Wednesday, January 22, 2025

ವೀರ ಸಾವರ್ಕರ್ ಜನಜಾಗೃತಿ ರಥಯಾತ್ರೆಗೆ ಬಿಎಸ್​ವೈ ಚಾಲನೆ

ಮೈಸೂರು: ವೀರ ಸಾವರ್ಕರ್ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಒಂದು ವಾರದವರೆಗೆ ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ.

ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಇಂದಿನಿಂದ ಒಂದು ವಾರದವರೆಗೆ ರಥಯಾತ್ರೆಯೊಂದನ್ನು ಆಯೋಜಿಲಾಗಿದೆ. ರಥದ ಹಾಗೆ ಅಲಂಕೃತಗೊಂಡಿರುವ ಈ ವಾಹನಕ್ಕೆ ಎಲ್​ಇಡಿ ಪರದೆ ಕಟ್ಟಲಾಗಿದ್ದು, ಅದರಲ್ಲಿ ಸಾವರ್ಕರ್ ಬದುಕು, ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನಿರ್ವಹಿಸಿದ ಪಾತ್ರ ಮೊದಲಾದ ಸಂಗತಿಗಳು ರಥಯಾತ್ರೆಯಲ್ಲಿ ಬಿತ್ತರಗೊಳ್ಳುತ್ತವೆ.

ಈ ವೇಳೆ ಮಾತನಾಡಿ, ಯಾರು ಏನೇ ಹೇಳಿದರೂ ವೀರ ಸಾವರ್ಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ದೇಶ ಪ್ರೇಮಿಯ ಕುರಿತು ಜನರಿಗೆ ಸಂದೇಶ ನೀಡುವ ದೃಷ್ಟಿಯಿಂದ ಈ ರಥ‌ಯಾತ್ರೆ ನಡೆಯಲಿದೆ ಎಂದಿದ್ದಾರೆ.

ಇನ್ನು, ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ವಿಚಾರವಾಗಿ ಮಾತನಾಡಿ ನಾನು ಮತ್ತು ಸಿಎಂ ಈಗಾಗಲೇ ಕ್ಷಮೆ ಕೇಳಿದ್ದೇವೆ. ಆ ನಂತರವೂ ಸಿದ್ದರಾಮಯ್ಯ ಹಠಮಾರಿ ಧೋರಣೆ ಬಿಡಬೇಕು. ಆಗಸ್ಟ್​​ 26ರಂದು ಕೊಡಗಿಗೆ ಪಾದಯಾತ್ರೆ ಕಾರ್ಯಕ್ರಮ ನಡೆಸುತ್ತಿರುವುದು ಕೆಟ್ಟ ಬೆಳವಣಿಗೆ ಎಂದು ಅಸಮಾಧಾನ ಹೊರಹಾಕಿದರು.

RELATED ARTICLES

Related Articles

TRENDING ARTICLES