Monday, December 23, 2024

ಶಾಶ್ವತ ನೀರಾವರಿ ಯೋಜನೆಗಾಗಿ ಜನನಾಯಕನ ಹೋರಾಟ

ತುಮಕೂರು : ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಮತ್ತು ಕಸಬಾ ಹೋಬಳಿಗಳಿಗೆ ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ, ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 10 ಗಂಟೆಗೆ ಹೊನ್ನವಳ್ಳಿಯಲ್ಲಿ ಕೆ.ಟಿ.ಶಾಂತಕುಮಾರ್ ಅಭಿಮಾನಿಗಳು ಮತ್ತು ಗ್ರಾಮಸ್ಥರು ತಾಯಿ ಹೊನ್ನಾಂಬಿಕಾ ದೇವಿಯನ್ನು ಸ್ಮರಿಸುತ್ತಾ ಪಾದಯಾತ್ರೆಯನ್ನು ಆರಂಭಿಸಿದ್ರು. ಪಾದಯಾತ್ರೆಯುದ್ದಕ್ಕೂ ಸಾವಿರಕ್ಕೂ ಹೆಚ್ಚು ಜನ ಸೇರಿ ಹಾದಿಯುದ್ದಕ್ಕೂ ಡೊಳ್ಳು ಹಾಗೂ ಡಿ.ಜೆ.ಹೆಜ್ಜೆ ಹಾಕುವವರಿಗೆ ಮತ್ತಷ್ಟು ಹುರುಪು ತುಂಬಿದವು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ, ಸಮಾಜ ಸೇವಕ ಕೆ.ಟಿ.ಶಾಂತಕುಮಾರ್, ಈ ಭಾಗದಲ್ಲಿ ಗೆಲುವು ಸಾಧಿಸಿರುವ ಶಾಸಕರು ಹಾಗೂ ಸಚಿವರು ತಮ್ಮ ಪ್ರಣಾಳಿಕೆಯಲ್ಲಿ ಹೊನ್ನವಳ್ಳಿ ಮತ್ತು ಕಸಬಾ ಹೋಬಳಿಗೆ ನೀರು ಹರಿಸುವಂತೆ ತಿಳಿಸಿದ್ರು. ಆದ್ರೆ, ಈವರೆಗೂ ಯೊರೊಬ್ಬರೂ ಆ ಕೆಲಸ ಇನ್ನೂ ಮಾಡಿಲ್ಲ. ಹಾಗಾಗಿ ನಾವು ಪಾದಯಾತ್ರೆ ನಡೆಸುತ್ತಿದ್ದೇವೆ. ಶಾಶ್ವತ ನೀರಾವರಿ ಯೋಜನೆಯನ್ನು ತಂದೇ ತರುತ್ತೇವೆ ಎಂದರು.

ಇನ್ನು ತಿಪಟೂರು ತಾಲೂಕಿನ ಹೊನ್ನವಳ್ಳಿಯಿಂದ ಆರಂಭವಾದ ಪಾದಯಾತ್ರೆ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ನೇತೃತ್ವದಲ್ಲಿ ಸಾವಿರಾರು ಜನರು ನಡೆದು ಬಂದ್ರು ಈ ವೇಳೆ ತಿಮ್ಮಲಾಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್‌ಗೆ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ ಅದ್ದೂರಿ ಸ್ವಾಗತ ಮಾಡಲಾಯಿತು. ಈ ವೇಳೆ ಮಾತನಾಡಿದ ಶಾಂತಕುಮಾರ್ ಹಾಗೂ ಸ್ಥಳೀಯ ಮುಖಂಡ ಮಂಜುನಾಥ್ ಹೋರಾಟ ಬೆಂಬಲಿಸುವಂತೆ ಕರೆ ನೀಡಿದರು.

ಇನ್ನೂ ಕೊಬ್ಬರಿ ದೊಡ್ಡಯ್ಯನಪಾಳ್ಯದ ಮೂಲಕ ಸಾಗಿ ಕಂಚೇಘಟ್ಟದಿಂದ ತಿಪಟೂರು ನಗರ ಪ್ರವೇಶ ಮಾಡಿದ ಪಾದಯಾತ್ರೆ ತಿಪಟೂರಿನ ತಾಲೂಕು ಕಚೇರಿಯ ಶಿರಸ್ತೇದಾರ್ ಪರಮೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು.

ಒಟ್ಟಾರೆ ಪಾದಯಾತ್ರೆಯುದ್ದಕ್ಕೂ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಡ್ಯಾನ್ಸ್, ಮತ್ತು ಡೋಳು ಬಡಿಯುವ ಮೂಲಕ ಅಭಿಮಾನಿಗಳಲ್ಲಿ ಹುರುಪು ತುಂಬಿದ್ರು. ಒಟ್ಟಾರೆ ಜನರ ಒತ್ತಾಸೆಯಂತೆ ಜನ ಸೇವಕ ಕಾಂಗ್ರೇಸ್ ಮುಖಂಡ ಕೆ.ಟಿ.ಶಾಂತಕುಮಾರ್ ಪಾದಯಾತ್ರೆ ನಡೆಸಿದ್ದು ಸರ್ಕಾರ ಬಡ ಜನತೆಯ ಕಷ್ಟ ಅರಿತು ಹೊನ್ನವಳ್ಳಿ ಹಾಗೂ ಕಸಬಾ ಹೋಬಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುತ್ತಾರಾ ಕಾದು ನೋಡಬೇಕಿದೆ.

ಹೇಮಂತ್ ಕುಮಾರ್. ಜೆ.ಎಸ್ ಪವರ್ ಟಿವಿ ತುಮಕೂರು.

RELATED ARTICLES

Related Articles

TRENDING ARTICLES