ಹಾಸನ: ಸಿದ್ಧರಾಮೋತ್ಸವ ಕಾರ್ಯಕ್ರಮದ ನಂತರ ಎರಡು ಪಕ್ಷಗಳು ಹತಾಷರಾಗಿವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಹರದನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್,ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ಇಂತಹ ಸಿದ್ಧರಾಮೋತ್ಸವಗಳು ಎಷ್ಟು ನಡೆದಿಲ್ಲ. ನಾವು ಕಾಣದೆ ಇರುವ ಸಿದ್ಧರಾಮೋತ್ಸವನಾ, ಎಂಥೆಂತ ಸಮಾವೇಶಗಳನ್ನು ಎಷ್ಟು ಪಕ್ಷಗಳು ಮಾಡಿಲ್ಲ. ಸುಮ್ಮನೆ ಅವರ ಚಪಲಕ್ಕೆ ಹೇಳಿಕೊಳ್ಳುತ್ತಾರೆ. ಇಂತಹ ಉತ್ಸವಗಳಿಂದ ಜನ ಓಟು ಹಾಕುತ್ತಾರೆ ಅಂತ ತಿಳ್ಕಂಡಿದ್ದರೆ, ಭ್ರಮಾ ಲೋಕದಲ್ಲಿ ಇದ್ದಾರೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ಸಹಕಾರ ನೀಡುತ್ತೇನೆ ಎಂಬ ವಿಚಾರವಾಗಿ ಪ್ರತಿಕ್ರಿಯಸಿದ ಹೆಚ್ಡಿಕೆ ನಾನು ನಂಜಾವದೂತ ಸ್ವಾಮೀಗಳು ಏನು ಹೇಳಿದ್ದಾರೆ ಅದಕ್ಕೆ ಹಿನ್ನೆಲೆಯಾಗಿ ಹೇಳಿದ್ದೇನೆ. ಯಾರು ಬೇಕಾದರೂ ಇವತ್ತು ಮುಖ್ಯಮಂತ್ರಿ ಆಗಬೇಕಾದರೆ ಭಗವಂತನ ಆಶೀರ್ವಾದ ಬೇಕು. ಆ ಭಗವಂತ ಆಶೀರ್ವಾದ ಕೊಟ್ಟಾಗ ನಮ್ಮದು ಸಹಕಾರ ಇದೆ ಅಂತ ಹೇಳಿದ್ದೇನೆ. ನಮ್ಮ ಪಕ್ಷವನ್ನು ನಾನು ಸಂಘಟನೆ ಮಾಡುತ್ತಿದ್ದೇನೆ, ಅವರ ಪಕ್ಷವನ್ನು ಅವರು ಸಂಘಟನೆ ಮಾಡುತ್ತಿದ್ದಾರೆ.
ನಮ್ಮ ನಂಜಾವಧೂರ ಸ್ವಾಮಿಗಳು ಮುಖ್ಯಮಂತ್ರಿ ಸ್ಥಾನ ಬಲಕ್ಕೆ ಅಥವಾ ಎಡಕ್ಕೆ ಸಿಕ್ಕಿದರು ಪರ್ವಾಗಿಲ್ಲ ಅಂಥ ಹೇಳಿದ್ದಾರೆ. ಆ ಭಗವಂತನ ಇಚ್ಛೆ ಏನು ಇದಿಯೋ, ಯಾರಿಗೆ ಗೊತ್ತು ಅನ್ನೋದನ್ನ ಹೇಳಿದ್ದೇನೆ. ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆಂದು ಹೋರಾಟ ಮಾಡುತ್ತಿದ್ದೇನೆ ಎಂದರು.
ಇನ್ನು ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಅವರ ಆಸೆಗೆ ನಾನ್ಯೇಕೆ ನಿರಾಸೆ ತರಬೇಕು, ಅದಕ್ಕೆ ನಾನು ಹೇಳಿದ್ದೇನೆ ಅಷ್ಟೇ.