Monday, December 23, 2024

NDTVಯ 29.18 ರಷ್ಟು ಪಾಲು ಖರೀದಿಗೆ ಮುಂದಾದ ಅದಾನಿ ಗ್ರೂಪ್​.!

ನವದೆಹಲಿ: ಅದಾನಿ ಸಂಸ್ಥೆಯ ಒಡೆತನದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ (ಎಎಂಎನ್‌ಎಲ್) ಎನ್‌ಡಿಟಿವಿಯಲ್ಲಿ ಸುಮಾರು 29.18 ಪಾಲನ್ನು ಖರೀದಿ ಮಾಡಲು ಮುಂದಾಗಿದೆ.

ಅದಾನಿ ಗ್ರೂಪ್‌ನ ಈ ಹೇಳಿಕೆ ಬಿಡುಗಡೆ ಮಾಡಿದೆ ಎಂದು ಎಎನ್​ಐ ಟ್ವೀಟ್​ ಮಾಡಿ, ಎನ್​ಟಿವಿಯ 29.18 ಪಾಲನ್ನು ಖರೀದಿಸಲು ಮುಂದಾಗಿದೆ. ಇದನ್ನ ಖರೀದಿ ಮಾಡುವ ಮೂಲಕ ಮಾಧ್ಯಮದ ಹೊಸ ಯುಗದ ಹಾದಿಯನ್ನು ಸುಗಮಗೊಳಿಸುವ ಈ ಎಎಂಎನ್​ಎಲ್​ ಗ್ರೂಪ್​ನ ಗುರಿಯಾಗಿದೆ. ಇದನ್ನ ಖರೀದಿ ಮಾಡುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ ಎಂದು ಹೇಳಿದೆ. ದೇಶದ ಪ್ರಮುಖ ಸುದ್ದಿ ಮಾದ್ಯಮದಲ್ಲಿ ಒಂದಾದ ಎನ್‌ಡಿಟಿವಿ ಸುದ್ದಿ ಕೊಡುವಲ್ಲಿ ಸದಾ ಮುಂದಿದ್ದು, ಇದನ್ನ ಬೆಂಬಲಿಸಲು ಹಾಗೂ ಬಲಪಡಿಸಲು ನಾವು ಕಾತುರರಾಗಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಆದರೆ ಎನ್‌ಡಿಟಿವಿ ಈ ವದಂತಿಯನ್ನು ತಳ್ಳಿ ಹಾಕಿದ್ದು, ಆರ್‌ ಆರ್‌ ಆರ್‌ ಆರ್‌ ಮೂಲಕ ಎನ್‌ಡಿಟಿವಿಯ ಯಾವುದೇ ಷೇರುಗಳು ಮಾರಾಟಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

RELATED ARTICLES

Related Articles

TRENDING ARTICLES