Wednesday, January 22, 2025

Jr. NTR​ಗೆ ಬಿಜೆಪಿ ಚಾಣಕ್ಯ ಗಾಳ.. ಪಾಲಿಟಿಕ್ಸ್​ಗೆ ತಾರಕ್..?

ಬಿಜೆಪಿ ಪಕ್ಷದ ಚಾಣಕ್ಯ ಅಂತ್ಲೇ ಫೇಮಸ್ ಆಗಿರೋ ಹೋಮ್ ಮಿನಿಸ್ಟರ್ ಅಮಿಶ್ ತಾ, ತೆಲುಗು ದೇಶಂ ಪಾರ್ಟಿ ಮೇಲೆ ಕಣ್ಣು ಹಾಕಿದ್ದಾರೆ. ಅದಕ್ಕೂ ಮುನ್ನ ಜೂನಿಯರ್ ಎನ್​ಟಿಆರ್​ನ ಭೇಟಿಯಾಗಿ ತೆಲಂಗಾಣವನ್ನ ತೆಕ್ಕೆಗೆ ತೆಗೆದುಕೊಳ್ಳೋಕೆ ಯೋಜನೆ ರೂಪಿಸಿದ್ದಾರೆ. ಜೂನಿಯರ್ ಎನ್​ಟಿಆರ್ ಪಾಲಿಟಿಕ್ಸ್​ಗೆ ಬರ್ತಾರಾ..? ಈ ಭೇಟಿ ಹಿಂದಿನ ಸೀಕ್ರೆಟ್ಸ್ ಏನು ಅನ್ನೋದ್ರ ಇಂಟರೆಸ್ಟಿಂಗ್ ಮ್ಯಾಟರ್ ನೀವೇ ಓದಿ.

  • ಕೆಸಿಆರ್​ನ ಮಣಿಸೋಕೆ ಯಂಗ್ ಟೈಗರ್ ಪ್ರಧಾನ ಅಸ್ತ್ರ..?!
  • ಆಸ್ಕರ್ ರೇಸ್​ನಲ್ಲಿ ತಾರಕ್.. RRR​ನಿಂದ ನ್ಯಾಷನಲ್ ಸ್ಟಾರ
  • ತೆಲುಗು ದೇಶಂನ ಭವಿಷ್ಯದ ಲೀಡರ್ ಆಗಲಿರೋ Jr. NTR..!

ರಾಜಮೌಳಿ, ಪ್ರಶಾಂತ್ ನೀಲ್, ಯಶ್, ಪ್ರಭಾಸ್ ನಂತ್ರ ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡ್ತಿರೋ ಸೌತ್ ಸಿನಿದುನಿಯಾದ ಸೂಪರ್ ಸ್ಟಾರ್ಸ್​ ಅಂದ್ರೆ ಅದು ಒನ್ ಅಂಡ್ ಓನ್ಲಿ ಜೂನಿಯರ್ ಎನ್​ಟಿಆರ್. ತ್ರಿಬಲ್ ಆರ್ ಚಿತ್ರದಲ್ಲಿನ ಟೆರಿಫಿಕ್ ಪರ್ಫಾಮೆನ್ಸ್​ಗೆ ಬಾಲಿವುಡ್ ಮಂದಿ ಅಷ್ಟೇ ಅಲ್ಲ, ಹಾಲಿವುಡ್​ನವರೂ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಅದೇ ಕಾರಣದಿಂದ ಆಸ್ಕರ್ ಪ್ರಶಸ್ತಿಯ ಬೆಸ್ಟ್ ಆ್ಯಕ್ಟರ್ ರೇಸ್​ನಲ್ಲಿ ಟಾಮ್ ಹ್ಯಾಂಕ್ಸ್​ಗೆಲ್ಲಾ ಟಫ್ ಫೈಟ್ ಕೊಡ್ತಿದ್ದಾರೆ ಯಂಗ್​ ಟೈಗರ್ ತಾರಕ್. ಇದೀಗ ಇಂತಹ ಅದ್ವಿತೀಯ ಕಲಾವಿದನ ಮೇಲೆ ಬಿಜೆಪಿಯ ಕಣ್ಣು ಬಿದ್ದಿದೆ. ಖುದ್ದು ಹೋಮ್ ಮಿನಿಸ್ಟರ್ ಅಮಿತ್ ಶಾ ಅವ್ರೇ ಹೈದ್ರಾಬಾದ್​ಗೆ ಬಂದು ಜೂನಿಯರ್​ ಎನ್​ಟಿಆರ್​ನ ಭೇಟಿ ಆಗಿದ್ದಾರೆ. ಒಟ್ಟಿಗೆ ಡಿನ್ನರ್ ಸವಿದು, ರಾಜಕಾರಣದ ಬಗ್ಗೆ ಗಂಟೆಗಟ್ಟಲೆ ಪರಸ್ಪರ ಚರ್ಚಿಸಿದ್ದಾರೆ.

ಸದ್ಯ ತೆಲಂಗಾಣದಲ್ಲಿ ಕೆಸಿಆರ್ ಅಧಿಕಾರದಲ್ಲಿದ್ರೂ, ಟಿಡಿಪಿಯ ಮುಂದಿನ ಭವಿಷ್ಯದ ಲೀಡರ್ ತಾರಕ್ ಅನ್ನೋದನ್ನ ಬಿಜೆಪಿ ಡಿಸೈಡ್ ಮಾಡಿದೆ. ಹಾಗಾಗಿ ಚಂದ್ರಬಾಬು ನಾಯ್ಡು ಬದಲಿಗೆ ಜೂನಿಯರ್ ಎನ್​ಟಿಆರ್​ ವರ್ಚಸ್ಸನ್ನ ಇಟ್ಟಿಕೊಂಡು, ಮುಂದಿನ ಚುನಾವಣೆಯನ್ನ ಎದುರಿಸೋಕೆ ಮಾಸ್ಟರ್​ಪ್ಲಾನ್ ರೂಪಿಸುತ್ತಿದ್ದಾರೆ ಬಿಜೆಪಿ ಚಾಣಕ್ಯ ಅಮಿತ್ ಶಾ.

ಸಾಲು ಸಾಲು ಸಕ್ಸಸ್​​ಫುಲ್ ಸಿನಿಮಾಗಳಿಂದ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಸಂಪಾದಿಸಿಕೊಂಡಿರೋ ಜೂನಿಯರ್ ಎನ್​ಟಿಆರ್, ತ್ರಿಬಲ್ ಆರ್ ಚಿತ್ರದಿಂದ ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಹಾಗಾಗಿ ಅವ್ರನ್ನ ನಿಧಾನಕ್ಕೆ ರಾಜಕಾರಣಕ್ಕೆ ಎಳೆಯೋ ಪ್ರಯತ್ನ ಮಾಡ್ತಿದೆ ಬಿಜೆಪಿ. ಟಿಡಿಪಿ ಭವಿಷ್ಯ ತಾರಕ್ ಕೈಯಲ್ಲಿದೆ ಅನ್ನೋದು ಓಪನ್ ಸೀಕ್ರೆಟ್. ವಂಶ ಪಾರಂಪರ್ಯವಾಗಿ ಬಂದಂತಹ ಪಕ್ಷವನ್ನು ಅಳಿಯ ಚಂದ್ರಬಾಬು ನಾಯ್ಡು ಕಸಿದುಕೊಂಡಿದ್ರು. ಇದೀಗ ಮತ್ತೆ ಟಿಡಿಪಿ ಪಕ್ಷ ಅದ್ರ ವಾರಸ್ದಾರ ತಾರಕ್ ಕೈ ಸೇರೋ ಮನ್ಸೂಚನೆ ಇದೆ. ಇಂತಹ ಕ್ಲಿಷ್ಟ ಸಂದರ್ಭದಲ್ಲಿ Jr NTR ತಮ್ಮ ತಾತ ಕಟ್ಟಿದ ಪಕ್ಷವನ್ನು ಉಳಿಸ್ತಾರಾ..? ಎನ್​ಡಿಎ ಸಾಥ್​ನಿಂದ ರಾಜಕಾರಣಕ್ಕೆ ಧುಮುಕುತ್ತಾರಾ ಅನ್ನೋದು ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES