Tuesday, January 14, 2025

ಯಾವ ಪಶ್ಚಾತ್ತಾಪದ ನುಡಿಗಳನ್ನ ನಾನು ಮಾತನಾಡಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ರಂಭಾಪುರಿ ಶ್ರೀಗಳ ಮುಂದೆ ಮಾಜಿ ಸಿಎಂ ಸಿದ್ಧರಾಮಯ್ಯ ಪಶ್ಚಾತಾಪ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ ನಾನು ಯಾವುದೇ ಪಶ್ಚಾತಾಪದ ನುಡಿಗಳನ್ನಾಡಿಲ್ಲ ಎಂದಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿ, ನಾನು ಯಾವ ಪಶ್ಚಾತ್ತಾಪನೂ ಹೇಳಿಲ್ಲ. ಸ್ವಾಮೀಜಿಗೆ ವಿವರಣೆ ನೀಡಿದ್ದೇನೆ ಅಷ್ಟೇ. ಧರ್ಮ ಒಡೆಯುವ ಉದ್ದೇಶ ನನ್ನಲ್ಲಿ ಇರಲಿಲ್ಲ. ಶಾಮನೂರು, ಮಾತೆ ಮಹಾದೇವಿ ಒಂದು ಲೆಟರ್ ಕೊಟ್ಟಿದ್ರು. ನಾಗಮೋಹನದಾಸ್ ಕಮಿಟಿ ರಿಪೋರ್ಟ್ ಇತ್ತು.

ಧರ್ಮ ಒಡೆಯೋ ಉದ್ದೇಶ ಇಲ್ಲ ಅಂತ ಹೇಳಿದೀನಿ ಅಷ್ಟೇ. ಯಾರು ಹೇಳಿದ್ದು ಇದು ವಿವಾದ ಅಂತ. ನೀವೇ ವಿವಾದ ಮಾಡ್ತಾ ಇರೋದು ಈಗ. ಸ್ವಾಮೀಜಿ ಪಶ್ಚಾತ್ತಾಪ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಸಮಜಾಯಿಷಿ ಉತ್ತರ ನೀಡಿದರು.

ಇನ್ನ ಕೊಡಗಿನಲ್ಲಿ ಮಳೆಯಿಂದ ಹಾನಿಯಾಗಿದೆ ಜಿಲ್ಲಾ ಮಂತ್ರಿಗಳು ಕೊಡಗಿನಲ್ಲೇ ಕೂತಿದಾರಾ, ಸಿಎಂ ಹೋಗಿದಾರಾ ಅಲ್ಲಿಗೆ, ಪರಿಹಾರ ಕೊಟ್ಟಿದಾರಾ, ಸೋಮಶೇಖರ್ ಗೆ ಪರಿಹಾರ ಕೊಡೋಕೆ ಹೇಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES