Monday, December 23, 2024

ಸಪ್ತಸಾಗರದಾಚೆ ಸಿಕ್ಕ ಚೈತ್ರ ಲಾಕ್.. ಸಾಯಿ ಪಲ್ಲವಿ ಫೇಕ್

777 ಚಾರ್ಲಿ ಸಿನಿಮಾ ವರ್ಲ್ಡ್​ ವೈಡ್​​ ಹಿಟ್​ ಆದ್ಮೇಲೆ ಎಲ್ಲರ ಚಿತ್ತ ರಕ್ಷಿತ್ ಶೆಟ್ಟಿ​ ಮೇಲಿದೆ. ಸದ್ಯ, ಸಪ್ತ ಸಾಗರದಾಚೆ ಎಲ್ಲೋ ಕಳೆದು ಹೋಗಿರುವ ಧರ್ಮನ ಮುಂದಿನ ಸಿನಿಮಾ ಮೇಲೆ  ಸಖತ್ ಕ್ಯೂರಿಯಾಸಿಟಿ ಇದೆ. ಇದೀಗ ರಕ್ಷಿತ್​ಗೆ ಜೋಡಿಯಾಗಿ ಹೊಸ ನಾಯಕಿ ಸಿಕ್ಕಿದ್ದಾರೆ.  ಸೀರೆ ಉಟ್ಟು ಬಂದ ದುಂಡು ಮಲ್ಲಿಗೆಯ ಬೆಡಗಿ ಯಾರ್​ ಗೊತ್ತಾ..? ಈ ಸ್ಟೋರಿ ಓದಿ.

  • ದುಂಡು ಮಲ್ಲಿಗೆಯ ಮುಡಿದು ಬಂದ ಸುಂದರಿ ಸುರಭಿ..!

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಡೈರೆಕ್ಟ್ ಮಾಡಿದ್ದ ಹೇಮಂತ್​ ರಾವ್​ ಹಾಗೂ ರಕ್ಷಿತ್​ ಶೆಟ್ಟಿ  ಕ್ರೇಜಿ ಕಾಂಬಿನೇಷನ್​​ ಸಿನಿಮಾ ಸಪ್ತಸಾಗರದಾಚೆ ಎಲ್ಲೋ. ಸದ್ಯ ಸ್ಯಾಂಡಲ್​ವುಡ್​ ಟಾಪ್​ ಮೋಸ್ಟ್​ ನಟರ ಸಾಲಿನಲ್ಲಿರೋ ರಕ್ಷಿತ್​ ಸಖತ್​ ಚ್ಯುಸಿಯಾಗಿರೋದಂತು ಸತ್ಯ. ಹಾಗಾಗಿ ಈ ಚಿತ್ರದ ಮೇಲಿನ ನಿರೀಕ್ಷೆಗಳು ನೂರು ಪಟ್ಟು ಹೆಚ್ಚಾಗಿವೆ. ಕೆಲವು ದಿನಗಳಿಂದ ಸಪ್ತಸಾಗರ ಟೀಮ್​ಗೆ ಸಾಯಿ ಪಲ್ಲವಿ ಎಂಟ್ರಿ ಕೊಡ್ತಾರೆ ಅನ್ನೋ ಗಾಸಿಪ್​ ಸಿನಿಪ್ರಿಯರ ದಿಲ್​ ಖುಷ್ ಮಾಡಿತ್ತು. ಇದೀಗ ಈ ಸುದ್ದಿ ಫೇಕ್​ ಆಗಿದೆ. ದುಂಡು ಮಲ್ಲಿಗೆಯ ಹೊಸ ಬೆಡಗಿಯ ಎಂಟ್ರಿಯಾಗಿದೆ.

ರುಕ್ಮಿಣಿ ವಸಂತ್​ ಮೊದಲ ನಾಯಕಿಯಾಗಿ ಸಿನಿಮಾಗೆ ಸೆಲೆಕ್ಟ್​ ಆಗಿದ್ದಾರೆ. ಮತ್ತೊಬ್ಬ ಚೆಲುವೆಯ ಹುಡುಕಾಟದಲ್ಲಿದ್ದ ಚಿತ್ರತಂಡದ ಕಣ್ಣಿಗೆ ಬಿದ್ದಿರೋದು ಬೆಂಗಳೂರಿನ ಬೆಡಗಿ ಚೈತ್ರಾ ಜೆ. ಆಚಾರ್. ಇದೀಗ ಹೊಸ ನಾಯಕಿಯ ಪೋಸ್ಟರ್​ ರಿಲೀಸ್​ ಆಗಿದ್ದು, ಸೀರೆ ತೊಟ್ಟು, ದುಂಡು ಮಲ್ಲಿಗೆ ಮುಡಿದು ಸಿನಿಮಾ ಟೀಮ್ ಸೇರಿಕೊಂಡಿದ್ದಾರೆ ಚೈತ್ರಾ. ರಕ್ಷಿತ್​ ಶೆಟ್ಟಿ ನಿರ್ಮಾಣದಲ್ಲಿ ಸಿನಿಮಾ ಕೂಡ ಅದ್ಧೂರಿಯಾಗಿ ಮೂಡಿ ಬರ್ತಿದೆ.

ಸುರಭಿ ರೋಲ್​ನಲ್ಲಿ ಕಾಣಿಸಿಕೊಳ್ಳಲಿರುವ ಚೈತ್ರಾ ಕಾಲೇಜ್​ ಡೇಸ್​ನಲ್ಲಿಯೇ ವೆಬ್ ಸೀರೀಸ್​ಗಳಲ್ಲಿ ಮಿಂಚಿದ್ದಾರೆ. ಬೆಂಗಳೂರು ಕ್ವೀನ್ಸ್​ ವೆಬ್​ ಸೀರೀಸ್​ನಲ್ಲಿ ಮಿಂಚಿದ ಗ್ಲಾಮರಸ್​ ಗೊಂಬೆ ಚೈತ್ರಾ, ಕನ್ನಡದ ತಲೆದಂಡ, ಗಿಲ್ಕಿ, ಆ ದೃಶ್ಯ ಸಿನಿಮಾಗಳಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಮನಮೋಹಕ ಅಭಿನಯದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಛಾಪು ಮೂಡಿಸಿರುವ ಚೈತ್ರಾ ಜೆ. ಆಚಾರ್​ ಭರವಸೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ.

ಕೇವಲ ನಟನೆ ಮಾತ್ರವಲ್ಲದೇ ತಮ್ಮ ಕೋಗಿಲೆ ಕಂಠದ ಮೂಲಕವೂ ಎಲ್ಲರ ಗಮನ ಸೆಳೆದಿರುವ ನಟಿ ಚೈತ್ರಾ ಆಚಾರ್​​. ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜಿ ಮಲ್ಲಿಗೆ ಹಾಡಿಗೆ ಕಂಠ ನೀಡಿರುವ ಚೈತ್ರಾ, ಮಾಯಾಬಜಾರ್​ ಚಿತ್ರದಲ್ಲೂ ತಮ್ಮ ಕಂಠಸಿರಿ ನೀಡಿ ಅಪಾರ ಖ್ಯಾತಿ ಗಳಿಸಿದ್ದಾರೆ. ಸ್ಟ್ರಾ ಬೆರ್ರಿ, ಅಕಟಕಟಾ, ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಲಿರೋ ಚೈತ್ರಾಗೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಗ್​ ಬ್ರೇಕ್​​ ಕೊಡೋ ಗ್ರೀನ್​ ಸಿಗ್ನಲ್​ ಕೊಟ್ಟಿದೆ.

ಚಿತ್ರಕ್ಕಾಗಿ 20 ಕೆಜಿ ವೆಯ್ಟ್​ ಲಾಸ್​​ ಮಾಡಿಕೊಂಡಿರೋ ರಕ್ಷಿತ್​ ಡಿಫರೆಂಟ್​ ಶೇಡ್​ಗಳಲ್ಲಿ ಮಿಂಚ್ತಿದ್ದಾರೆ. ಅಂತೂ ಸಪ್ತಸಾಗರ ಅಡ್ಡಾಗೆ ಎಂಟ್ರಿ ಕೊಟ್ಟಿರೋ ಹೊಸ ನಾಯಕಿಯಿಂದ ಸಿನಿಮಾದ ಶೂಟಿಂಗ್ ಪ್ರೋಸೆಸ್​​​ ಚುರುಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES