ಮೈಸೂರು: ಕೊಡಗಿನ ಪ್ರವಾಹದ ವೇಳೆ ಸಿದ್ದರಾಮಯ್ಯ ಅಲ್ಲಿಗೆ ಹೋಗಿ ಜನರ ಕಷ್ಟ ಕೇಳಿದ್ದರೆ ಜನ ಅವರ ಮೇಲೆ ಮೊಟ್ಟೆ ಎಸೆಯುತ್ತಿರಲಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಮೊಟ್ಟೆ ಎಸೆದ ಬಗ್ಗೆ ಸಮರ್ಥನೆ ಮಾಡಿಕೊಂಡರು.
ಕೊಡಗಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ಬಗ್ಗೆ ಮಾತನಾಡಿದ ಎಸ್.ಟಿ ಸೋಮಶೇಖರ್, ಗಾಂಧಿ ಹತ್ಯೆಯ ವಿಚಾರವೇ ಬೇರೆ ಮೊಟ್ಟೆ ಎಸೆದ ಪ್ರಕರಣವೇ ಬೇರೆ, ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದ್ದು ಕೊಡಗು ಪ್ರವಾಹದಿಂದ ತತ್ತರಿಸಿದ್ದಾಗ. ಸಿದ್ದರಾಮಯ್ಯ ಅಲ್ಲಿಗೆ ಹೋಗದೆ ಇರೋ ಕಾರಣ ಕೊಡಗಿನ ಜನಕ್ಕೆ ಇವರ ಮೇಲೆ ಆಕ್ರೋಶವಿದೆ.
ಕೊಡಗಿನ ಜನ ಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಹುಟ್ಟುಹಬ್ಬದ ಸಂಭ್ರಮೋತ್ಸದ ಸುಖದ ಸುಪ್ಪತ್ತಿಗೆಯಲ್ಲಿ ಮೈ ಮರೆತಿದ್ದರು. ಕಷ್ಟ ಕಾಲದಲ್ಲಿ ನಮ್ಮ ಬಳಿಗೆ ಬರಲಿಲ್ಲ. ಈಗ ಬಂದಿದ್ದಾರೆ ಅಂತಾ ಜನ ಆಕ್ರೋಶದಲ್ಲಿ ಮೊಟ್ಟೆ ಎಸೆದಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಗೌರವ ತೂಕವಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರು ಆಡು ಮಾತುಗಳಿಗೆ ತೂಕ ಇರುತ್ತಿತ್ತು. ಕೋವಿಡ್ ನಂತರದಲ್ಲಿ ಸಿದ್ದರಾಮಯ್ಯ ಬರೀ ವಿವಾದಗಳ ಮಾತು ಆಡುತ್ತಿದ್ದಾರೆ. ಹತ್ಯೆ ಮಾಡುವಂತಹ ವಾತಾವರಣ, ಕಾಲ ಕರ್ನಾಟಕಕ್ಕೆ ಇನ್ನೂ ಬಂದಿಲ್ಲ. ಸಿದ್ದರಾಮಯ್ಯ ಅವರಿಗೆ ಅಭ್ರದತೆ ಬೇಡ. ಅವರು ಅರಾಮಾಗಿ ಅವರ ಕೆಲಸ ಅವರು ಮಾಡಲಿ
ಪೊಲೀಸರು ಅವರಿಗೆ ಭದ್ರತೆ ಕೊಡುತ್ತಾರೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.