Wednesday, January 22, 2025

ಈ ಬಾರಿಯ ಹುಟ್ಟುಹಬ್ಬ ಆಚರಿಸುವುದು ಬೇಡ, ಅಭಿಮಾನಿಗಳಲ್ಲಿ ಮನವಿ ಮಾಡಿದ ಡಾಲಿ.!

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ ನಟ ಧನಂಜಯ್ ಈ ಬಾರಿ ಹುಟ್ಟುಹಬ್ಬ ಅಚರಿಸದಿರಲು ಸಾಮಾಜಿಕ ಜಾಲತಾಣ ಮೂಲಕ ಹೇಳಿಕೊಂಡಿದ್ದಾರೆ.

ಅಗಸ್ಟ್​ 23 ರಂದು, ಡಾಲಿ ಧನಂಜಯ ಅವರು 36 ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕಳೆದು ಎರಡು ಕೊರೊನಾದಿಂದ ಹುಟ್ಟು ಹಬ್ಬ ಆಚರಿಸಲಾಗಿಲ್ಲ. ಈ ವರ್ಷ ಇಡೀ ರಾಜ್ಯವೇ ಪುನೀತ್​ ಅಗಲಿಕೆ ನೋವು ಇದೆ. ಹೀಗಾಗಿ ಈ ಬಾರಿ ಹುಟ್ಟು ಆಚರಿಸುವುದು ಬೇಡ ಎಂದು ಧನಂಜಯ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಹುಟ್ಟು ಹಬ್ಬದ ಪ್ರಯುಕ್ತವಾಗಿ ಅಭಿಮಾನಿಗಳು ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರ ಹಮ್ಮಿಕೊಂಡಿದ್ದಾರೆ. ಈ ವರ್ಷ ನಟ ಶಿವರಾಜ್​ಕುಮಾರ್​ ಅವರು ಸಹ ಹುಟ್ಟು ಹಬ್ಬ ಆಚರಿಸಿಲ್ಲ. ಎಲ್ಲರೂ ಸೇರಿ ಒಳ್ಳೆಯ ಕೆಲಸ ಮೂಲಕ ಹುಟ್ಟು ಹಬ್ಬ ಆಚರಿಸೋಣ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES