Wednesday, January 22, 2025

ವಿಕ್ರಾಂತ್ ರೋಣ ಕ್ಲೀನ್ ಶೇವ್ ಗೆಟಪ್ ಸಖತ್ ವೈರಲ್

ವಿಕ್ರಾಂತ್​ ರೋಣ ಸಿನಿಮಾ ಮೂಲಕ ಬೆಚ್ಚಿ ಬೆವರಿಳಿಸಿದ್ದ ಅಭಿನಯ ಚಕ್ರವರ್ತಿ ಹೊಸ ಅವತಾರದಲ್ಲಿ ಕಾಣಿಸ್ತಿದ್ದಾರೆ.ಆರಡಿ ಕಟೌಟ್​​ ನ್ಯೂ ಲುಕ್​ ಕಂಡು ಫ್ಯಾನ್ಸ್​ ಕೂಡ ಥ್ರಿಲ್​ ಆಗಿದ್ದಾರೆ. ಅರೆ..! ಏನಿದು..? ನಮ್​ ಬಾಸ್​​ ಸಖತ್​ ಆಗಿ ಕಾಣಿಸ್ತಿದ್ದಾರೆ ಅಂತ ಫ್ಲೈಯಿಂಗ್​ ಕಿಸ್​ ಕೊಟ್ಟಿದ್ದಾರೆ. ಯೆಸ್​.. ಹೆಬ್ಬುಲಿಯ ನಯಾ ಲುಕ್​ ನೋಡ್ಬೇಕಾ..? ಈ ಸ್ಟೋರಿ ಓದಿ.

ಹೊಸ ಅವತಾರದಲ್ಲಿ ಸ್ಯಾಂಡಲ್​ವುಡ್​ ಹೆಬ್ಬುಲಿ ಮಿಂಚು

ಕನ್ನಡ ಸಿನಿಲೋಕದಲ್ಲಿ ಸ್ಟೈಲೀಶ್​ ಐಕಾನ್​ ಆಗಿರೋ ಕಿಚ್ಚ ಹೊಸ ಅವತಾರ ತಾಳಿದ್ದಾರೆ. ವಿಕ್ರಾಂತ್​ ರೋಣ ಸಕ್ಸಸ್​ ನಂತ್ರ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ ಕಿಚ್ಚ ಸುದೀಪ್​​. ಈ ಶೋನಲ್ಲಿ ಡಿಫರೆಂಟ್​ ಕಾಸ್ಟ್ಯೂಮ್ಸ್​ ಮೂಲಕ ಎಲ್ಲರ ಕಣ್ಮನ ಸೆಳೆಯೋ ಕಿಚ್ಚ ಸುದೀಪ್​ ತಮ್ಮ ಹೊಸ ಲುಕ್​ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

ತಮ್ಮದೇ ವಿಭಿನ್ನ ಶೈಲಿಯ ಆ್ಯಂಕರಿಂಗ್​​ ಮೂಲಕ ಬರೋಬ್ಬರಿ ಒಂಬತ್ತು ಬಿಗ್​​​ಬಾಸ್​ ಸೀಸನ್​ ಕಂಪ್ಲೀಟ್​ ಮಾಡಿರೋ ಕಿಚ್ಚ ಸುದೀಪ್​​ ತಮ್ಮ ಲುಕ್​ ಬದಲಾಯಿಸಿದ್ದಾರೆ. ಬಿಗ್​ ಬಾಸ್​ಗೆ ಕಿಚ್ಚ ಸುದೀಪ್​ ಹೊರತಾಗಿ ಯಾರೂ ರೀಪ್ಲೇಸ್​ಮೆಂಟ್​​ ಇಲ್ಲ ಅನ್ನೋ ಮಟ್ಟಕ್ಕೆ ಅದ್ಭುತವಾಗಿ ಕಾರ್ಯಕ್ರಮ ಹೋಸ್ಟ್​ ಮಾಡ್ತಾರೆ. ತಮ್ಮ ಉಡುಪು, ಮಾತು, ಖಡಕ್​ ಡೈಲಾಗ್​​​, ನೀತಿ ಪಾಠಗಳಿಂದ ಎಲ್ಲರನ್ನು ಸೆಳೆಯೋ ಕಿಚ್ಚ ತಮ್ಮ ಗಡ್ಡಕ್ಕೆ ಗೇಟ್​​ಪಾಸ್​ ಕೊಟ್ಟಿದ್ದಾರೆ.

ಈ ಬಾರಿ ಎರಡು ಬಿಗ್​ಬಾಸ್​ ನಡೀತಿದೆ. ಓಟಿಟಿ ಸೀಸನ್​ ಫಸ್ಟ್​ ಈಗಾಗ್ಲೇ ಶುರುವಾಗಿದ್ದು, ಎಲ್ಲರ ಮನೆ ಮನ ತಲುಪಿದೆ. ಈ ಓಟಿಟಿ ಸೀಸನ್​​ನಲ್ಲಿ ವೀಕೆಂಡ್​ಗೆ ವೇದಿಕೆ ಏರೋ ಸುದೀಪ್​ ಹೊಸ ಗೆಟಪ್​​ ಮೂಲಕ ಸುದ್ದಿಯಲ್ಲಿದ್ದಾರೆ. ಏಕಾಏಕಿ ಕ್ಲೀನ್​ ಶೇವ್​ ಮಾಡಿ ಮುದ್ದು ಮುದ್ದಾಗಿ ಕಾಣ್ತಿದ್ದಾರೆ. ಸದ್ಯ ಈ ಲುಕ್​ನ ಖಾಸಗಿ ವಾಹಿನಿಯೊಂದು ತಮ್ಮ ಇನ್​​​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು ಸಖತ್​ ವೈರಲ್​ ಆಗಿದೆ.

ರಿವೀಲ್​ ಆಗಿರೋ ಈ ನಯಾ ಅವತಾರ ಕಂಡು ಫ್ಯಾನ್ಸ್​ ದಿಲ್​ ಖುಷ್​ ಆಗಿದ್ದಾರೆ. ಬಗೆ ಬಗೆಯ ಕಲರ್​​ಫುಲ್​ ಕಮೆಂಟ್ಸ್​ ಮಾಡ್ತಿದ್ದಾರೆ. ಬಹುಶಃ ಕಬ್ಜ ಚಿತ್ರಕ್ಕಾಗಿ ತಮ್ಮ ಗಡ್ಡಕ್ಕೆ ಮುಕ್ತಿ ಕೊಟ್ಟಿರಬಹುದು ಎಂಬ ಮಾತುಗಳು ಕೇಳಿಬರ್ತಿವೆ. ಅಂತೂ ಕಿಚ್ಚ ಬಾಸ್​​ ನೀವು ಮೊದಲಿಗಿಂತಲೂ ಸೂಪರ್​ ಆಗಿ ಕಾಣ್ತಿದ್ದೀರಾ. ಲವ್​ ಯು ರೋಣ ಅಂತಾ ಕಮೆಂಟ್ಸ್​ ಮಾಡ್ತಿದ್ದಾರೆ. ಸದ್ಯ, ಕಿಚ್ಚ ಸುದೀಪ್​ ಬಿಗ್​ಬಾಸ್​​ ಜತೆಗೆ ಕಬ್ಜ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಉಪ್ಪಿ ಕಾಂಬಿನೇಷನ್​​​​ನಲ್ಲಿ ಸದ್ಯದಲ್ಲೇ ತೆರೆಗೆ ಬರಲಿರೋ ಕಬ್ಜ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳು ಇವೆ. ಈ ನಡುವೆ ಕಿಚ್ಚನ ಹೊಸ ಲುಕ್​ ಎಲ್ಲರಿಗೂ ಸಖತ್​ ಇಷ್ಟವಾಗಿದೆ.

ರಾಕೇಶ್​ ಅರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES