ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಪುಂಡರ ಪುಂಡಾಟಿಕೆ ಮುಂದುವರೆದಿದ್ದು, ಈ ಬಾರಿ ಪುಂಡಾಟಕ್ಕೆ ಹುಡುಗಿಯೂ ಕೂಡ ಸಾಥ್ ನೀಡಿದ್ದಾಳೆ.
ನಗರದ ಬ್ಯುಝಿ ರಸ್ತೆಯಲ್ಲಿ ಸೈಯ್ಯದ್ ಎಂಬ ಪುಂಡ, ಹುಡುಗಿಯನ್ನು ಹಿಂದೆ ಕೂರಿಸಿಕೊಂಡು ವ್ಹೀಲಿಂಗ್ ಮಾಡಿದ್ದು, ವ್ಹೀಲಿಂಗ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡಿದ್ದಾನೆ. ಜಕ್ಕೂರು ರಸ್ತೆ ತುಮಕೂರು ರಸ್ತೆ , ನಗರದ ಹೊರವಲಯ ರಸ್ತೆ , ಬಿ. ಇ. ಎಲ್ ರಸ್ತೆಗಳು ವ್ಹೀಲಿಂಗ್ ಮಾಡುವವರಿಗೆ ಹಾಟ್ ಸ್ಪಾಟ್ ಆಗಿದ್ದು, ಕಿಡಿಗೇಡಿಗಳು ಕೈಯಲ್ಲಿ ಡ್ರ್ಯಾಗರ್ ಹಿಡಿದು ವ್ಹೀಲಿಂಗ್ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡುತ್ತಿದ್ದಾರೆ. ಹೀಗೆ ನಗರದ ಅನೇಕ ಕಡೆ ಪುಂಡರು ನಡು ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ವಿಲ್ಹಿಂಗ್ ಮಾಡುತ್ತಿದ್ದಾರೆ.