Monday, December 23, 2024

2ನೇ ಏಕದಿನ ಪಂದ್ಯ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 5 ವಿಕೆಟ್​ಗಳ ಜಯ

ನವದೆಹಲಿ: ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳಿಂದ ಜಯಗಳಿಸಿದೆ. ಜಿಂಬಾಬ್ವೆಯ ರಾಜಧಾನಿ ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 38.1 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 161 ರನ್ ಸೇರಿಸಿತು. ಜಿಂಬಾಬ್ವೆ ಪರ ಸೀನ ವಿಲಿಯಮ್ಸ್​ 42, ರ್ಯಾನ್ ಬುರ್ಲ್​​ 39 ರನ್ ಗಳಿಸಿದರು. ಭಾರತದ ಪರ ಶಾರ್ದುಲ್ ಠಾಕೂರ್​ 3 ವಿಕೆಟ್​ ಪಡೆದು ಮಿಂಚಿದರು.

ಈ ಗುರಿ ಬೆನ್ನತ್ತಿದ್ದ ಭಾರತ ತಂಡ 25.4 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 167 ಸೇರಿಸಿತು. ಈ ಮೂಲಕ ಭಾರತ ತಂಡ 6 ವಿಕೆಟ್​ಗಳಿಂದ ಜಯಗಳಿಸಿತು. ಭಾರತದ ಪರ ಶಿಖರ್​ ಧವನ್ 33, ಶುಭಮನ ಗಿಲ್ 33, ದೀಪಕ ಹೂಡಾ 25, ಸಂಜು ಸ್ಯಾಮ್ಸನ್​ 43 ರನ್​ ಗಳಿಸಿ ಮಿಂಚಿದರು.

RELATED ARTICLES

Related Articles

TRENDING ARTICLES