Thursday, December 19, 2024

ರಾಷ್ಟ್ರಧ್ವಜಕ್ಕೆ ಅಪಮಾನ: ಶಿಕ್ಷಕ ಹಾಗೂ ಶಾಲಾ ಸಮಿತಿ ಅಧ್ಯಕ್ಷನ ವಿರುದ್ಧ ದೂರು ದಾಖಲು

ಹುಬ್ಬಳ್ಳಿ : ರಾಷ್ಟ್ರಧ್ವಜ ಉಲ್ಟಾ ಹಾರಿಸಿದ ಪ್ರಕರಣದ ಹಿನ್ನೆಲೆಯಲ್ಲಿ, ಧ್ವಜ ಕಟ್ಟಿದ ದೈಹಿಕ ಶಿಕ್ಷಕ ಹಾಗೂ ಧ್ವಜಾರೋಹಣ ಮಾಡಿದವರ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ಆಗಷ್ಟ್15 ರಂದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಅಂಬೇಡ್ಕರ್ ಪ್ರೌಢ ಶಾಲೆಯಲ್ಲಿ, ದೈಹಿಕ ಶಿಕ್ಷಕ ಪ್ರಕಾಶ ಕುಂಬಾರ ಹಾಗೂ ಶಾಲಾ ಸಮಿತಿ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ಉಲ್ಟಾ ಧ್ವಜ ಹಾರಿಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ.

ಸ್ವಾತಂತ್ರ್ಯೋತ್ಸವದ ದಿನದಂದು ಉಲ್ಟಾ ಧ್ವಜಾರೋಹಣ ಮಾಡಿದ್ದ ಲಿಂಗರೆಡ್ಡಿ ನಡುವಿನಮನಿ, ಉಲ್ಟಾ ಧ್ವಜ ಕಟ್ಟಿದ್ದ ದೈಹಿಕ ಪ್ರಕಾಶ ಕುಂಬಾರ. ಈ ಇಬ್ಬರ ವಿರುದ್ಧ, ರಾಷ್ಟ್ರಧ್ವಜ ಅಪಮಾನ ಕಲಂ 1971 ಅಡಿಯಲ್ಲಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಇನ್ನಾದ್ರೂ ಸಂಬಂಧಿಸಿದ ಅಧಿಕಾರಿಗಳು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಈ ಇಬ್ಬರು ಮೇಲೆ ಸೂಕ್ತ ಕ್ರಮಕ್ಕೆ ಮುಕ್ಕಲ್ ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES