ಕೊಡಗು : ಹಿಂದೂಗಳ ನಂಬಿಕೆ ಭಾವನೆಗೆ ನೋವು ಮಾಡುವುದೇ ಸಿದ್ದರಾಮಯ್ಯರ ಕೆಲಸ ಎಂದು ಮಡಿಕೇರಿಯಲ್ಲಿ ಕೆ.ಜಿ ಬೋಪಯ್ಯ ಜೊತೆ ಹೇಳಿದ್ದಾರೆ.
ಮಡಿಕೇರಿಯ ಸರ್ಕ್ಯೂಟ್ ಹೌಸ್‌ನಲ್ಲಿ 18ರ ಮಧ್ಯಾಹ್ನ ಊಟ ಮಾಡಿದ್ದ ಸಿದ್ದರಾಮಯ್ಯ. ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಮನೆಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ನಾಟಿ ಕೋಳಿ ಸಾರು, ರಾಗಿ ಮುದ್ದೆ, ಕಣಿಲೆ, ಅನ್ನ ತರಕಾರಿ ಸಾರು ಮಾಡಲಾಗಿತ್ತು. ಅಂದು ನಾಟಿ ಕೋಳಿ ಸಾರು ತಿಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ. ಊಟದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.
ಇನ್ನು, ಸಿದ್ದರಾಮಯ್ಯ ಊಟ ಮಾಡಿದ ಫೋಟೋ, ದೇವಸ್ಥಾನಕ್ಕೆ ಹೋದ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಮಾಜಿ ಸ್ಪೀಕರ್, ಬಿಜೆಪಿ ಶಾಸಕ ಕೆ ಜಿ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ನಂಬಿಕೆ ಭಾವನೆಗೆ ನೋವು ಮಾಡುವುದೇ ಸಿದ್ದರಾಮಯ್ಯರ ಕೆಲಸ ಎಂದು ಹೇಳಿದರು.