Thursday, December 19, 2024

‘ಜೊತೆ ಜೊತೆಯಲಿ’ ನಿರ್ದೇಶಕ ಆರೂರು ಜಗದೀಶ್​​ ಆರೋಪಕ್ಕೆ ನಟ ಅನಿರುದ್ಧ್​ ಕೌಂಟರ್​.!

ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ನಿರ್ದೇಶಕ ಆರೂರು ಜಗದೀಶ್​​ ಆರೋಪಕ್ಕೆ ಇಂದು ಮತ್ತೆ ನಟ ಅನಿರುದ್ಧ್​ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ನನ್ನ ಬಗ್ಗೆ ಜೊತೆ ಜೊತೆ ಧಾರವಾಹಿ ಟೀಮ್ ನ ಅಷ್ಟೊಂದು ಜನ ಕುಳಿತು ಆರೋಪ ಮಾಡಿದರು. ನಾನು ಯಾವತ್ತಾದ್ರೂ ಸಿಟ್ಟು ಮಾಡಿಕೊಂಡಿದ್ದೇನಾ. ನಾನು ಯಾವತ್ತಾದ್ರೂ ದುರಹಂಕಾರದ ಮಾತು ಜಗಳ ಆಡಿದ್ದೇನೆಯಾ ಎಂದು ವೈಯಕ್ತಿಕವಾಗಿ ಕೇಳಿ. ಸಾಕ್ಷ ಚಿತ್ರ ಮಾಡಿದ್ದಕ್ಕೆ ಇತ್ತೀಚಿಗೆ ಮೂರು ಪ್ರಶಸ್ತಿಗಳು ಬಂದಿದ್ದಾವೆ. ಇದರ ಪ್ರಕಾರ ನನ್ನ ಯಶಸ್ಸು ಎಂದು ಹೇಳಿದರು.

ನನ್ನ ಪ್ರಿತೀಸೋ ಜನ ತುಂಬಾ ಜನ ಇದ್ದಾರೆ ಅದೇ ಯಶಸ್ಸು. ಇವತ್ತಿಗೂ ಇಷ್ಟೊಂದು ಆರೋಪ ಬರ್ತಿದ್ದಾವೆ ಆದ್ರೂ ಎದುರಿಸುತ್ತಿದ್ದೇನೆ ಇದೇ ಜೀವನ. ನನಗೆ ಕೆಲಸ ಸಿಕ್ಕೆ ಸಿಗುತ್ತೆ, ನನ್ನ ಬೆನ್ನ ಹಿಂದೆ ಪ್ಯಾಮಿಲಿ ಅಭಿಮಾನಿಗಳು ಇದ್ದಾರೆ. ನನಗೆ ಇಷ್ಟೊಂದು ಜನ ಮನ್ನನೆ ಸಿಕ್ಕಿದೆ ಇಷ್ಟು ಜನ ಇರುವಾಗ ನನಗೆ ಕೆಲಸದ ಅಭದ್ರತೆ ಇಲ್ಲ ಎಂದು ಅನಿರುದ್ಧ್ ತಿಳಿಸಿದರು.

ನನ್ನ ಕುಟುಂಬದ ವಿಚಾರ ಹೊರಗೆ ಹೋಗಬಾರದಿತ್ತು. ಜೊತೆ ಜೊತೆಯಲಿ ಧಾರವಾಹಿ ನಿರ್ದೇಶಕರು ನನ್ನ ಹತ್ತಿರ ಮಾತನಾಡಿರುವ ರೆಕಾರ್ಡಿಂಗ್ ಇವೆ. ಈ ಸಮಸ್ಯೆ ಬಗ್ಗೆ ನಾಲ್ಕು ಗೋಡೆ ಒಳಗೆ ಬಗೆ ಹರಿಸಬಹುದಿತ್ತು. ಇಷ್ಟೊಂದು ಕಾಂಟ್ರವರ್ಸಿ ಮಾಡುವ ಅಗತ್ಯವಿರಲಿಲ್ಲ.

ನನ್ನ ಸಹ ಕಲಾವಿದರನ್ನ, ತಂತ್ರಜ್ಝಾನರನ್ನ ಕೇಳಿ ನಾನು ಯಾವುದೇ ರೀತಿ ಗಲಾಟೆ ಮಾಡಿದ್ದೀನಾ, ನನ್ನ ಮೇಲೆ ನೀವು ಮಾಡುತ್ತಿರುವ ಆರೋಪಗಳು ನಿಜ ಎಂದು ನಿಮ್ಮ ಪತ್ನಿಯರ ಮೇಲೆ ಆಣೆ ಮಾಡಿ ಹೇಳಿ, ನಾನು ಯಾವುದೇ ರೀತಿಯಲ್ಲಿ ಶೂಟಿಂಗ್ ಕ್ಯಾನ್ಸಲ್ ಮಾಡಿಲ್ಲ. ಅತೀ ಕೆಟ್ಟ ರೂಮ್​ಗಳಲ್ಲಿ ಹೆಣ್ಣುಮಕ್ಕಳಿಗೆ ಬಟ್ಟೆ ಬದಲಿಸಲು ಹಾಗುತ್ತಾ ಎಂದರು.

ಕಿರುತೆರೆ ಸಂಘಟದ ಅಧ್ಯಕ್ಷರು ನನ್ನ ಹತ್ತಿರ ಬಂದು ಮಾತನಾಡಿಲ್ಲ. ಇದ್ದಕ್ಕಿದ್ದ ಹಾಗೆ ನನ್ನ ನಿಷೇಧ ಮಾಡಿದ್ದಾರೆ. ಹೋರಾಟ ಸಂಘರ್ಷ ನನಗೆ ಹೊಸದು ಅಲ್ಲ. ಭಾರತಿ ಅಮ್ಮ ಅವರ ಕುಟುಂಬಕ್ಕೆ ಸಹ ಹೋರಾಟ ಹೊಸದಲ್ಲ. ಅನಿರುದ್ಧ್​ ಎನ್ನುವುದು ಈ ಧಾರವಾಹಿಯಿಂದ ಮಾತ್ರ ಬಂತಾ ಎಂದು ನಿರ್ದೇಶರ ವಿರುದ್ಧ ವಾಗ್ದಾಳಿ ನಡೆಸಿದರು.

ಜೊತೆ ಜೊತೆಯಲಿ ಧಾರವಾಹಿಯಿಂದ ಅನಿರುದ್ಧ್​ ಮನೆ ಮನೆಗೆ ತಲುಪಿದ್ದಾನೆ ಇದಕ್ಕೆ ನಾನು ಅಭಾರಿ, ಅಭಿಮಾನಿಗಳು ಕೂಟ ವಿಲನ್ ಪಾತ್ರ ಬೇಡ ಎಂದು ಮನವಿ ಮಾಡಿಕೊಂಡಿದ್ದರು, ಅಲ್ಲದೇ ಆರ್ಯವರ್ಧನ್ ಯಾವುದೇ ಕಾರಣಕ್ಕೂ ವಿಲನ್ ಮಾಡಲ್ಲ ಎಂದು ಹೇಳಿದ್ದರು. ಆದರೆ ವಿಲನ್ ಮಾಡಲು ಹೊರಟಿದ್ದಾರೆ ಎಂದರು.

ರಾತ್ರಿ-ಹಗಲು ಎನ್ನದೇ ಶೂಟಿಂಗ್ ನಲ್ಲಿ ಭಾಗಿಯಾಗಿದ್ದೇನೆ. ಒಂದು ವರ್ಷ ಆದ ಮೇಲೆ ನನ್ನ ಸಂಬಳ ಜಾಸ್ತಿ ಮಾಡಿ ಎಂದಿದ್ದೇನೆ ಅದು ನಿಜ. ಸಂಬಳ ಜಾಸ್ತಿ ಕೇಳಿದ ತಕ್ಷಣ ಆಯ್ತು ಎಂದರು. ಕೊರೊನಾ ಟೈಮ್​ನಲ್ಲಿ ಅರ್ಧ ಸಂಬಳ ಕಟ್​ ಹೇಳದೆ ಕೇಳದೆ ಕಟ್ ಮಾಡಿದರು.

RELATED ARTICLES

Related Articles

TRENDING ARTICLES