Thursday, December 19, 2024

ರಾಹುಲ್ ದ್ರಾವಿಡ್’ಗೆ ಕೊರೊನಾ ಪಾಸಿಟಿವ್.!

ಬೆಂಗಳೂರು: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ ಎಂದು ಬಿಸಿಸಿಐ ಖಚಿತಪಡಿಸಿದೆ.

ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಗಸ್ಟ್​ 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ. ಹೀಗಾಗಿ ಇಂದು ಏಷ್ಯಾ ಕಪ್ ಟೂರ್ನಿ ಗಾಗಿ ಯುಎಇಗೆ ತೆರಳುವ ವೇಳೆಯಲ್ಲಿ ನಡೆಸಲಾದ ಕೋವಿಡ್​ ಪರೀಕ್ಷೆಯಲ್ಲಿ ದ್ರಾವಿಡ್​ಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ.

ಈ ಹಿನ್ನಲೆಯಲ್ಲಿ ದ್ರಾವಿಡ್​ ಏಷ್ಯಾಕಪ್​ನಿಂದ ಹೊರಗುಳಿಯಲಿದ್ದಾರೆ. ಕೋವಿಡ್​ನಿಂದ ಚೇತರಿಕೆ ಕಂಡ ನಂತರ ಯಾವ ಕ್ಷಣದಲ್ಲಿ ಮರಳಿ ಭಾರತ ತಂಡಕ್ಕೆ ಸೇರಿಕೊಳ್ಳಬಹುದು ಎಂದು ಬಿಸಿಸಿಐ ತಿಳಿಸಿದೆ.

ಸೋಮವಾರ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದ್ರಾವಿಡ್ ಜಿಂಬಾಬ್ವೆ ಪ್ರವಾಸ ಕೈಗೊಂಡಿರಲಿಲ್ಲ.

RELATED ARTICLES

Related Articles

TRENDING ARTICLES