Wednesday, January 22, 2025

ಕಾಂಗ್ರೆಸ್ ಮಡಿಕೇರಿ ಚಲೋಗೆ ತಟ್ಟುತ್ತಾ ಸೆಕ್ಷನ್​​​​ 144 ಬಿಸಿ..?

ಬೆಂಗಳೂರು : ಕಾಂಗ್ರೆಸ್​​, ಬಿಜೆಪಿ ಮಧ್ಯೆ ತಾರಕಕ್ಕೇರಿದ ಮೊಟ್ಟೆ ವಾರ್​​ ಕಾಂಗ್ರೆಸ್​ ಹೋರಾಟ ಹತ್ತಿಕ್ಕಲು ಬಿಜೆಪಿ ಪ್ಲ್ಯಾನ್​​ ಮಾಡಿದೆ.

ಕಾಂಗ್ರೆಸ್ ‌ಹೋರಾಟ ಯಶಸ್ವಿಯಾದ್ರೆ ಬಿಜೆಪಿಗೆ ಮುಖಭಂಗವಾಗುವ ಸಾಧ್ಯತೆ ಇದ್ದು, ಬಿಜೆಪಿಯಿಂದಲೂ ಜನಜಾಗೃತಿ ‌ಕಾರ್ಯಕ್ರಮ ಆಯೋಜಿಸಲಾಗಿದೆ. ಆಗಸ್ಟ್​​​​ 26ರಂದು ಕಾಂಗ್ರೆಸ್​, ಬಿಜೆಪಿ ಶಕ್ತಿ ಪ್ರದರ್ಶನ ತೋರಿಸಲಿದ್ದು, ಮಡಿಕೇರಿ ಎಸ್​​ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.

ಇನ್ನು, ಕಾಂಗ್ರೆಸ್​ ಹೋರಾಟಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಜನಜಾಗೃತಿ ‌ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಂದೇ ದಿನ ಎರಡು ಕಾರ್ಯಕ್ರಮ ‌ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡೋದು ಕಷ್ಟ. ಕೊಡಗು ಸೂಕ್ಷ್ಮ ಪ್ರದೇಶವಾದ್ದರಿಂದ ಜಟಾಪಟಿ ಆಗಬಹುದು. ಹೀಗಾಗಿ ಸೆಕ್ಷನ್​​​ 144 ಹಾಕಿ ಕಾಂಗ್ರೆಸ್ ಹೋರಾಟ ಹತ್ತಿಕ್ಕುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES