Sunday, December 22, 2024

ಹುಲಿಹೈದರ್ ಗಲಾಟೆ ಪ್ರಕರಣ: 121 ಗ್ರಾಮಸ್ಥರ ವಿಚಾರಣೆ, 60 ಜನರ ಬಂಧನ.!

ಕೊಪ್ಪಳ; ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಎರಡು ಸಮುದಾಯದ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವಿಗೀಡಾದ ಪ್ರಕರಣ ಕುರಿತು ಈ ವರೆಗೂ ಒಟ್ಟು 60 ಜನರ ಬಂಧನ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ.

ಆಗಸ್ಟ್ 11 ರಂದು ಹುಲಿಹೈದರ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಮಾರಾಮಾರಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿದ್ದರು. ಹಿನ್ನಲೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ 58 ಜನರ ವಿರುದ್ದ ಕೇಸ್ ದಾಖಲಾಗಿತ್ತು.

ಈ ವರೆಗೂ ಒಟ್ಟು ಈ ಕೇಸ್​ಗೆ ಸಂಬಂಧಿಸಿದಂತೆ 121 ಜನರನ್ನ ವಶಕ್ಕೆ ಪಡೆದಿದು ವಿಚಾರಣೆ ಮಾಡಲಾಗಿದೆ. 121 ಜನರಲ್ಲಿ ಗಲಾಟೆಗೆ ಕಾರಣರಾದ 60 ಜನರ ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. 61 ಜನರಿಗೆ ನೋಟಿಸ್ ಕೊಟ್ಟು ಪೊಲೀಸರು ವಾರ್ನ್ ಮಾಡಿದ್ದಾರೆ.

ಇನ್ನು ಘಟನೆಯಲ್ಲಿ ಯಾವುದೇ ಅಮಾಯಕರನ್ನು ಅರೆಸ್ಟ್ ಮಾಡಿಲ್ಲ. ಬಂಧಿತ 60 ಜನ ಮಾರಾಮಾರಿಯಲ್ಲಿ ಭಾಗಿಯಾದವರೇ. ಇನ್ನು ಪ್ರಕರಣದಲ್ಲಿ ಭಾಗಿಯಾದ 100 ಕ್ಕೂ ಜನರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ವಿಶೇಷ ಪೊಲೀಸ್ ತಂಡದಿಂದ 100 ಕ್ಕೂ ಹೆಚ್ಚು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂದರು.

ಕೇಸ್​ಗೆ ಸಂಬಂಧಿಸಿದ ಆರೋಪಿಗಳು ರಾಜ್ಯದಲ್ಲಿ ಅಲ್ಲದೇ, ಹೊರ ರಾಜ್ಯದಲ್ಲಿ ಬಚ್ಚಿಟ್ಟಿಕೊಂಡಿದ್ದಾರೆ. ಪೊಲೀಸ್ ತನಿಖಾ ತಂಡದಿಂದ ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

RELATED ARTICLES

Related Articles

TRENDING ARTICLES