಲಸ ಇಲ್ಲ ಎಂದು ಎಂಬಿಪಿ ತಿಳಿಸಿದರು.

ಜಗ್ಗೇಶ್ ಅವರೇ ಸಿದ್ದರಾಮಯ್ಯ ಶಕ್ತಿ ನಿಮಗೆ ಗೊತ್ತಿಲ್ಲ. ಅಂಥ ಕೆಲಸ ಮಾಡಲ್ಲ, ಮಾಡಲು ಕೂಡಾ ಬಿಡಲ್ಲ. ಇಂಥ ಚಿಲ್ಲರೆ ಕೆಲಸ ಸರ್ಕಾರ ವೈಪಲ್ಯ ಮುಚ್ಚಿಕೊಳ್ಳಲು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ 15 ಲಕ್ಷ ಮನೆ ಕಟ್ಟಿಕೊಟ್ಟಿದ್ದರು. ರಾಜ್ಯ ಸರ್ಕಾರ ಒಂದು ಮನೆ ಕಟ್ಟಿ ಕೊಟ್ಟಿಲ್ಲ. ಜನರ ಭಾವನೆ ಕೆರಳಿಸದೆ, ಬದುಕು ಕಟ್ಟಿಕೊಡುವ ಕೆಲಸ ಮಾಡಿ ಎಂದು ಎಂಬಿ ಪಾಟೀಲ್ ತಿಳಿ ಹೇಳಿದರು.

RELATED ARTICLES

Related Articles

TRENDING ARTICLES