Monday, December 23, 2024

ಸಂಗಾತಿ ಬಗ್ಗೆ ಮೋಹಕತಾರೆ ರಮ್ಯಾ ಓಪನ್ ಟಾಕ್

ಇಂದಿಗೂ ಸ್ಯಾಂಡಲ್​ವುಡ್​​ಗೆ ಮೋಹಕ ತಾರೆ ರಮ್ಯಾ ಅನಭಿಷಿಕ್ತ ರಾಣಿಯಾಗಿದ್ದಾರೆ. ಅದೇ ಬ್ಯೂಟಿ, ಅದೇ ಹೊಳಪು, ಅದೇ ಚಾರ್ಮಿಂಗ್​ ಉಳಿಸಿಕೊಂಡಿರೋ ರಮ್ಯಾ ಕಂಡ್ರೆ ಫ್ಯಾನ್ಸ್​ಗೆ ಅಚ್ಚುಮೆಚ್ಚು. ಆದ್ರೆ, ರಮ್ಯಾ ಮದ್ವೆ ಸುದ್ದಿ ಮಾತ್ರ ಇಂದಿಗೂ ಯಕ್ಷ ಪ್ರಶ್ನೆಯಾಗೇ ಉಳಿದಿದೆ. ಇನ್ನೂ ಮದ್ವೆ ಯಾಕಿಲ್ಲ ಅನ್ನೋ ಪ್ರಶ್ನೆಗೆ ರಮ್ಯಾ ಉತ್ತರ ಕೊಟ್ಟಿದ್ದಾರೆ. ಯೆಸ್​​. ರಮ್ಯಾ ಕೊಟ್ಟ ಶಾಕಿಂಗ್​ ಆನ್ಸರ್ ಏನ್ ಗೊತ್ತಾ..? ಈ ಸ್ಟೋರಿ ಓದಿ.

  • ಮದ್ವೆ ಗಂಡೇ ಹುಟ್ಟಿಲ್ಲಾ ಅಂದಿದ್ಯಾಕೆ ಪದ್ಮಾವತಿ..?

ಸ್ಯಾಂಡಲ್​​ವುಡ್​​ ಕ್ವೀನ್​​ ರಮ್ಯಾ ಸದ್ಯ ಟಾಕ್​ ಆಫ್ ದಿ ಟೌನ್​​ ಆಗಿದ್ದಾರೆ. ಅವ್ರ ಸಿನಿಮಾ ಸಿಲ್ವರ್​ ಸ್ಕ್ರೀನ್​ಗೆ ಬರದೇ ಇದ್ರು, ರಮ್ಯಾ ಮಾತ್ರ ಸಿನಿಪ್ರಿಯರ ಪಾಲಿಗೆ ಮೆಚ್ಚಿನ ನಟಿ. ಇನ್ನೂ ದಶಕಗಳು ಕಳೆದ್ರೂ ರಮ್ಯಾ ತಮ್ಮ ಮಾಸದ ಚೆಲುವಿನಿಂದ್ಲೇ ಪಡ್ಡೆ ಹೈಕಳ ಹೃದಯಲ್ಲಿರುತ್ತಾರೆ. ರಾಜಕೀಯದಿಂದ ಬೇಸತ್ತು ದೂರ ಸರಿದ್ರು ಕೂಡ ಸೋಶಿಯಲ್​​ ಮೀಡಿಯಾಗಳಲ್ಲಿ ಸದಾ ಸುದ್ದಿಯಲ್ಲಿರೋ ಹಾಟ್​​ ಹಾಟ್​ ಬೆಡಗಿ ರಮ್ಯಾ.

ಪೋರ್ಚಗಲ್​ ಸುಂದರಾಂಗನ ಜತೆ ಮದ್ವೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದ್ರು ಕೂಡ ಮದ್ವೆ ಹಂತಕ್ಕೆ ತಲುಪಲೇ ಇಲ್ಲ. ಇನ್ನೂ ರಮ್ಯಾ ಯಾವಾಗ ಮದ್ವೆ ಆಗ್ತಾರೆ ಅನ್ನೋ ಯಕ್ಷಪ್ರಶ್ನೆಗೆ ಇಂದಿಗೂ ಉತ್ತರ ಸಿಗದೇ ಅಭಿಮಾನಿಗಳು ಕೊಂಚ ಬೇಸರವಾಗಿದ್ರು. ರಮ್ಯಾ ಅಡ್ರೆಸ್​​ಗೂ ಸಿಗದೇ ತಳಮಳಗೊಂಡಿದ್ರು. ಇದೀಗ ರಮ್ಯಾ ಫುಲ್​ ಆ್ಯಕ್ಟಿವ್​ ಆಗಿದ್ದಾರೆ. ಸಿನಿಮಾ ಚಟುವಟಿಕೆಗಳಲ್ಲಿ ಭಾಗವಹಿಸ್ತಿದ್ದಾರೆ. ಜತೆಗೆ ರೀಲ್ಸ್​ ಮಾಡ್ತಾ ಜಾಲಿಮೂಡ್​ನಲ್ಲಿದ್ದಾರೆ. ಇದೀಗ ಸ್ಯಾಂಡಲ್​ವುಡ್​ ಪದ್ಮಾವತಿ, ನಾನು ಮದ್ವೆ ಆಗೋ ಗಂಡು ಹುಟ್ಟೇ ಇಲ್ಲ ಅನ್ನೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  • ನನ್ನ ಸಂಗಾತಿ ಸತ್ತಿರಬಹುದು ಅಂದುಬಿಟ್ರಾ ರಮ್ಯಾ..!
  • ಲೈಫ್​​ ಲಾಂಗ್​​ ಬ್ಯಾಚುಲರ್​ ಆಗಿಯೇ ಇರ್ತಾರಾ..?

ಯೆಸ್​​.. ಸಂಗಾತಿ ಕುರಿತಾದ ಹಾಡೊಂದನ್ನು ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಹಂಚಿಕೊಂಡಿದ್ದ ಮೋಹಕತಾರೆ ಇದೀಗ ಅದೇ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಹಳೆಯ ಸಂಗಾತಿಯನ್ನು ನೆನಪಿಸಿಕೊಳ್ಳುವಂತಹ ಹಾಡಿನ ರೀಲ್ಸ್​ನಲ್ಲಿ ರಮ್ಯಾ ಮತ್ತೆ ಮಿಂಚಿದ್ದಾರೆ. ಯಾಕೆ ನೀನಿನ್ನೂ ಮದುವೆಯಾಗಿಲ್ಲ ಅನ್ನೋ ಸಾಹಿತ್ಯ ಹೊಂದಿರುವ ಈ ಹಾಡು, ನನ್ನ ಸಂಗಾತಿ ಸತ್ತಿರಬಹುದು..! ಇಲ್ಲ, ನನಗೆ ಸಂಗಾತಿನೇ ಹುಟ್ಟಿಲ್ಲ ಎಂಬ ಸಾಲುಗಳಿಂದ ಮುಂದುವರೆಯುತ್ತದೆ. ಇದೇ ಹಾಡಿನ ರೀಲ್ಸ್​ನಲ್ಲಿ ಸ್ಯಾಂಡಲ್​ವುಡ್​ನ ಚೆಂದುಳ್ಳಿ ಚೆಲುವೆ ಮಿಂಚಿರೋದು ವಿಶೇಷವಾಗಿದೆ.

ಈ ಹಾಡು ಬ್ರೇಕ್​ಅಪ್​ ಸಾಂಗ್​ ಆಗಿದ್ದು ಪ್ರೀತಿಯಲ್ಲಿ ನೊಂದ, ಬೆಂದ ಪ್ರೇಮಿಗಳ ಶೋಕ ಗೀತೆ. ಈ ಹಾಡಿಗೆ ರಮ್ಯಾ ರೀಲ್ಸ್ ಮಾಡಿ ಮದ್ವೆ ಸೀಕ್ರೇಟ್​ ರಿವೀಲ್​ ಮಾಡಿದ್ದಾರೆ. ಅಂತೂ ರಮ್ಯಾ ಮದ್ವೆಯಾಗೋ ಗಂಡು ಈ ಭೂಮಿಲಿ ಹುಟ್ಟೇ ಇಲ್ವಂತೆ. ಹಾಗಾದ್ರೇ ರಮ್ಯಾ ಕೊನೆವರೆಗೂ ಬ್ರಹ್ಮಚಾರಿಣಿಯಾಗಿ ಉಳಿಯಲಿದ್ದಾರೆ. ರಮ್ಯಾ ಸನ್ಯಾಸಿನಿ ಅವತಾರ ಫ್ಯಾನ್ಸ್​​ಗೆ ಬೇಸರ ತರಿಸಲಿದೆ.

ಒಟ್ನಲ್ಲಿ ರಮ್ಯಾಳ ಈ ರೀಲ್ಸ್​ ಟಾಪ್​ ಟ್ರೆಂಡಿಂಗ್​​ನಲ್ಲಿದೆ. ರಮ್ಯಾ ಎಕ್ಸ್​​ಪ್ರೆಷನ್ಸ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಮದ್ವೆ ಆಗಲ್ಲಾ ಅನ್ನೋ ಮೆಸೇಜ್​ನಾ ಇನ್​ಡೈರೆಕ್ಟ್​ ಆಗಿ ರಮ್ಯಾ ಹೇಳಿದ್ದಾರೆ. ಇನ್ನೂ ಸಿನಿಮಾಗಳಲ್ಲಿ ಮತ್ತೆ ಕಾಣಿಸ್ತಾರೆ ಅನ್ನೋ ಕ್ಯೂರಿಯಾಸಿಟಿಗೆ ರಮ್ಯಾ ಉತ್ತರ ಕೊಡಬೇಕಿದೆ. ಏನೇ ಆಗಲಿ ಮದ್ವೆ ಹೊರತಾಗಿಯೂ ಮತ್ತೆ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಕೊಡಲಿ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES