Wednesday, January 22, 2025

ಮಂತ್ರಿ ಮಾಲ್​ನಲ್ಲಿ ಲೈಗರ್ ಅಬ್ಬರ.. ಬ್ಯಾರಿಕೇಡ್ ಉಡೀಸ್

ರಿಲೀಸ್​ಗೆ ರೆಡಿ ಇರೋ ಲೈಗರ್​ ಅಬ್ಬರ ಜೋರಾಗಿದೆ. ಮಂತ್ರಿ ಮಾಲ್​​ನಲ್ಲಿ ಸೇರಿದ್ದ ಜನಸಾಗರ ಕಂಡು ಲೈಗರ್​ ಟೀಮ್​​ ಮೂಖವಿಸ್ಮಿತವಾಗಿದೆ. ನೂಕು ನುಗ್ಗಲಿಗೆ ಬ್ಯಾರಿಕೇಡ್​​​ ಉಡೀಸ್​ ಆಗಿದೆ. ಲಾಠಿ ರುಚಿಗೂ ಅಂಜದ ಫ್ಯಾನ್ಸ್​​ ವಿಜಯ್​ ದೇವರಕೊಂಡ ಕಂಡು ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಯೆಸ್​​.. ಬೆಂಗಳೂರಿನಲ್ಲಿ ಸಿಕ್ಕ ರೆಸ್ಪಾನ್ಸ್​ಗೆ ಲೈಗರ್​ ಟೀಮ್​​ ದಿಲ್​​ಖುಷ್​​ ಆಗಿತ್ತು. ಹೇಗಿತ್ತು ಮಂತ್ರಿ ಮಾಲ್​​​​​ ಜನಸಾಗರ..? ನೀವೇ  ಓದಿ.

ಲಾಠಿ ಏಟಿಗೂ ಬಗ್ಗದ ಫ್ಯಾನ್ಸ್​​.. ಮೊಳಗಿದ ಆರ್​ಸಿಬಿ ಕಹಳೆ

ಅರ್ಜುನ್​ ರೆಡ್ಡಿ, ಗೀತ ಗೋವಿಂದಂ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರೋ ವಿಜಯ್​ ದೇವರಕೊಂಡ ಗ್ಲೋಬಲ್​ ಐಕಾನ್​ ಆಗಿ ಅಬ್ಬರಿಸ್ತಿದ್ದಾರೆ. ವರ್ಲ್ಡ್​​ ವೈಡ್​​ ರಿಲೀಸ್​ ಆಗ್ತಿರೋ ಲೈಗರ್​​​ ಸಿನಿಮಾ ನೋಡಲು ಸಿನಿಪ್ರಿಯರು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದಾರೆ. ಕ್ರಾಸ್​​ ಬ್ರೀಡ್​​ ಟೈಗರ್​ ಹವಾ ಕಂಡು ಇಡೀ ಸಿನಿದುನಿಯಾ ಥಂಡಾ ಹೊಡೆದಿದೆ. ಈ ನಡುವೆ ಸಿಲಿಕಾನ್​ ಸಿಟಿಯ ಮಂತ್ರಿ ಮಾಲ್​​ಗೆ ಭೇಟಿ ಕೊಟ್ಟಿದ್ದ ಲೈಗರ್​ ಟೀಮ್​ ಜನಸಾಗರ ಕಂಡು ಪೆಚ್ಚಾಗಿ ಹೋಗಿದೆ. ಇದ್ರ ನಡುವೆ ಕನ್ನಡಾಭಿಮಾನದ ಆರ್​ಸಿಬಿ ಸದ್ದು ಕೂಡ ಮೊಳಗಿತು.

ಯೆಸ್​​.. ಲೈಗರ್​ ಸಿನಿಮಾ ಪ್ರಮೋಷನ್​​​ಗೆ ಆಗಮಿಸಿದ್ದ ವಿಜಯ್​ ದೇವರಕೊಂಡ, ಅನನ್ಯಾ ಪಾಂಡೆ, ಹಾಗೂ ಲೈಗರ್​ ಚಿತ್ರತಂಡ ಕಿಕ್ಕಿರಿದು ಸೇರಿದ್ದ ಫ್ಯಾನ್ಸ್​ ಕಂಡು ಮಂತ್ರಮುಗ್ಧವಾಗಿದ್ದರು. ಅರೆ ಕ್ಷಣ ಸೈಲೆಂಟ್​​ ಆಗಿ ಬಿಟ್ರು. ರೌಡಿ ಬಾಯ್ಸ್​ ಅಂಡ್​​ ಗರ್ಲ್ಸ್​​ ನೋಡಿ ಮೂಖವಿಸ್ಮಿತವಾಗಿದ್ದರು. ಸಾಲಾ ಕ್ರಾಸ್​ ಬ್ರೀಡ್​ ಟೈಗರ್​​ ಕಂಡ ಕ್ಷಣ ಫ್ಯಾನ್ಸ್​​ ಹುಚ್ಚೆದ್ದು ಕೇಕೆ ಹಾಕಿದ್ರು. ನೂಕು ನುಗ್ಗಲಿಗೆ ಬ್ಯಾರಿಕೇಡ್​​ ಎಲ್ಲಾ ಉಡೀಸ್​ ಆಗ್ತಿದ್ವು. ಪೊಲೀಸರು ಲಾಠಿ ರುಚಿಯ ಬಿಸಿ ಮುಟ್ಟಿಸಿದ್ರು ಅಭಿಮಾನದ ಮುಂದೆ ಯಾವುದು ಲೆಕ್ಕಕ್ಕೆ ಬರಲೇ ಇಲ್ಲ.

ತನ್ನದೇ ಸ್ಟೈಲ್​ನಲ್ಲಿ ಐ ಲವ್​ ಯು ಎಂದ ವಿಜಯ್

ಗ್ಲಾಮರಸ್​ ಗೊಂಬೆ ಅನನ್ಯಾ  ಫ್ಲೈಯಿಂಗ್​ ಕಿಸ್​​​..!

ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಸುದ್ದಿ ಗೋಷ್ಠಿ ನಡೆಸಿದ ಲೈಗರ್​ ಟೀಮ್​ ಮಂತ್ರಿ ಮಾಲ್​ಗೆ ಭೇಟಿ ಕೊಟ್ಟಿತ್ತು. ವಿಜಯ್​ ದೇವರಕೊಂಡ ಬರೋ ಸುದ್ದಿ ತಿಳೀತಾ ಇದ್ದಂತೆ ಸಾಗರೋಪಾದಿಯಲ್ಲಿ ಫ್ಯಾನ್ಸ್​ ಮಂತ್ರಿ ಮಾಲ್​​ ಕಡೆ ಹೆಜ್ಜೆ ಹಾಕಿದ್ರು. ವಿಜಯ್​, ಅನನ್ಯಾ ಕಂಡು ಫುಲ್  ಖುಷ್​ ಆದ್ರು. ಪ್ರಾಣವನ್ನು ಲೆಕ್ಕಿಸದೇ ನೂಕಾಡುತ್ತಿದ್ದ ಅಭಿಮಾನ ಕಂಡು, ಹುಷಾರ್​ ಎಂದು ವಿನಂತಿ ಮಾಡಿಕೊಳ್ತಾ ಇದ್ರು. ಹೃದಯ ತುಂಬಿ ಬಂದ ವಿಜಯ್​ ತನ್ನದೇ ಸ್ಟೈಲ್​ನಲ್ಲಿ ಐ ಲವ್​ ಯು ಎಂದ್ರು.

ನಮ್ಮ ಸಿನಿಮಾ ತಪ್ಪದೇ ನೋಡಿ. ನೋಡ್ತಿರಲ್ವಾ, ಅಂತ ಚೆಂದುಳ್ಳಿ ಚೆಲುವೆ ಅನನ್ಯಾ ಪಾಂಡೆ ಮನವಿ ಮಾಡಿಕೊಂಡ್ರು. ಉಕ್ಕಿ ಹರಿದ ಅಭಿಮಾನದ ಅಕ್ಕರೆ ಕಂಡು ಫ್ಯಾನ್ಸ್ ಕಡೆಗೆ ಫ್ಲೈಯಿಂಗ್​ ಕಿಸ್​ ಕೊಟ್ಟರು. ಬೆರಗಾಗಿ ನೋಡ್ತಾ ಇದ್ದ ಅನನ್ಯಾ ಬೆಂಗಳೂರಿನ ಫ್ಯಾನ್ಸ್​ ಕ್ರೇಜ್​ ಕಂಡು ಹ್ಯಾಪಿ ಮೂಡ್​​ಗೆ ಜಾರಿದ್ರು.

ವಿಜಯ್​ ದೇವರಕೊಂಡ, ಸಿನಿಮಾದ ಕೆಲವು ಡೈಲಾಗ್​ ನೆನಪಿಸಿಕೊಂಡ್ರು. ವಿ ಆರ್​ ಇಂಡಿಯನ್ಸ್​​​, ವಾಟ್​ ಲಗಾ ದೇಂಗೇ ಡೈಲಾಗ್​ಗೆ ಶಿಳ್ಳೆ ಕೇಕೆ ಜೋರಾಗಿತ್ತು. ಅಂತೂ ಸಿಲಿಕಾನ್​ ಸಿಟಿಯಲ್ಲಿ ವಿಜಯ್​ ದೇವರಕೊಂಡ ಫ್ಯಾನ್ಸ್​​ ಕ್ರೇಜ್​​​ ಯಾವ ಲೆವೆಲ್​ಗೆ ಇದೆ ಅನ್ನೋದು ಪ್ರೂವ್​ ಆಯ್ತು. ಆಗಸ್ಟ್​ 25ಕ್ಕೆ ವರ್ಲ್ಡ್​ ವೈಡ್​ ರಿಲೀಸ್ ಆಗ್ತಿರೋ ಲೈಗರ್​​ ಚಿತ್ರಕ್ಕೆ ಪೂರಿ ಜಗನ್ನಾಥ್​ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಕರಣ್​ ಜೋಹರ್ , ಚಾರ್ಮಿ ಕೌರ್ ಸೇರಿ ನಿರ್ಮಾಣ ಮಾಡ್ತಿದ್ದಾರೆ. ಚಿತ್ರಪ್ರೇಮಿಗಳು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಪ್ರಚಾರದಲ್ಲಿ ಮುಳಿಗಿರೋ ಲೈಗರ್​ ಟೀಮ್​​ ಜನ್ರ ರೆಸ್ಪಾನ್ಸ್​ ಕಂಡು ಥ್ರಿಲ್​ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES