Wednesday, January 15, 2025

ಹೆತ್ತ ತಾಯಿಗಾಗಿ ಗುಡಿ ನಿರ್ಮಿಸಿದ ಮಗ.!

ಶಿವಮೊಗ್ಗ: ಅದೆಷ್ಟೋ ಜನರು ತಮ್ಮ ತಂದೆ-ತಾಯಿ ಬದುಕಿದ್ದಾಗ ಸರಿಯಾಗಿ ನೋಡಿಕೊಳ್ಳದೇ, ತಿರಸ್ಕಾರ ಮನೋಭಾವದಿಂದ ಕಾಣುವುದು ನೋಡುತ್ತಲೇ ಬರುತ್ತಿದ್ದೆವೆ. ಅದೆಷ್ಟೋ ಜನರು ಕ್ಷುಲ್ಲಕ ಕಾರಣಕ್ಕೆ ಹೆತ್ತ ಕರುಳು ಎಂದು ಸಹ ನೋಡದೇ ಕೊಲೆ ಕೂಡ ಮಾಡಿ, ರಸ್ತೆಗೆ, ಅನಾಥಾಶ್ರಮಕ್ಕೆ ಬಿಟ್ಟು ಬರೋದು ಕೂಡ ನೋಡಿದ್ದೆವೆ. ಆದ್ರೆ, ಇಲ್ಲೊಬ್ಬ ಮಗನೊಬ್ಬ ತನ್ನ ತಾಯಿಗೋಸ್ಕರ ಗುಡಿಯೇ ನಿರ್ಮಾಣ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ನಿವಾಸಿ ಹಾಲೇಶ್ 7 ನೇ ತರಗತಿ ವ್ಯಾಸಾಂಗ ಮಾಡಿರುವ ಇವರು, ತನ್ನ ತಾಯಿಗೋಸ್ಕರ ವಿದ್ಯಾಭ್ಯಾಸ ತ್ಯಜಿಸಿ, ಬಸವಪಟ್ಟಣದಿಂದ ಭದ್ರಾವತಿಯಲ್ಲಿ ಕೂಲಿ ಮಾಡಲು ನೆಲೆಸಿದ್ದ ತನ್ನ ತಾಯಿಯನ್ನು ಕಂಡರೆ, ಅಪಾರ ಪ್ರೀತಿ, ವಾತ್ಸಲ್ಯ, ಜೊತೆಗೆ ಭಕ್ತಿ ಕೂಡ. ತನ್ನ ತಾಯಿಯಲ್ಲೇ ದೇವರನ್ನು ಕಾಣುತ್ತಿದ್ದ ಹಾಲೇಶ್, ಒಂದು ಕ್ಷಣವೂ ತನ್ನ ತಾಯಿಯನ್ನು ಬಿಟ್ಟಿರುತ್ತಿರಲಿಲ್ಲವಂತೆ. ಕಳೆದ ಕೊರೋನಾ ಲಾಕ್ ಡೌನ್ ವೇಳೆ, ತನ್ನ ತಾಯಿಗೆ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ತನ್ನ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ವೇಳೆ ಹಾಲೇಶ್​ ಕೂಡ ಪಕ್ಕದ ಬೆಡ್ ನಲ್ಲಿ ದಾಖಲಾಗಿ, ತನ್ನ ತಾಯಿಯ ಸೇವೆ ಮಾಡಿದ್ದರು. ಕೊರೋನಾ ಸಂದರ್ಭದಲ್ಲಿ ತಂದೆ-ತಾಯಿ-ಪೋಷಕರನ್ನು ಆಸ್ಪತ್ರೆಗೆ ದಾಖಲು ಮಾಡಿ, ಬಳಿಕ ಅವರು ನಿಧನರಾದಾಗ ಹಣ ನೀಡಿ, ಅಂತ್ಯ ಸಂಸ್ಕಾರ ನೀವೆ ಮಾಡಿ ಎಂದು ಹೇಳಿದ ಅದೇಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದೆ ಇರುವಾಗ, ಈ ಹಾಲೇಶ್ ಮಾತ್ರ, ಆಸ್ಪತ್ರೆಯಲ್ಲಿ ತನ್ನ ತಾಯಿಯ ಪಕ್ಕದಲ್ಲೇ, ಮತ್ತೊಂದು ಬೆಡ್ ಬುಕ್ ಮಾಡಿಸಿ, ತಾನು ಕೂಡ ದಾಖಲಾಗಿ ಸೇವೆ ಮಾಡಿದ್ದರಂತೆ.

ಇದೇ ಹಾಲೇಶ್ ತನ್ನ ತಾಯಿಯನ್ನು ಕಳೆದುಕೊಂಡು ಇದೀಗ ಅವರಿಗಾಗಿಯೇ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಸುಂದರವಾದ ದೇವಾಲಯ ನಿರ್ಮಿಸಿ, ತಾಯಿಯನ್ನು ದಿನವೂ ನೆನೆಯುತ್ತಿದ್ದಾರೆ. ದಿನವೂ ಬಂದು ಪೂಜೆ ನೆರವೇರಿಸುತ್ತಿರುವ ಹಾಲೇಶ್, ದೂರದ ರಾಜಸ್ಥಾನದಿಂದ ಗ್ರಾನೈಟ್ ನಲ್ಲಿ ತನ್ನ ತಾಯಿಯ ಭಾವಚಿತ್ರವನ್ನು ರಚಿಸಿ ತರಿಸಿ, ಗುಡಿಯಲ್ಲಿರಿಸಿದ್ದಾರೆ.

ಹಾಲೇಶ್ ಅವರು ತಮ್ಮ ಸಣ್ಣದಾದ ತೋಟದಲ್ಲಿಯೇ, ತಾಯಿಯ ಗುಡಿಯನ್ನು ನಿರ್ಮಿಸಿ, ಅಲ್ಲಿ ತನ್ನ ತಾಯಿಗೆ ಇಷ್ಟವಾಗುತ್ತಿದ್ದ ಫಾಲ್ಸ್, ವಿವಿಧ ಜಾತಿಯ ಹೂವಿನ ಸಸಿಗಳನ್ನು ನೆಟ್ಟು ಕೇವಲ ಗುಡಿಯೊಂದೇ ನಿರ್ಮಾಣ ಮಾಡದೇ ತನ್ನ ತಾಯಿಯ ಆಸೆಯನ್ನೆಲ್ಲಾ, ಅವರನ್ನು ಕಳೆದುಕೊಂಡ ಬಳಿ ಈಡೇರಿಸುತ್ತಿದ್ದಾರೆ. ತನ್ನ ತಾಯಿಯ ಆಸೆಯಂತೆ, ಈ ಸ್ಥಳ ಇರಬೇಕೆಂಬ ಆಸೆ ಹಾಲೇಶ್ ರದ್ದಾಗಿದೆ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ, ಶಿವಮೊಗ್ಗ.

RELATED ARTICLES

Related Articles

TRENDING ARTICLES