Sunday, January 19, 2025

ಒಂದೇ ದಿನ ಕೆಲಸ ಮಾಡಿ ಮಾಲಿಕೆ ಕೊಂದ ನೇಪಾಳ ಗ್ಯಾಂಗ್

ಬೆಂಗಳೂರು: ಒಂದೇ ದಿನ ಕೆಲಸ ಮಾಡಿ ಮಾಲೀಕೆ ವೃದ್ಧೆಯನ್ನ ಸೆಕ್ಯೂರಿಟಿ ಗಾರ್ಡ್​ ಕೊಂದಿರುವ ಘಟನೆ ಹೆಚ್​.ಎಸ್​​.ಆರ್​ ಲೇಔಟ್ ಪೊಲೀಸ್​ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.

ನೇಪಾಳ ಮೂಲದ ಮುಖೇಶ್ ಕಡ್ಕಾ, ಕಮಲ್, ಕೇಶವ್, ಕಡಕ್ ಸಿಂಗ್, ಗಜೇಂದ್ರ, ಶಿಬು ಕಟಾಯತ್ ಬಂಧಿತರು ಆರೋಪಿಗಳು, ಕಳ್ಳತನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಬೆಂಗಳೂರಿನ ಹೆಚ್​ಎಸ್​​ಆರ್​ ನ ಲೇಔಟ್​ ನ ವ್ಯಾಪ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ನೇಮಕವಾಗಿದ್ದರು.

ವೃದ್ಧೆ ಜಯಶ್ರೀ ಸೆಕ್ಯೂರಟಿ ಗಾರ್ಡ್​​ಗಾಗಿ ಹುಡುಗಾಡ ನಡೆಸಿದ್ದರು. ಆಗ ನೇಪಾಳ ಮೂಲದವ ಮನೆ ಕೆಲಸದವರಾಗಿ ಈ ಕಳ್ಳರು ಎಂಟ್ರಿ ಕೊಟ್ಟಿದ್ದರು. ಒಂದು ದಿನ ಕೆಲಸ ಮಾಡಿ ಈ ವೃದ್ದೆಯನ್ನ ಕೊಂದು ಮರಳಿ ನೇಪಾಳದತ್ತ ತೆರಳುತ್ತಿದ್ದ ವೇಳೆಯಲ್ಲಿ ಈ ಘಟನೆ ಬೆಳಕಿ ಬಂದಿದೆ. ಸದ್ಯ ಹೆಚ್​.ಎಸ್​​.ಆರ್​ ಲೇಔಟ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES