Monday, December 23, 2024

ಕನಸುಗಾರನ​ ಹಿರಿಯ ಪುತ್ರನಿಗೆ ಒಲಿದ ಕಂಕಣ ಭಾಗ್ಯ

ಕ್ರೇಜಿಸ್ಟಾರ್​ ವಿ.ರವಿಚಂದ್ರನ್​ ಮನೆಯಲ್ಲಿ ಮದ್ವೆ ಸಂಭ್ರಮ ಮನೆ ಮಾಡಿದೆ. ರವಿ ಬೋಪಣ್ಣ ಚಿತ್ರದ ಗುಂಗಿನಲ್ಲಿದ್ದ ರವಿಮಾಮ, ಮಗನ ಮದ್ವೆ ಸಂಭ್ರಮವನ್ನು ಅದ್ಧೂರಿಯಾಗಿ ಮಾಡ್ತಿದ್ದಾರೆ. ಪುಟ್ನಂಜನ ಹಿರಿಯ ಪುತ್ರ ಮನೋರಂಜನ್​ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಈ ಸಡಗರ, ಸಂಭ್ರಮಕ್ಕೆ ಇಡೀ ಸ್ಯಾಂಡಲ್​​ವುಡ್​ ಸಾಕ್ಷಿಯಾಗಲಿದೆ.

ರವಿಮಾಮನ ಮನೆಯಲ್ಲಿ ಮಾಂಗಲ್ಯಂ ತಂತು ನಾನೇನಾ

ಸ್ಯಾಂಡಲ್​ವುಡ್​​ನ ಕನಸುಗಾರ ವಿ.ರವಿಚಂದ್ರನ್​ ಫ್ಯಾಮಿಲಿ ಹ್ಯಾಪಿ ಮೂಡ್​ನಲ್ಲಿದೆ. ಇತ್ತೀಚೆಗೆ ಮುದ್ದಿನ ಮಗಳ ಮದ್ವೆಯನ್ನು ಎಲ್ರು ಕಣ್ಣು ಬಿಟ್ಟು ನೋಡುವಂತೆ ಮಾಡಿದ್ದ ಕ್ರೇಜಿಸ್ಟಾರ್​​ ಮತ್ತೊಂದು ಸಂತಸದ ಕ್ಷಣದ ಹೊಸ್ತಿಲಲ್ಲಿದ್ದಾರೆ. ಕ್ರೇಜಿಸ್ಟಾರ್​ ಹಿರಿಯ ಪುತ್ರ ಮನೋರಂಜನ್​​ ವಿವಾಹವನ್ನು ಅದ್ಧೂರಿಯಾಗಿ ಆಚರಿಸ್ತಾ ಇದ್ದಾರೆ. ಹರಿಷಿಣ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ಜೋಡಿ ಆಗಸ್ಟ್​ 21 ಶುಭ ಮುಹೂರ್ತದಲ್ಲಿ ವರಿಸಲಿದ್ದಾರೆ.

ಇತ್ತೀಚೆಗೆ ಮನು ಮದ್ವೆ ಆಗ್ತಿದ್ದಾರೆ ಅನ್ನೋ ಸುದ್ದಿ ಹೊರ ಬಿದ್ದಿತ್ತು. ಮದ್ವೆಯಾಗ್ತಿರೋ ಸುದ್ದಿ ಕುರಿತಂತೆ ಟೈಮ್ಸ್​ ಆಫ್​ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮನು ಮದ್ವೆ ಕುರಿತು ಮಾತನಾಡಿದ್ರು. ಆಗಸ್ಟ್​​ 21ಕ್ಕೆ ಸಂಗೀತಾ ಕೈ ಹಿಡಿತಿರೋದಾಗಿ ಖಾತ್ರಿ ಪಡಿಸಿದ್ರು. ಮದ್ವೆ ತುಂಬಾ ಸಿಂಪಲ್​ ಆಗಿ ನಡೆಯಲಿದೆ. ಫ್ಯಾಮಿಲಿಗೆ ತೀರಾ ಹತ್ತಿರವಾದವ್ರು ಮದ್ವೆಯಲ್ಲಿ ಪಾಲ್ಗೊಳಲಿದ್ದಾರೆ ಎಂದಿದ್ರು. ಇದೀಗ ಮನು ಮದ್ವೆಗೆ ಎಲ್ಲಾ ಸಿದ್ಧತೆಗಳು ನಡೀತಿದ್ದು ಕಂಕಣ ಭಾಗ್ಯಕ್ಕೆ ಕ್ಷಣಗಣನೆ ಶುರುವಾಗಿದೆ.

  • ಅರೇಂಜ್​ ಮ್ಯಾರೇಜಾ..? ಲವ್​ ಮ್ಯಾರೇಜಾ..? ಮನು ಸ್ಪಷ್ಟನೆ
  • ಮನು ಜೋಡಿಗೆ ಚಿರಂಜೀವಿ, ರಜಿನೀಕಾಂತ್​ ಆಶೀರ್ವಾದ..?

ಮನು ಮದ್ವೆ ಸುದ್ದಿ  ದಿಡೀರ್​ ಆಗಿ ಕೆಳಿಬರ್ತಿದ್ದಂತೆ ಸ್ಯಾಂಡಲ್​ವುಡ್​ನಲ್ಲಿ ಹಲವು ಸುದ್ದಿಗಳು ಹರಿದು ಬಂದ್ವು. ಮನು ಲವ್​​​ ಮ್ಯಾರೆಜ್​ ಆಗ್ತಿದ್ದಾರೆ. ಹುಡುಗಿ ಜತೆ ಲಾಂಗ್​ ರಿಲೇಶನ್​ಶಿಪ್​ ಇತ್ತು. ಈಗ ಅಪ್ಪನನ್ನು ಒಪ್ಪಿಸಿ ಸಿಂಪಲ್​​ ಮದ್ವೆ ಆಗ್ತಿದ್ದಾರೆ ಅಂತಾ. ಆದ್ರೆ, ಇವೆಲ್ಲಾ ಪೊಳ್ಳು ಸುದ್ದಿಗಳು. ದೂರದ ಸಂಬಂಧಿ ಸಂಗೀತಾ ಅವ್ರ ಬಗ್ಗೆ ತುಂಬಾ ದಿನಗಳ ಹಿಂದಯೇ ಪ್ರಪೋಸಲ್​ ಬಂದಿತ್ತಂತೆ. ಎರಡು ಕುಟುಂಬಗಳು ಒಪ್ಪಿ ಮದ್ವೆಯ ಹಂತಕ್ಕೆ ಬಂದು ನಿಂತಿದೆ.

ಆಗಸ್ಟ್ 21 ರಂದು ಮದ್ವೆ ನಡೆಯಲಿದ್ದು, ಆಗಸ್ಟ್​ 22ಕ್ಕೆ ರಿಸೆಪ್ಶನ್​ ಇರಲಿದೆ. 2019ರಲ್ಲಿ  ಕ್ರೇಜಿಸ್ಟಾರ್​ ಪುತ್ರಿ ದೀಪಾಂಜಲಿಯ ಮದ್ವೆಯನ್ನು ಗ್ರ್ಯಾಂಡ್​ ಆಗಿ ಮಾಡಿದ್ದ ರವಿಮಾಮ, ರಜನೀಕಾಂತ್​​​, ಮೆಗಾಸ್ಟಾರ್​ ಚಿರಂಜೀವಿ,ಯಶ್​ ಸೇರಿ ಮುಂತಾದ ಸ್ಟಾರ್​ ಕಲಾವಿದರನ್ನು ಆಹ್ವಾನಿಸಿದ್ರು. ಪುಟ್ನಂಜನ ಪ್ರೀತಿಯ ಕರೆಗೆ ಓಡಿ ಬಂದಿದ್ದ ರಜನೀಕಾಂತ್​​​ ಹಾಗೂ ಚಿರಂಜೀವಿ ತಮ್ಮ ಅಮೂಲ್ಯ ಸಮಯವನ್ನು ದೀಪಾಂಜಲಿ ಮದ್ವೆಗೆ ಮೀಸಲಿಟ್ಟಿದ್ರು.

ಅಂತೂ 2017 ರಲ್ಲಿ ಸಾಹೇಬ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದ ಮನೋರಂಜನ್​​ ಬೃಹಸ್ಪತಿ, ಮುಗಿಲ್​ ಪೇಟೆ ಸಿನಿಮಾಗಳ ಮೂಲಕ ಕನ್ನಡ ಸಿನಿಲೋಕದಲ್ಲಿ ಹೆಸ್ರು ಮಾಡಿದ್ದಾರೆ. ಇದೀಗ ಕನ್ನಡ ಸಿನಿಲೋಕದಿಂದ ಸಂಸಾರ ಲೋಕಕ್ಕೆ ಜಿಗಿಯುತ್ತಿರುವ ಮನೋರಂಜನ್​ ದಾಂಪತ್ಯ ಜೀವನಕ್ಕೆ ಎಲ್ಲರೂ ಶುಭ ಕೋರೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES