ಬೆಂಗಳೂರು: ಇಂದು ಬೆಳಿಗ್ಗೆ ‘ಜೊತೆ ಜೊತೆಯಲಿ’ ಧಾರವಾಹಿ ನಿರ್ದೇಶಕರ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಸಾಲು ಸಾಲು ಆರೋಪ ಮಾಡಿದ್ದ ನಟ ಅನಿರುದ್ಧ್ ವಿರುದ್ಧ ನಗರದ ಉತ್ತರಹಳ್ಳಿಯ ಟೆಲಿವಿಷನ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಿರ್ದೇಶಕ ಆರೂರು ಜಗದೀಶ್ ಹಾಗೂ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ನಾನು ಕೆಲವು ಸಲ ಈ ಧಾರವಾಹಿ ಬೇಡ ಎಂದಿದ್ದೇನೆ. ಆದರೂ ನನ್ನನ್ನು ಚಾನಲ್ ಬೀಡುತ್ತಿಲ್ಲ. ಜೊತೆ ಜೊತೆಯಲಿ ಟಿಆರ್ಪಿ ಕಡಿಮೆ ಆಗಲು ಅನಿರುದ್ಧ್ ಅವರೆ ಕಾರಣ. ಈ ಧಾರವಾಹಿಗಾಗಿ ಎಷ್ಟೊಂದು ಹಣ ಹಾಕಿದ್ದೇವೆ ಎನ್ನುವುದು ನಮಗೆ ಮಾತ್ರ ಗೊತ್ತು ಎಂದು ನಟ ಅನಿರುದ್ದ್ ಪ್ರತ್ಯಾರೋಪಗಳಿಗೆ ಆರೂರು ಜಗದೀಶ್ ಸ್ಪಷ್ಟನೆ ನೀಡಿದರು.
ಈ ವರೆಗೂ ಜೊತೆ ಜೊತೆಯಲಿ ಧಾರವಾಹಿಗೆ 3 ಕೋಟಿ ರೂ ಹಣ ಹಾಕಿದ್ದೇನೆ. ಅದರಲ್ಲಿ ನನ್ನ ಸ್ವಂತದ್ದು 1ಕೋಟಿ, ಉಳಿದ 2 ಕೋಟಿ ಸಾಲ ಮಾಡಿದ್ದೇನೆ. ಆದರೂ ಧಾರವಾಹಿ ಮುನ್ನಡೆಸುತ್ತಿದ್ದೇನೆ.
ಅವ್ರ ಕೌಂಟರ್ ನೋಡಿದೆ ಮಕ್ಕಳ ನೋಡಿ ಆಣೆ ಮಾಡಿ ಅಂದ್ರು ಅದು ಎಮೋಷನ್. ನಾನು ಕೆಲಸದ ಆಣೆ ಮಾಡಿ ಮಾತನಾಡ್ತೀನಿ. ಈ ರೀತಿ ಘಟನೆ ತುಂಬಾ ಹಿಂದಿನದ್ದು, ಶೂಟಿಂಗ್ ಟೈಮ್ ಇರಬಹುದು. ಪದೇ ಪದೇ ಸಂಭಾಷಣೆಯ ಲೈನ್ ಚೇಂಜ್ ಮಾಡ್ತಾರೆ. ಇಡೀ ಸೀರಿಯಲ್ ಅವ್ರ ಮೇಲೆ ಮಾಡಬೇಕು ಅವ್ರೋರೋಬ್ರೆ ಇದೋದು ಅನ್ನೋ ತರ ಬಿಹೇವ್ ಮಾಡ್ತಾರೆ ಎಂದು ನಿರ್ದೇಶಕರು ಆರೋಪಿಸಿದರು.
ನಿರ್ಮಾಪಕರಿಗೆ ಸಾಥ್ ಕೊಡಬೇಕು ಅನ್ನೋ ಭಾವನೆ ಅನಿರುದ್ಧ್ ಅವ್ರಿಗಿಲ್ಲ. ಕೊರೊನಾ ಟೈಮ್ ನಲ್ಲಿ ಎಲ್ಲಾ ಆರ್ಟಿಸ್ಟ್ ಗಳಿಗೂ 15% ಕಟ್ ಮಾಡಿದ್ದೀವಿ. ನಾನು ಆಸ್ಪೇಟಲೈಜ್ ಆಗಿದ್ದೇ ನನಗೆ ಹೇಳಿದ್ರು ನನ್ನ ಸಂಭಾವನೆ ಕಟ್ ಮಾಡುವಾಗಿಲ್ಲ ಜಾಸ್ತಿ ಮಾಡಿ ಅಂತ ಕೇಳಿದ್ರು. ಸೀರಿಯಲ್ ಮಹಾಸಂಗಮ ಟೈಮ್ ನಲ್ಲಿ ಸ್ಯಾಲರಿ ಕಡಿಮೆ ಹಾಕಿದ್ದಾಕ್ಕೆ ಅನಿರುದ್ದ್ ಕಿರುಚಾಡಿದರು.
ನನಗೆ ಆಗಿರೋ ಪ್ರತಿ ನೋವನ್ನ ಚಾನೆಲ್ ಗಮನಕ್ಕೆ ತಂದಿದ್ದೀನಿ. ನಮ್ಮ ನಿರ್ಧಾರ ನನಗೆ ಸಾಕಾಗಿದೆ ನನ್ನ ಆರೋಗ್ಯ ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ. ನಾವು ಚಾನೆಲ್ ಇಬ್ರು ಸೇರಿ ಡಿಸೈಡ್ ಮಾಡಿದ್ದೀವಿ ಅವ್ರು ಸೀರಿಯಲ್ ಮುಂದುವರೆಸುವುದು ಬೇಡ ಅಂತ. ನನಗೆ ಧನ ಹಾನಿ ಮತ್ತು ಮಾನಹಾನಿ ಬಗ್ಗೆ ಜಗದೀಶ್ ವಿವರಿಸಿದರು.
ಒಂದು ದಿನ ಕ್ಯಾರವಾನ್ ಇಲ್ಲ ಅಂತ ಎದ್ದು ಹೋಗಿಬಿಟ್ರು. ಹೆಣ್ಣು ಮಕ್ಕಳ ಕೇರ್ ನಾವು ತಗೋತಿವಿ ಅವ್ರಿಗೆ ಯಾಕೆ ಅದು, ನನಗೆ ಆಗಿರೋ ಅವಮಾನ ನೋವು ಅನಿರುದ್ಧ್ ಸ್ಪಂದಿಸಲಿಲ್ಲ ಅಂದ್ರೆ ಹೇಗೆ. ಈ ಸೀರಿಯಲ್ ಮಧ್ಯಭಾಗದಲ್ಲಿ ಟಿಆರ್ ಪಿ ಕಡಿಮೆ ಮಾಡಲು ಅವ್ರೆ ಕಾರಣ ಎಂದು ಆರೋಪಿಸಿದರು.