Monday, January 27, 2025

ಯುವ ರಾಜಕಾರಣಿಗಳಿಗೆ ಆದರ್ಶವಾಗುವ ಗುಣ ಸಿದ್ರಾಮಯ್ಯ ಬಳಿ ಇಲ್ಲ : ಸುನೀಲ್​ಕು​ಮಾರ್​

ಕಲಬುರಗಿ : ಯುವ ರಾಜಕಾರಣಿಗಳಿಗೆ ಆದರ್ಶವಾಗುವಂತಹ ಗುಣ ಸಿದ್ರಾಮಯ್ಯ ಅವರ ಬಳಿ ಯಾವುದೂ ಇಲ್ಲ ಎಂದು ಕಲಬುರಗಿಯಲ್ಲಿ ಇಂಧನ ಸಚಿವ ಸುನೀಲ್​ಕು​ಮಾರ ಹೇಳಿದ್ದಾರೆ.

ಇನ್ನು, ಮಾಂಸ ತಿಂದು ಕೃಷ್ಣ ಮಂದಿರಕ್ಕೆ ಸಿದ್ದರಾಮಯ್ಯ ಭೇಟಿ ವಿಚಾರಕ್ಕೆ ಸಂಭಂದಿಸಿದಂತೆ ಮಾತನಾಡಿದ ಅವರು, ಅವರ ನಡವಳಿಕೆ ಅವರ ಹೇಳಿಕೆಗಳಲ್ಲಿ ಒಬ್ಬ ಮುತ್ಸದ್ದಿ ರಾಜಕಾರಣಿ ಎನ್ನುವಂತಹ ಯಾವುದೇ ಲಕ್ಷಣಗಳು ಇಲ್ಲ. ಸಿದ್ದರಾಮಯ್ಯನವರ ಹತ್ರ ನೋಡಿ ಕಲಿಯುವಂತದ್ದೇನಿದೆ ? ಪ್ರತಿ ಸರಿ ಸುಳ್ಳು ಮಾತಾಡ್ತಾರೆ, ಪ್ರತಿ ಬಾರಿ ಸಮಾಜಕ್ಕೆ ವಿರುದ್ಧವಾದ ಹೇಳಿಕೆ ನೀಡ್ತಾರೆ ಎಂದರು.

ಅದಲ್ಲದೇ, ಸಮಾಜದ ನಡುವೆ ಜಾತಿಯ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಾರೆ. ಅವರಿಂದ ಕಲಿತುಕೊಳ್ಳುವಂತದ್ದು ಯಾವುದು ಕೂಡ ಇವತ್ತಿನ ಯುವರಾಜಕಾರಣಿಗಳಿಗೆ ಇಲ್ಲ. ಹಾಗಾಗಿ ಇಡೀ ರಾಜ್ಯದ ಯುವ ಸಮುದಾಯ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಪ್ರಶ್ನೆ ಇಲ್ಲ. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದು ತಪ್ಪು ಎಂದು ನಾನೆಲ್ಲೂ ಹೇಳುತ್ತಿಲ್ಲ. ದೇವಸ್ಥಾನಗಳಿಗೆ ಹೇಗೆ ಹೋಗಬೇಕು ಎನ್ನುವುದು ಕೆಲವರ ಭಾವನೆಗೆ ಸಂಬಂಧಪಟ್ಟದ್ದು. ಅವರವರ ಭಾವನೆಗೆ ತಕ್ಕಂತೆ ಅವರವರು ನಡೆದುಕೊಳ್ಳುತ್ತಾರೆ. ಸಿದ್ದರಾಮಯ್ಯನವರಿಗೆ ಯಾವ ಭಾವನೆ ಇದೆ ನನಗೆ ಗೊತ್ತಿಲ್ಲ. ಅವರು ಒಳಗೊಂದು ಮಾತನಾಡುತ್ತಾರೆ ಹೊರಗೊಂದು ಮಾತನಾಡುತ್ತಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES