ಹಾವೇರಿ: ನನಗೆ ಮಂತ್ರಿ ಸ್ಥಾನ ನೀಡುತ್ತೇನೆ ಎಂದು ಆಮೀಷ ಒಡ್ಡಿದ್ದರು, ಆದ್ರೆ ನಾನು ಮೀಸಲಾತಿ ಕೊಡ್ರಿ ಅಂತಾ ಹೇಳಿದ್ದೇನೆ. ನುಡಿದಂತೆ ನಡೆಯುವಂತೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.
ಶಿಗ್ಗಾಂವ್ ಪಟ್ಟಣದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಯತ್ನಾಳ್, ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಹೋಗಿದ್ದ ವೇಳೆ ತಿರುಪತಿಯಲ್ಲಿ ಮಾತುಕತೆ ಏನಾಗಿದೆ ಎಂದು ಗೊತ್ತಾಗ್ತಿಲ್ಲ. ತಿರುಪತಿಯೊಳಗ ಒಂದು ಒಪ್ಪಂದ, ಆರ್ ಟಿ ನಗರದ ನಿವಾಸದಲ್ಲಿ ಒಂದು ಒಪ್ಪಂದ ಮಾಡ್ಕೊತಾರ ನಮಗೊಂದು ಹೇಳ್ತಾರ. ಇಂತಹ ಸರ್ಕಾರದಾಗ ಮಂತ್ರಿ ಆಗೋದ ಬೇಡ ಅಂತಾ ನಿರ್ಣಯ ಮಾಡಿದ್ದೇನೆ ಎಂದು ಯತ್ನಾಳ್ ಹೇಳಿದರು.
ಆರು ತಿಂಗಳ ಸಲುವಾಗಿ ನಾನು ಮಂತ್ರಿ ಆಗಲ್ಲ. ಮೀಸಲಾತಿ ಕೊಡಲಿಲ್ಲ ಅಂದ್ರೆ ಬೊಮ್ಮಾಯಿಯವರೆ ನಿಮ್ಮದು ನಮ್ಮದು ದೀಪ ಆರುತ್ತೆ ವಿರೋದ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಹೊಸ ಕ್ರಾಂತಿಗೆ ಬೆಂಗಳೂರು ಸಮಾವೇಶ ಕಾರಣವಾಗುತ್ತದೆ. ನಮ್ಮ ತಾಕತ್ ಅಕ್ಟೋಬರ್ 23 ತೋರಿಸ್ತಿವಿ ಎಂದರು.
ಇನ್ನು ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಸೆಪ್ಟೆಂಬರ್ 26 ರಂದು ಶಿಗ್ಗಾಂವ್ ಪಟ್ಟಣದಲ್ಲಿ ಒಂದು ಲಕ್ಷ ಜನರು ಸೇರಿ ಹೋರಾಟ ನಡೆಯಲಿದೆ. ಬಳಿಕ ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಶಕ್ತಿ ಪ್ರದರ್ಶನ
ಅಕ್ಟೋಬರ್ 23 ರಂದು ಬೆಂಗಳೂರಿನಲ್ಲಿ 25 ಲಕ್ಷ ಜನ ಸೇರಿ ಹೋರಾಟ ಅದು ಕೊನೆಯ ಹೋರಾಟ ಆಗಲಿದೆ. ಆ ಸಮಾವೇಶದಲ್ಲಿ ಎಲ್ಲಾ ವಿಚಾರ ಹೇಳುತ್ತೇನೆ ಎಂದು ಯತ್ನಾಳ್ ತಿಳಿಸಿದರು.