ಚಾಮರಾಜಪೇಟೆ : ಆಟದ ಮೈದಾನ ತಮ್ಮದಲ್ಲದ್ದಿದ್ದಾಗ ಎಲ್ರೂ ಜೊತೆಯಾಗಿದ್ರು. ಎಲ್ಲರ ಹೋರಾಟದಿಂದ ಮೈದಾನವನ್ನು ಕಂದಾಯ ಇಲಾಖೆ ತನ್ನ ಅಧೀನಕ್ಕೆ ತೆಗೆದುಕೊಂಡಿದೆ. ಇದೇ ಸಂತೋಷದಲ್ಲಿ ಸ್ವಾತಂತ್ರ್ಯ ದಿನಾಚರಣೆಯೂ ಆಗಿದೆ. ಈಗ ಗಣೇಶಮೂರ್ತಿ ಇಟ್ಟು ಸಂಭ್ರಮಿಸುವ ದಿನ ಹತ್ತಿರವಾಗ್ತಾಯಿರುವಾಗ ಒಗ್ಗಟ್ಟಿನಲ್ಲಿ ಒಡಕುಂಟಾಗಿದೆ. ಚಾಮರಾಜಪೇಟೆ ನಾಗರಿಕರ ಹಿತರಕ್ಷಣಾ ವೇದಿಕೆ ಒಡೆದು ಇಬ್ಭಾಗವಾಗಿದ್ದು, ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ವೇದಿಕೆ ತೊರೆದು ಚಾಮರಾಜಪೇಟೆ ಗಣೇಶೋತ್ಸವ ಸಮಿತಿ ಸೇರಿದ್ದಾರೆ.
ಈ ಒಡಕಿನ ಸಂಬಂಧ ಅಧ್ಯಕ್ಷ ರಾಮೇಗೌಡ ಅವರನ್ನು ಕೇಳಿದ್ರೆ, ರುಕ್ಮಾಂಗದ ಯಾಕೆ ಹೀಗೆ ಹೇಳಿಕೆ ನೀಡಿದ್ರು ಗೊತ್ತಿಲ್ಲ. ನನ್ನ ಕರೆಗೂ ಉತ್ತರ ನೀಡ್ತಾಯಿಲ್ಲ. ಬಹುಶಃ ಇದು ಜಮೀರ್‌ರವರು ಮಾಡಿಸಿರಬಹುದು, ಇಲ್ಲ ಬಿಜೆಪಿಯವರು ಮಾಡಿಸಿರಬಹುದು ಎಂದು ಆರೋಪಿಸಿದ್ರು.
ಇನ್ನೂ ಈ ಒಕ್ಕೂಟದ ಒಡಕಿನ ಮಧ್ಯೆಯೇ ಎರಡು ತಂಡಗಳು ಗಣೇಶ ಕೂರಿಸಲು ಮುಂದಾಗಿದ್ದು, ರಾಮೇಗೌಡ್ರು, ನಮ್ಮ ಜೊತೆ ಸಮಿತಿ ಬರಲಿ ಅಂತಾರೆ. ಆದ್ರೆ, ಸಮಿತಿಯವರು ನಾವು ಆಗಸ್ಟ್ 31ರಿಂದ ಸೆಪ್ಟೆಂಬರ್ 10ರವರೆಗೆ ಅದ್ಧೂರಿ ವಿನಾಯಕ ಮಹೋತ್ಸವ ಮಾಡ್ತೀವಿ, 31ಕ್ಕೆ ಬೆಳಗ್ಗೆ 9ಗಂಟೆಗೆ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸೆಪ್ಟೆಂಬರ್ 10 ರಂದು ಅದ್ಧೂರಿ ಮೆರವಣಿಗೆ ಮಾಡ್ತೀವಿ ಅಂತಾ ಇಂದು ಪೋಸ್ಟರ್ ಬಿಡುಗಡೆ ಮಾಡಿದ್ರು.
ಒಟ್ನಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಾದವರ ಮಧ್ಯೆಯೇ ಒಡಕುಂಟಾಗಿದ್ದು, ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಅಂತಾ ಕಾದು ನೋಡಬೇಕಿದೆ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು