Monday, December 23, 2024

ಕ್ರೇಜಿ ಪುತ್ರನ ಅದ್ಧೂರಿ ಮದ್ವೆಯ ಕಲರ್​​​​​ಫುಲ್ ಝಲಕ್

ಕ್ರೇಜಿಸ್ಟಾರ್ ರವಿಮಾಮನ ಮನೆಯಲ್ಲಿ ಶುಭಕಾರ್ಯ ನಡೆದಿದ್ದು, ಮುಂಬೈನಿಂದ ಖುಷ್ಬೂ ಸೇರಿದಂತೆ ಸಾಕಷ್ಟು ತಾರೆಯರು ಅದ್ರ ರಂಗೇರಿಸಿದ್ದಾರೆ. ಇಷ್ಟಕ್ಕೂ ಮನೋರಂಜನ್ ಕೈ ಹಿಡಿದ ಚೆಲುವೆ ಯಾರು..? ಕನಸುಗಾರನ ಮನೆಯಲ್ಲಿನ ಕ್ರೇಜಿ ಸಂಗೀತ್ ಪಾರ್ಟಿ ಹೇಗಿತ್ತು ಅನ್ನೋದ್ರ ಜೊತೆ ಕಲ್ಯಾಣೋತ್ಸವದ ಕಲರ್​ಫುಲ್ ಝಲಕ್ ನಿಮ್ಮ ಮುಂದೆ.

  • ಮನು ಮದ್ವೆಯ ಸಂಗೀತ್ ಪಾರ್ಟಿಯಲ್ಲಿ ಕ್ರೇಜಿ ಡ್ಯಾನ್ಸ್
  • ಸಂಗೀತಾ ಕೈ ಹಿಡಿದ ಜೂ. ಕ್ರೇಜಿಸ್ಟಾರ್ ಮನೋರಂಜನ್
  • ಕನಸುಗಾರನ ಪ್ರೇಮಲೋಕಕ್ಕೆ ಖುಷ್ಬೂ ತಾರಾ ಮೆರುಗು

ಇತ್ತೀಚೆಗಷ್ಟೇ ಮಗಳ ಕಲ್ಯಾಣೋತ್ಸವವನ್ನು ಅದ್ಧೂರಿಯಾಗಿ ಮಾಡಿದ್ದ ಸ್ಯಾಂಡಲ್​ವುಡ್ ಟ್ರೆಂಡ್ ಸೆಟ್ಟರ್ ಡಾ. ವಿ ರವಿಚಂದ್ರನ್, ಇದೀಗ ಹಿರಿಯ ಮಗ ಮನೋರಂಜನ್​ಗೂ ವಿವಾಹ ಮಹೋತ್ಸವ ನೆರವೇರಿಸಿದ್ದಾರೆ. ಪ್ರೇಮಕ್ಕೆ ಅನ್ವರ್ಥ ನಾಮವೇ ರವಿಚಂದ್ರನ್. ಪ್ರೀತಿ, ಪ್ರೇಮದ ಸಂಕೇತವೇ ಸ್ಯಾಂಡಲ್​ವುಡ್ ಶೋಮ್ಯಾನ್ ಕ್ರೇಜಿಸ್ಟಾರ್. ಆದ್ರೆ ಮಕ್ಕಳು ಮಾತ್ರ ತಂದೆ- ತಾಯಿ ತೋರಿಸಿದವ್ರನ್ನ ಅರೇಂಜ್ ಮ್ಯಾರೇಜ್ ಆಗ್ತಿದ್ದಾರೆ. ಇದು ನಿಜಕ್ಕೂ ಮೆಚ್ಚುವ ವಿಚಾರ.

ಅಂದಹಾಗೆ ಮನೋರಂಜನ್ ಕೈ ಹಿಡಿದಿರೋ ಆ ಚೆಲುವೆ ಯಾರು ಅಂದ್ರೆ ಎಂಎಸ್​ಸಿ ಸೈಕಾಲಜಿ ಪದವಿಧರೆ ಸಂಗೀತಾ. ಯೆಸ್.. ಇನ್ಮೇಲೆ ಮನು ಬಾಳಲ್ಲಿ ದಿನನಿತ್ಯ ಸಂಗೀತ ಮೊಳಗಲಿದೆ. ಶನಿವಾರ ಹಾಗೂ ಭಾನುವಾರ ಪ್ಯಾಲೆಸ್ ಗ್ರೌಂಡ್​ನ ವೈಟ್ ಪೆಟಲ್ಸ್​ನಲ್ಲಿ ನಡೆದ ಅದ್ಧೂರಿ ಕಲ್ಯಾಣೋತ್ಸವದಲ್ಲಿ ಹೊಸ ಬಾಳಿಗೆ ಕಾಲಿಟ್ರು ಜೂನಿಯರ್ ಕ್ರೇಜಿಸ್ಟಾರ್.

ಶನಿವಾರ ಸಂಜೆ ಪರಸ್ಪರ ಉಂಗುರ ಬದಲಿಸಿಕೊಳ್ಳೋ ಮೂಲಕ ನಿಶ್ಚಿತಾರ್ಥ ನೆರವೇರಿತು. ನಂತ್ರ ಆರತಕ್ಷತೆ ಕಾರ್ಯಕ್ರಮಕ್ಕೆ ಬಾಲಿವುಡ್​ನ ಖುಷ್ಬೂ, ನಮ್ಮ ಸ್ಯಾಂಡಲ್​ವುಡ್ ಶಿವಣ್ಣ, ರಾಘಣ್ಣ, ಹಂಸಲೇಖ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ತಾರಾ ಮೆರುಗು ತಂದುಕೊಟ್ಟರು.

ಅದಕ್ಕೂ ಮುನ್ನ ಡಾ. ರಾಜ್​ಕುಮಾರ್ ರಸ್ತೆಯಲ್ಲಿರೋ ರವಿಮಾಮನ ಮನೆಯಲ್ಲಿ ಸಂಗೀತ್ ಪಾರ್ಟಿ ತುಂಬಾ ಕಲರ್​ಫುಲ್ ಆಗಿತ್ತು. ಡ್ಯಾನ್ಸೇ ಮಾಡದ ಮಲ್ಲ ಕೂಡ ಮಡದಿ, ಮಕ್ಕಳು ಹಾಗೂ ಅತ್ಯಾಪ್ತರ ಜೊತೆ ಹೆಜ್ಜೆ ಹಾಕಿದ್ರು. ಆ ಅವಿಸ್ಮರಣೀಯ ಕ್ಷಣಗಳು ನೋಡೋಕೆ ಸಖತ್ ಕ್ರೇಜಿಯಾಗಿದ್ದು, ಕ್ರೇಜಿಸ್ಟಾರ್ ಆಫ್​ಸ್ಕ್ರೀನ್ ಲೈಫ್​ ಹೇಗಿರಲಿದೆ ಅನ್ನೋದ್ರ ಪ್ರತೀಕವಾಗಿದೆ. ಅದೇನೇ ಇರಲಿ, ಸಂಗೀತಾ ಕೈ ಹಿಡಿದ ಮನು ಬಾಳು ಬಂಗಾರವಾಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES