Sunday, January 19, 2025

ಕೃಷ್ಣ ಜನ್ಮಾಷ್ಟಮಿ ವೇಳೆ ಕಾಲ್ತುಳಿತಕ್ಕೆ ಇಬ್ಬರು ಮೃತ್ಯು.!

ಮುಥುರಾ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಂದರ್ಭದಲ್ಲಿ ನೂಕುನುಗ್ಗಲು, ಕಾಲ್ತುಳಿತ ಉಂಟಾಗಿ ಇಬ್ಬರು ಭಕ್ತರು ಮೃತಪಟ್ಟು ಹಲವರು ಅಸ್ವಸ್ಥರಾಗಿರುವ ಘಟನೆ ಮಥುರಾದಲ್ಲಿ ನಡೆದಿದೆ.

ಕೃಷ್ಣ ಜನ್ಮಸ್ಥಳ ಉತ್ತರಪ್ರದೇಶದ ಮಥುರಾದಲ್ಲಿ ಶನಿವಾರ ವಿಜೃಂಭಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇಗುಲಕ್ಕೆ ವಿವಿಧ ದೇಶಗಳಿಂದ ಹಾಗೂ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕಾಲಿಡುವುದಕ್ಕೂ ಸಹ ಜಾಗವಿಲ್ಲದಂತೆ ಭಕ್ತರು ನೆರೆದಿದ್ದರು ಹಾಗ ಕಾಲ್ಕುಳಿತಕ್ಕೆ ಒಳಗಾಗಿ ನೋಯ್ಡಾ ನಿವಾಸಿ ನಿರ್ಮಲಾದೇವಿ, ರಾಜ್‍ಕುಮಾರ್ ಮೃತರಾಗಿದ್ದಾರೆ.

ಮಂಗಳಾರತಿ ವೇಳೆ ಇದ್ದಕ್ಕಿದ್ದಂತೆ ಜನ ನುಗ್ಗಿದ್ದರಿಂದ ಕಾಲ್ತುಳಿತ ಉಂಟಾದ ಹಿನ್ನೆಲೆಯಲ್ಲಿ ದೇವಾಲಯದ ನಿರ್ಗಮನ ದ್ವಾರದಲ್ಲಿ ಜನರ ಮಧ್ಯೆ ಸಿಲುಕಿ ಇಬ್ಬರು ಸಾವನ್ನಪಿರುವ ಘಟನೆ ಸಂಭವಿಸಿದೆ.

RELATED ARTICLES

Related Articles

TRENDING ARTICLES